ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬ್ಯಾಂಕ್‍ಶಾಖೆ ತೆರೆದು ಜನರಿಗೆ ಸೌಲಭ್ಯ ಒದಗಿಸಿ:ಬಿ.ಎಸ್.ಮೂಗನೂರ ಮಠ

Source: so news | Published on 5th October 2019, 12:44 AM | State News | Don't Miss |

 

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹಲವು ಗ್ರಾಮ ಪಂಚಾಯತಿಗಳಲ್ಲಿ ಬ್ಯಾಂಕ್ ಶಾಖೆಗಳು ಇಲ್ಲ. ಗ್ರಾಮಸ್ಥರು ಬ್ಯಾಂಕ್ ವ್ಯವಹಾರಗಳಿಗಾಗಿ ಶಹರಗಳನ್ನು ಅವಲಂಭಿಸುವಂತಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಖೆಗಳನ್ನು ತೆರದು ಜನರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಧಾರವಾಡ ಜಿಲ್ಲಾ ಪಂಚಾಯತಿ ಸ್ವಚ್ಛಭಾರತ ಮಿಷನ್ ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರ ಮಠ ಹೇಳಿದರು. 
ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಂಧ್ರಾ ಹಾಗೂ ಜಿಲ್ಲಾ ಅಗ್ರಣೀಯ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಎರೆಡು ದಿನಗಳ ಗ್ರಾಹಕ ಮೇಳವನ್ನು ಉದ್ಘಾಟಸಿ ಮಾತನಾಡಿದರು. 
ಗ್ರಾಹಕರಿಗೆ ಬ್ಯಾಂಕುಗಳಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿಯಿಲ್ಲ. ಈ ಮಾಹಿತಿಯನ್ನು ಒದಗಿಸಿ ಜನರಿಗೆ ನೆರವಾಗುವ ಉದ್ದೇಶದಿಂದ  ಕೇಂದ್ರ ಸರ್ಕಾರ ಗ್ರಾಹಕ ಮೇಳವನ್ನು ಆಯೋಜಿಸಲು ನಿರ್ದೇಶಿಸಿದೆ. ಬ್ಯಾಂಕುಗಳು ಗ್ರಾಹರರನ್ನು ಭಾಗಿಧಾರರೆಂದು ಭಾವಿಸಿ ಸೇವೆ ಒದಗಿಸಬೇಕು. ಜಿಲ್ಲೆಯಲ್ಲಿ ಗ್ರಾಮ ಮಟ್ಟದಲ್ಲಿ ಬ್ಯಾಂಕುಗಳ ಶಾಖೆ ತೆರೆಯಲು ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಕನಿಷ್ಠ ಪಂಚಾಯತಿ ವ್ಯಾಪ್ತಿಗೆ ಒಂದರಂತೆ ಬ್ಯಾಂಕ್ ಶಾಖೆಗಳ ಸ್ಥಾಪನೆಯಾಗಬೇಕು. ಗ್ರಾಮಗಳಲ್ಲಿ ಜನರು ಹೆಚ್ಚು ಹಣದ ವಹಿವಾಟು ನೆಡೆಸುವಷ್ಟು ಶಕ್ತರಾಗಿದ್ದಾರೆ. ಇದನ್ನು ಬ್ಯಾಂಕುಗಳು ಗುರುತಿಸಿ ಲಾಭ ಪಡೆಯಬೇಕು. 
ಗ್ರಾಮ ಮಟ್ಟದ ಶಾಖೆಗಳಲ್ಲಿ ಕನ್ನಡ ಭಾಷೆ ಗೊತ್ತಿರುವರನ್ನು ಕೆಲಸಕ್ಕೆ ನೇಮಿಸಬೇಕು. ಇದರಿಂದ ವ್ಯವಹಾರ ಪ್ರಕ್ರಿಯೆ ಸುಲಭವಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣಕ್ಕಿಂತ ನಗರದ ಪ್ರದೇಶದ ಜನಸಂಖ್ಯೆ ಹೆಚ್ಚಿದೆ. ಇದರಿಂದಾಗಿ ಬ್ಯಾಂಕುಗಳ ಶಾಖೆಗಳು ನಗರದಲ್ಲಿ ಹೆಚ್ಚಿವೆ. ಇಂದಿನ ಆಧುನಿಕ ತಂತ್ರಜ್ಞಾನ ಬಳಸಿ ಇಂಟರ್‍ನೆಟ್ ಬ್ಯಾಂಕಿಗ್ ನೆಡೆಸುವವರು ಬ್ಯಾಂಕ್ ಶಾಖೆಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತಾರೆ. ಆಧುನಿಕ ಸೌಲಭ್ಯಗಳಿಂದ ವಂಚಿತರಾದ ಹಳ್ಳಿಗಳಲ್ಲೇ ಬ್ಯಾಂಕುಗಳ ಅವಶ್ಯಕತೆ ಹೆಚ್ಚಿದೆ. 
ಆರ್ಥಿಕ ಸುಧಾರಣೆ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳು ಜನರನ್ನು ತಲುಪಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಮುದ್ರಾ, ಶೈಕ್ಷಣಿಕ ಸಾಲಗಳನ್ನು ಹೆಚ್ಚು ಮಂಜೂರು ಮಾಡಬೇಕು ಎಂದು ಹೇಳಿದರು.

ಆಂಧ್ರಾ ಬ್ಯಾಂಕ್ ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕ ಡಿ. ಚಂದ್ರಮೋಹನ ರೆಡ್ಡಿ ಮಾತನಾಡಿ, ಬ್ಯಾಂಕುಗಳು ಸರ್ಕಾರದ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಸಹಕಾರ ನೀಡುತ್ತವೆ. ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ತಲುಪಿಸುವ ಉದ್ದೇಶವಿದೆ. ಧಾರವಾಡ ಜಿಲ್ಲೆಯಲ್ಲಿ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಹೆಚ್ಚಾಗಿವೆ. ಕೈಗಾರಿಕೆಗಳಿಗೆ ಅಗತ್ಯವಾದ ಸಾಲ ಸೌಲಭ್ಯಗಳನ್ನು ಕೈಗಾರಿಕೋಧ್ಯಮಿಗಳಿಗೆ ನೀಡಲಾಗಿದೆ ಎಂದು ಹೇಳಿದರು. 
ಹುಬ್ಬಳ್ಳಿ ಆಂಧ್ರಾ ಬ್ಯಾಂಕ್ ವಲಯ ವ್ಯವಸ್ಥಾಕ ಎನ್.ಶ್ರೀನಿವಾಸ ರಾವ್ ಮಾತನಾಡಿ, ಸರ್ಕಾರ ನಿರ್ದೇಶನದಂತೆ ಗ್ರಾಹರ ಮೇಳವನ್ನು ಆಯೋಜಿಸಲಾಗಿದೆ. ಹಬ್ಬದ ಸಂದರ್ಭವಾಗಿರುವುದರಿಂದ ಗ್ರಾಹರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸುವರು. ಎಂ.ಎಸ್.ಎಂ.ಇ. ಕೃಷಿ, ಗೃಹ, ವೈಯಕ್ತಿಕ ಹಾಗೂ ವಾಹನ ಸಾಲ ಸೌಲಭ್ಯಗಳನ್ನು ಮೇಳದಲ್ಲಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪ ಈಶ್ವರ್ ನಾಥ್ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರದ ಮುದ್ರಾ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಶೈಕ್ಷಣಿಕ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆ ಬೆಳವಣಿಗೆ ಉತ್ತಮ ಅವಕಾಶವಿದೆ. 6 ಕೈಗಾರಿಕ ವಸಹಾತು, 6 ಕೈಗಾರಿಕಾ ಪ್ರದೇಶಗಳು, ಕೆ.ಎಸ್.ಎಸ್.ಡಿ.ಸಿ ಯಿಂದ ಅಭಿವೃದ್ಧಿ ಪಡಿಸಿದ ಕೈಗಾರಿಕಾ ಪ್ರದೇಶಗಳಿವೆ. ಇವುಗಳಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಇದ್ದು ಸಾವಿರಾರು ಜನರಿಗೆ ಉದ್ಯೋಗ ನೀಡಿವೆ. ಇವುಗಳಿಗೆ ಅಗತ್ಯವಾದ ಆರ್ಥಿಕ ನೆರವನ್ನು ಬ್ಯಾಂಕುಗಳಿಂದ ನೀಡಲಾಗಿದೆ. ನವ ಉದ್ಯಮಗಳನ್ನು ಸ್ಥಾಪಿಸಲು ಸ್ಟಾರ್ಟಅಪ್ ಯೋಜನೆ ಅಡಿ ನೆರವು ನೀಡಲಾಗುತ್ತಿದೆ. ಮೇಳದಲ್ಲಿ ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳ ಭಾಗವಹಿಸಿದ್ದು, 22 ಮಳಿಗೆಗಳನ್ನು ತೆರೆದು ಸುಲಭವಾಗಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಿದರು. 
ಮೇಳದಲ್ಲಿ ಆಂಧ್ರಾ, ಸೆಂಟ್ರಲ್, ಸಿಂಡಿಕೇಡ್, ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್, ಸಿಂಧ್, ಕಾರ್ಪೋರೇಷನ್, ಅಲಹಬಾದ್, ಇಂಡಿಯಾ, ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್ ವತಿಯಿಂದ ಮಳಿಗೆಗಳನ್ನು ತೆರೆದು ಗ್ರಾಹಕರಿಗೆ ಸುಲಭವಾಗಿ ಸಾಲ ಮಂಜುರಾತಿ ಮಾಡಲಾಗುತ್ತಿದೆ. ಆಧಾರ್ ಕಾರ್ಡ ತಿದ್ದುಪಡಿಗೂ ಪ್ರತ್ಯೇಕವಾಗಿ ಮಳಿಗೆ ತೆರೆಯಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಯಡಿ ಸಾಲ ಸೌಲಭ್ಯದ ಫಲಾನುಭವಿಗಲಿಗೆ ಚಕ್ ಹಾಗೂ ಮಂಜುರಾತಿ ಪತ್ರಗಳನ್ನು ನೀಡಲಾಯಿತು. 
ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್ ಅಧ್ಯಕ್ಷ ಪಿ.ಗೋಪಿ ಕೃಷ್ಣ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಪಿಯೂಶ್ ಭಟ್, ನಬಾರ್ಡ್‍ನ ಸಹಾಯಕ ಪ್ರಧಾನ ವ್ಯಸ್ಥಾಪಕಿ ಶೀಲಾ ಭಂಡಾರ್ಕರ್, ಸಿಂಡಿಕೇಟ್ ಬ್ಯಾಂಕ್ ವಲಯ ಪ್ರಧಾನ ಶಿವಕುಮಾರ್, ಕಾರ್ಪೋರೇಷನ್ ಬ್ಯಾಂಕ್ ವಲಯ ಪ್ರಧಾನ ಸಿ.ಪ್ರಭು, ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯಸ್ಥಾಪಕ ವಿಷ್ಣುದಾಸ್ ಭಟ್, ಸೆಂಟ್ರಲ್ ಬ್ಯಾಂಕ್ ಎ.ಎಸ್.ನಾಯಕ್, ಇಂಡಿಯಾ ಬ್ಯಾಂಕ್ ವಲಯ ವ್ಯವಸ್ಥಾಪಕ ಧನಶಿವಪ್ರಸಾದ್, ಬ್ಯಾಂಕ್ ಆಫ್ ಇಂಡಿಯಾದ ಬಿ.ವಿ.ರಾಮಕೃಷ್ಣ ಸೇರಿದಂತೆ ಇತರೆ ಬ್ಯಾಂಕ್ ಅಧಿಕಾರಿಗಳು, ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...