ಸಂವಿಧಾನ ಹಕ್ಕುಗಳ ನಾಗರೀಕ ವೇದಿಕೆಯಿಂದ ಸಂಸದರ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ

Source: sonews | By Staff Correspondent | Published on 25th January 2020, 11:08 PM | State News |

ರಾಯಚೂರು: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಾದ ಎನ್.ಆರ್.ಸಿ,ಸಿಎಎ ಮತ್ತು ಎನ್‌ಪಿಆರ್ ಕಾಯ್ದೆಯನ್ನು ಜಾರಿಗೆ ವಿರೋಧಿಸಿ ಸಂವಿಧಾನ ಹಕ್ಕುಗಳ ನಾಗರೀಕ ವೇದಿಕೆ ಜ.೨೫ರಿಂದ ಸಂಸತ್ ಸದಸ್ಯರ ಕಛೇರಿ ಎದುರು ಅನಿರ್ಧಿಷ್ಟವಧಿ ಧರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಚಾಲಕ ಆರ್.ಮಾನಸಯ್ಯ ತಿಳಿಸಿದರು.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ದೇಶದೆಲ್ಲೆಡೆ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಸಾಕಷ್ಟು ಹೋರಾಟ ನಡೆಯುತ್ತಿವೆ.ಆದರೂ ಸಹ ಕೇಂದ್ರ ಸರ್ಕಾರ ಹೋರಾಟದ ಮನೋಭಾವನೆಗಳಿಗೆ ಸ್ಪಂದಿಸುತ್ತಿಲ್ಲ.ಬರೀ ಸಮರ್ಥನೆಯಲ್ಲಿ ತೊಡಗಿದೆ.ಬಿಜೆಪಿ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಹಮ್ಮಿಕೊಂಡ ರ‍್ಯಾಲಿಗಳು,ಸಮಾವೇಶಗಳು ಸಂಪೂರ್ಣವಾಗಿ ವಿಫಲವಾಗಿವೆ.

ಇದರ ಕುರಿತು ಸಾರ್ವಜನಿಕರು ಯಾರು ಬೆಂಬಲಿಸುತ್ತಿಲ್ಲ.ದೇಶದಲ್ಲಿನ 11 ರಾಜ್ಯಗಳು ಕಾಯ್ದೆಗಳ ಜಾರಿಗೆ ವಿರೋಧಿಸಿ ನಿರ್ಣಯವನ್ನು ಕೈಗೊಂಡಿವೆ.ಇದರ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಸಂವಿಧಾನದ ಪೀಠದಲ್ಲಿ ಅಳಡಿಸಿದ ಆಶಾಭಾವನೆಯನ್ನು ಮೂಡಿಸಿದೆ.
ದೇಶದ ಜನರು ಧರ್ಮಾತೀತವಾಗಿ ಹೋರಾಟಗಳು ನಡೆಯುತ್ತಿರುವ ಹೋರಾಟ ಭಾರತೀಯ ಜನರ ಹೋರಾಟವಾಗಿದೆ.ಇಂದು ಬೆಳಿಗ್ಗೆ ಗಣರಾಜ್ಯೋತ್ಸವದ ಧ್ವಜಾರೋಹಣದೊಂದಿಗೆ ಧರಣಿ ಆರಂಭವಾಗಲಿದೆ ಎಂದರು.

ಪೌರಕಾರ್ಮಿಕರು,ಪAಕ್ಚರ್‌ವಾಲಾ,ವಿದ್ಯಾರ್ಥಿಗಳು,ಮಹಿಳೆ,ಅಲೆಮಾರಿ,ರೈತರು,ಇನ್ನಿತರ ಕಾರ್ಮಿಕರು ಸೇರಿ ಪಂಜು ಹಚ್ಚುವ ಮೂಲಕ ಧರಣಿಯನ್ನು ಆರಂಭಿಸಲಾಗುತ್ತದೆ. ಈ ಧರಣಿಯಲ್ಲಿ ಪ್ರತಿದಿನ ಸಂಜೆ 5 ರಿಂದ 7 ಘಂಟೆಯ ವರೆಗೆ ಸಂಗೀತ,ನೃತ್ಯ,ವಾಧ್ಯ,ಕವಾಲಿ,ಭಜನೆ,ಡೊಳ್ಳಿನ ಪದ,ಕವಿಗೋಷ್ಠಿ ಸೇರಿದಂತೆ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಅನಿರ್ಧಿಷ್ಟವಧಿ ಧರಣಿಯನ್ನು ನಡಸಲಾಗುತ್ತದೆ.

ಹೋರಾಟಕ್ಕೆ ಬೆಂಬಲ ನೀಡುವ ಪ್ರಗತಿಪರ ಸಂಘಟನೆಗಳು ಸರತಿಯಂತೆ ಧರಣಿಯಲ್ಲಿ ಪಾಲ್ಗೊಳ್ಳಲಿವೆ, ಜಿಲ್ಲೆಯ ಜನರು ತಮ್ಮ ಸಹಕಾರ ನೀಡಬೇಕು ಎಂದು ಕೋರಿದರು.

ನಂತರ ಎಸ್.ಮಾರೆಪ್ಪ ವಕೀಲ ಮಾತನಾಡಿ ಪೌರತ್ವ ಕಾಯ್ದೆಯ ಕುರಿತಾಗಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿಸು ಅಧಿಕಾರವನ್ನು ಹೊಂದಿದೆ.ಕೇಶವಾನಂದ ಪ್ರಕರಣದಂತೆ ದೇಶದಲ್ಲಿ ಪೌರತ್ವ ಕಾಯ್ದೆಗಳ ಕುರಿತು ತೀವ್ರ ವಿರೋಧ ವ್ಯಕ್ತವಾಗುತ್ತಿದೆ.ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ,ಬಹು ರಾಷ್ಟ್ರೀಯ ಕಂಪನಿಗಳ ಪೂರಕವಾಗಿದ್ದು,ಇದನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದೆ ಎಂದು ಹೇಳಿದರು.

ಡಾ.ಚಂದ್ರಗಿರೀಶ ಮಾತನಾಡಿ,ರಾಜಕೀಯ ಪಕ್ಷಗಳು ಹೋರಾಟಕ್ಕೆ ಬೆಂಬಲಿಸುವ ಅಗತ್ಯ ಇಲ್ಲ, ಬದಲಾಗಿ ಪ್ರತ್ಯೇಕ ಹೋರಾಟಕ್ಕೆ ಮುಂದಾದಲ್ಲಿ ಸಂಘಟನೆಗಳು ಬೆಂಬಲಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಕಲವಲದೊಡ್ಡಿ,ಪರಶುರಾಮ ಹೆಚ್,ಖಾಜಾ ಅಸ್ಲಂಪಾಷ,ಕೆ.ಇ ಕುಮಾರ, ಅಹ್ಮದ್ ಇಕ್ಬಾಲ್, ಭೀಮೇಶ್ ಸೇರಿದಂತೆ ಇನ್ನಿತರರು ಇದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...