ಮುರುಡೇಶ್ವರ ಸಮುದ್ರಲೆಗಳಿಗೆ ಸಿಲುಕಿ ಪ್ರವಾಸಿ ನೀರುಪಾಲು

Source: sonews | By Staff Correspondent | Published on 17th March 2019, 7:48 PM | Coastal News | Don't Miss |

ಭಟ್ಕಳ:ಪ್ರವಾಸಿಗನೊಬ್ಬ ಸಮುದ್ರದಲೆಗೆ ಸಿಲುಕಿ ನೀರುಪಾಲಾಗಿರುವ ಘಟನೆ ಮುರುಡೇಶ್ವರ ಬೀಚ್ ನಲ್ಲಿ ಭಾನುವಾರ ಜರಗಿದೆ.

ಸಮುದ್ರದಲ್ಲಿ ಈಜುತ್ತಿರುವಾಗ ಭಾರಿ ಅಲೆಗೆ ಸಿಲುಕಿ ನೀರುಪಾಲಾಗಿರುವ ವ್ಯಕ್ತಿಯನ್ನು ಚಾಮರಾಜನಗರ ಜಿಲ್ಲೆಯ ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ಎಂದು ಗುರುತಿಸಲಾಗಿದೆ.

ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಯಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಶಿವಣ್ಣ ಮಡಿವಾಳ ಶೆಟ್ಟಿ ಜತೆ ಯೋಗೇಶ ಸುರೇಶ ನಾಯ್ಕ, ಸಿದ್ಧರಾಜು, ನಾಗರಾಜ ಶೆಟ್ಟಿ, ರವೀಶ್ ಮತ್ತು ಲೋಕೇಶ್ ಸಮುದ್ರದಲ್ಲಿ ಈಜಾಡುತ್ತಿದ್ದರು. ಹಠಾತ್ತನೆ ಭಾರಿ ಅಲೆಯೊಂದು ಅಪ್ಪಳಿಸಿತು. ಇದರಿಂದಾಗಿ ಇವರೆಲ್ಲರೂ ಮುಳುಗಲಾರಂಭಿಸಿದರು. ಸ್ಥಳದಲ್ಲಿದ್ದ ಲೈಫ್ಗಾಡ್ರ್ಗಳಾದ ಜಯರಾಮ, ಹರಿಕಾಂತಾ, ಚಂದ್ರಶೇಖರ ದೇವಾಡಿಗ ಐವರನ್ನು ರಕ್ಷಿಸಿದರು. ಪ್ರವಾಸಿಗರ ಮಿತ್ರ ಮಂಜುನಾಥ್ ಶೇಟ್ ಇವರಿಗೆ ನೆರವಾದರು. ಆದರೆ, ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ನೀರಿನಲ್ಲಿ ಸಿಲುಕಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...