ಆಪರೇಶನ್ ಕಾವೇರಿ; ನೌಕಾ ಪಡೆಯ ಹಡಗಿನಲ್ಲಿ ಸುಡಾನ್‌ನಿಂದ ನಿರ್ಗಮಿಸಿದ ಭಾರತೀಯರ ಮೊದಲ ತಂಡ

Source: Vb | By I.G. Bhatkali | Published on 26th April 2023, 9:31 AM | National News | Global News |

ಹೊಸದಿಲ್ಲಿ: ಸುಡಾನ್‌ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆಯ ಸಂಘರ್ಷದಿಂದ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ತೆರವು ಕಾರ್ಯಾಚರಣೆ 'ಆಪರೇಷನ್ ಕಾವೇರಿಯ ಭಾಗವಾಗಿ ಭಾರತೀಯರ ಮೊದಲ ತಂಡ ಭಾರತದ ನೌಕಾ ಪಡೆಯ ಹಡಗು ಐಎನ್ ಎಸ್ ಸುಮೇಧಾದಲ್ಲಿ ಸುಡಾನ್‌ ನಿಂದ ಸೋಮವಾರ ಹೊರಟಿದೆ.

278 ಭಾರತೀಯರಿರುವ ಹಡಗು ಪೋರ್ಟ್ ಸುಡಾನ್‌ನಿಂದ ಸೌದಿ ಅರೇಬಿಯದ ಜಿದ್ದಾ ನಗರಕ್ಕೆ ನಿರ್ಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಿ ಅವರು ತಿಳಿಸಿದ್ದಾರೆ.

ಸೇನೆ ಮತ್ತು ಅರೆ ಸೇನಾ ಪಡೆಗಳ ಸ೦ಘರ್ಷಕ್ಕೆ ಸಾಕ್ಷಿಯಾಗಿರುವ ಸುಡಾನ್‌ ನಿಂದ ತನ್ನ ಪ್ರಜೆಗಳನ್ನು ವಾಪಸ್‌ ಕರೆ ತರಲು ಭಾರತ ಸೋಮವಾರ 'ಆಪರೇಷನ್‌ ಕಾವೇರಿ' ಆರಂಭಿಸಿತ್ತು.

ತೆರವು ಕಾರ್ಯಾಚರಣೆಗೆ ಜಿದ್ದಾದಲ್ಲಿ ಭಾರತೀಯ ವಾಯು ಪಡೆಯ ಎರಡು ವಿಮಾನ ಹಾಗೂ ಸುಡಾನ್ ಬಂದರಿನಲ್ಲಿ ಭಾರತೀಯ ನೌಕಾ ಪಡೆಯ ಹಡಗು ಐಎನ್ ಎಸ್ ಸುಮೇಧಾ ಸಜ್ಜಾಗಿ ನಿಂತಿದೆ ಎಂದು ರವಿವಾರ ಹೇಳಿತ್ತು. ಸುಡಾನ್‌ನಾದ್ಯಂತ ಸಿಲುಕಿರುವ 3,000ಕ್ಕೂ ಅಧಿಕ ಭಾರತೀಯ ಪ್ರಜೆಗಳ ಸುರಕೆಗೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿತ್ತು.

ಸುಡಾನ್‌ನಿಂದಮರಳಿದ ಕರ್ನಾಟಕದ ನಿವಾಸಿಗಳಿಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ: ಸುಡಾನ್ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಭಾರತ ಸರಕಾರದ ರಾಯಭಾರ ಕಛೇರಿಯು ಶ್ರಮಿಸುತ್ತಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಅವರ ಸ್ವಂತ ನಿವಾಸಗಳಿಗೆ ಉಚಿತವಾಗಿ ಹೋಗಲು ನಿಗಮದ ಬಸ್‌ ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

ಸುಡಾನ್ ದೇಶದಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ವಾಸಿಗಳು ಬೆಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಲ್ಲಿ, ಅಲ್ಲಿಂದ ಅವರ ಸ್ವಂತ ವಾಸಸ್ಥಳಗಳಿಗೆ ಉಚಿತವಾಗಿ ನಿಗಮದ ಬಸ್ ಗಳಲ್ಲಿ ತಲುಪಬಹುದು. ಈ ಕುರಿತು ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಎಸ್. ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...