ಕಾರವಾರ: ಆನ್‍ಲೈನ್ ಯೋಗ ಹಾಗೂ ಧ್ಯಾನ

Source: S.O. News service | By S O News | Published on 10th June 2021, 7:14 PM | Coastal News | Don't Miss |

ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಕೇಂದ್ರ (ನಿಮ್ಹಾನ್ಸ್) ಪರಿವರ್ತನಾ ಯೋಗ ಪೌಂಡೇಶನ್ ಹಾಗೂ ಆಟ್ರ್ಸ್ ಆಫ್ ಲೀವಿಂಗ್ ಸಂಸ್ಥೆಗಳ ಸಹಯೋಗದಲ್ಲಿ 7ನೇ ಅಂತ್‍ರಾಷ್ಟ್ರೀಯ ಯೋಗ ದಿನಾಚರಯನ್ನು ಜೂನ್ 11 ರಿಂದ 21 ರವರೆಗೆ ಪ್ರತಿ ದಿನ ಬೆಳಿಗ್ಗೆ 6.30 ಗಂಟೆಯಿಂದ 8.00 ಗಂಟೆಯವರೆಗೆ ಆನ್‍ಲೈನ್ ನಲ್ಲಿ ಅಯೋಜಿಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಜಿ. ಗಾಯತ್ರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದಲ್ಲಿ ಯುವಜನರು ಮತ್ತು ಯೋಗ ಹಾಗೂ ಧ್ಯಾನ ಎಂಬ ಶೀರ್ಷಿಕೆಯನ್ನು ಅಡಿ ಕಾರ್ಯಕ್ರಮ ಸಂಘಟನೆ ಮಾಡುತ್ತಿದ್ದು, ಕಾರ್ಯಕ್ರಮದ ಜೂಮ್ ಮತ್ತು ಯೂಟ್ಯೂಬ್ ಲಿಂಕ್‍ಗಳು 1. Zoom Link Meeting ID : 88904655436 Passcode:429186

2.  Youtube Live Link https://youtube.com/c/YuvaSpandana ಆಗಿರುತ್ತವೆ.

ಜಿಲ್ಲೆಯ ಯುವಜನರು, ಕ್ರೀಡಾಪಟುಗಳು, ಯುವ ಸಂಘದ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ಜೀವನ ಶೈಲಿ ರೂಢಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...