ಆಪರೇಷನ್ ಗಂಗಾ; ಬುಕಾರೆಸ್ಟ್ನಿಂದ ಭಾರತೀಯರ 2ನೇ ತಂಡ ದಿಲ್ಲಿಗೆ ಆಗಮನ
ಹೊಸದಿಲ್ಲಿ: ಉಕ್ರೇನ್ನಲ್ಲಿ ಅತಂತ್ರರಾಗಿದ್ದ 250 ಭಾರತೀಯ ಪ್ರಜೆಗಳನ್ನು ಹೊತ್ತಿದ್ದ 'ಆಪರೇಷನ್ ಗಂಗಾ' ತೆರವು ಕಾರ್ಯಾಚರಣೆಯ ವಿಮಾನವು ರವಿವಾರ ನಸುಕಿನ 2:45ರ ಸುಮಾರಿಗೆ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ನಿಂದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಉಕ್ರೇನ್ನಲ್ಲಿ ರಶ್ಯದ ಆಕ್ರಮಣದ ನಡುವೆ ಶನಿವಾರ ಭಾರತವು ತನ್ನ ನಾಗರಿಕರನ್ನು ತೆರವುಗೊಳಿಸಲು 'ಆಪರೇಷನ್ ಗಂಗಾ' ಆರಂಭಿಸಿತ್ತು. ಈ ಕಾರ್ಯಾಚರಣೆಯಡಿ ಬುಕಾರೆಸ್ಟ್ನಿಂದ ಮುಂಬೈಗೆ ಆಗಮಿಸಿತ್ತು.
ಮೊದಲ ವಿಮಾನವು ಶನಿವಾರ ಸಂಜೆ 219 ತೆರವು ಕಾರ್ಯಾಚರಣೆಯ ಮೂರನೇ ವಿಮಾನವು ಉಕ್ರೇನ್ನಲ್ಲಿ
ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಹೊತ್ತುಕೊಂಡು ಹಂಗೆರಿಯ ರಾಜಧಾನಿ ಬುಡಾಪೆಸ್ಟ್ನಿಂದ ದಿಲ್ಲಿಯತ್ತ ಆಗಮಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಫೆ.24ರಿಂದ ಉಕ್ರೇನ್ ತನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಉಕ್ರೇನ್-ರೊಮೇನಿಯಾ ಮತ್ತು ಉಕ್ರೇನ್ -ಹಂಗೆರಿ ಗಡಿಗಳನ್ನು ತಲುಪಿದ್ದ ಭಾರತೀಯ ಪ್ರಜೆಗಳನ್ನು ಭಾರತ ಸರಕಾರದ ಅಧಿಕಾರಿಗಳ ನೆರವಿನಿಂದ ರಸ್ತೆ ಮೂಲಕ ಅನುಕ್ರಮವಾಗಿ ಬುಕಾರೆಸ್ಟ್ ಮತ್ತು ಬುಡಾಪೆಸ್ಟ್ಗಳಿಗೆ ಸಾಗಿಸಲಾಗಿದ್ದು, ಅಲ್ಲಿಂದ ಅವರನ್ನು ಏರ್ ಇಂಡಿಯಾ ವಿಮಾನಯಾನಗಳ ಮೂಲಕ ಸ್ವದೇಶಕ್ಕೆ ರವಾನಿಸಲಾಗುತ್ತಿದೆ. ಈ ತೆರವು ಕಾರ್ಯಾಚರಣೆಯ ಸಂಪೂರ್ಣ ವೆಚ್ಚವನ್ನು ಭಾರತ ಸರಕಾರವೇ ಭರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.