ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕಾರ್ಯಾಚರಣೆ

Source: SO News | By Laxmi Tanaya | Published on 22nd October 2020, 9:19 PM | Coastal News |

ಮಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್‍ಮಸಾಲ ಉತ್ಪನ್ನಗಳನ್ನು ಜಗಿದು ಉಗಿಯುವುದರಿಂದ ಕೋವಿಡ್-19 ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಇತರರಿಗೆ ಹರಡುವ ಸಂಭವ ಹೆಚ್ಚಾಗಿರುವ ಕಾರಣದಿಂದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಾನುಷ್ಠಾನುಧಿಕಾರಿ ಡಾ. ಜಗದೀಶ್ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದ ತಂಡವು ಅಕ್ಟೋಬರ್ 20 ರಂದು ನಗರದ ಬರ್ಕೆ, ಬಲ್ಲಾಲ್ ಬಾಗ್, ಮಣ್ಣಗುಡ್ಡ ಪರಿಸರದಲ್ಲಿ ಕಾರ್ಯಚರಣೆ ನಡೆಸಿದ್ದಾರೆ.

 ಸೆಕ್ಷನ್ 4, 6ಎ ಹಾಗೂ 6ಬಿ ಪ್ರಕಾರ  31 ಕೇಸ್ ದಾಖಲಿಸಿ ಸುಮಾರು ರೂ.3150 ದಂಡ ವಿಧಿಸಲಾಯಿತು ಹಾಗೂ ಕಾಯಿದೆ ಕುರಿತಂತೆ ಅಂಗಡಿ ಹಾಗೂ ಹೋಟೇಲ್ ಮಾಲಿಕರಿಗೆ ಮಾಹಿತಿ ನೀಡಲಾಯಿತು.

    ಸಮಾಜ ಕಾರ್ಯಕರ್ತೆ ಶ್ರುತಿ ಸಾಲ್ಯಾನ್, ವಿಜಯ್‍ಕುಮಾರ್, ಬರ್ಕೆ ಠಾಣಾ ಪೊಲೀಸ್ ಸಿಬ್ಬಂದಿ ಪರಶುರಾಮ್ ಹಾಗೂ ವಿದ್ಯಾರವರು ಕಾರ್ಯಚರಣೆಯಲ್ಲಿ ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...