ಉಳ್ಳಾಲ‌ ಪೊಲೀಸರ ಕಾರ್ಯಾಚರಣೆ- ಅಕ್ರಮ ಮದ್ಯ ಸಾಗಾಟ- ಇಬ್ಬರ ಬಂಧನ

Source: SO News | By Laxmi Tanaya | Published on 12th September 2020, 3:32 PM | Coastal News | Don't Miss |

ಉಳ್ಳಾಲ : ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನ  ದಕ್ಷಿಣ ಪೊಲೀಸ್ ಉಪವಿಭಾಗದ ಎಸಿಪಿ ನಿರ್ದೇಶನದಂತೆ ಉಳ್ಳಾಲ ಠಾಣಾಧಿಕಾರಿ ನೇತೃತ್ವದಲ್ಲಿ ಬಂಧಿಸಲಾಗಿದೆ.
ಬಂದ್ಯೋಡು ಮಂಗಳಪಾಡಿಯ ರೆಜಿನ್ (23) ಮತ್ತು ಧೀರಜ್ (21) ಬಂಧಿತರು.‌ ತೊಕ್ಕೊಟ್ಟುವಿನಿಂದ ಕೇರಳ ಕಡೆಗೆ ಕಾರಿನಲ್ಲಿ ಅಕ್ರಮ ಮದ್ಯ ಸಾಗಿಸಲಾಗುತಿತ್ತು  ಆರೋಪಿಗಳಿಂದ 26 ಬಾಕ್ಸುಗಳಲ್ಲಿದ್ದ 225 ಲೀ ಮದ್ಯ ಹಾಗೂ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಯಾವುದೇ ದಾಖಲೆಗಳಿಲ್ಲದ ಮಾರುತಿ 800 ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕೋಟೆಕಾರು ಅಜ್ಜನಕಟ್ಟೆ ಬಳಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆಕಾರು ಬಳಿ ಕಾರು ನಿಲ್ಲಿಸಲು ಸೂಚಿಸಿದಾಗ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಸುತ್ತುವರಿದು ಕಾರಿಗೆ ಅಡ್ಡಗಟ್ಟಿ ಇಬ್ಬರನ್ನು ಬಂಧಿಸಿದ್ದಾರೆ.

ತೊಕ್ಕೊಟ್ಟುವಿನಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸಲಾಗುತಿತ್ತು. 225 ಲೀಟರ್ ಅಕ್ರಮ ಮದ್ಯ ಮತ್ತು ಮಾರುತಿ 800 ವಾಹನ ಸೇರಿದಂತೆ ಒಟ್ಟು ರೂ. 2 ಲಕ್ಷ ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...