ಪ್ರತೀ 4 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಹಸಿವಿನಿಂದ ಸಾವು; ವರದಿ

Source: Vb | By I.G. Bhatkali | Published on 21st September 2022, 7:25 AM | Global News |

ಜಿನೀವಾ: ಜಗತ್ತಿನಲ್ಲಿ ಪ್ರತೀ ನಾಲ್ಕು ಸೆಕೆಂಡ್‌ಗೆ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಿರುವುದಾಗಿ ಅಂದಾಜಿಸಲಾಗಿದೆ ಎಂದು 200ಕ್ಕೂ ಅಧಿಕ ಎನ್‌ಜಿಒಗಳು ಮಂಗಳವಾರ ಎಚ್ಚರಿಕೆ ನೀಡಿದ್ದು ಅಪಾಯಕಾರಿಯಾಗಿರುವ ಜಾಗತಿಕ ಹಸಿವಿನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ನಿರ್ಣಾಯಕ ಅಂತರ್‌ ರಾಷ್ಟ್ರೀಯ ಕ್ರಮಕ್ಕಾಗಿ ಒತ್ತಾಯಿಸಿವೆ.

ತೀವ್ರವಾಗಿ ಉಲ್ಬಣಗೊಳ್ಳುತ್ತಿರುವ ಹಸಿವಿನ ಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿ ಮತ್ತು ಕ್ರಮಕ್ಕೆ ಶಿಫಾರಸು ಸೂಚಿಸಿ 75 ದೇಶಗಳ ಸಂಘಟನಗಳು ಬಹಿರಂಗ ಪತ್ರಕ್ಕೆ ಸಹಿ ಹಾಕಿವೆ ಎಂದು ಎನ್‌ ಜಿಒ (ಸರಕಾರೇತರ ಸಂಘಟನೆ) ಹೇಳಿದ್ದು, 345 ಮಿಲಿಯನ್ ಜನತೆ ಈಗ ತೀವ್ರ ಹಸಿವಿನಿಂದ ಬಳಲುತ್ತಿದ್ದು ಇದು 2019ರಿಂದ ದ್ವಿಗುಣಗೊಂಡಿದೆ ಎಂದು ಎಚ್ಚರಿಸಿದೆ.

21ನೇ ಶತಮಾನದಲ್ಲಿ ಮತ್ತೊಮ್ಮೆ ಕಾಮದ ಪರಿಸ್ಥಿತಿಗೆ ಅವಕಾಶ ನೀಡುವುದಿಲ್ಲ ಎಂಬ ಜಾಗತಿಕ ಮುಖಂಡರ ಭರವಸೆಯ ಹೊರತಾಗಿಯೂ ಕಾಮವು ಮತ್ತೊಮ್ಮೆ ಸೊಮಾಲಿಯಾದಲ್ಲಿ ಕಾಣಿಸಿಕೊಂಡಿದೆ. ವಿಶ್ವದಾದ್ಯಂತ 45 ದೇಶಗಳಲ್ಲಿ 50 ಮಿಲಿಯನ್ ಜನತೆ ಉಪವಾಸ ಬೀಳುವ ದುರಂತದ ಅಂಚಿಗೆ ತಲುಪಿದ್ದಾರೆ ಎಂದು ವರದಿ ಹೇಳಿದೆ. ಪ್ರತೀ ದಿನ ಹಸಿವಿನಿಂದ ಸುಮಾರು 19,700 ಮಂದಿ ಸಾಯುತ್ತಿರುವುದಾಗಿ ಅಂದಾಜಿಸಿದ್ದು ಇದರರ್ಥ ಪ್ರತೀ 4 ಸೆಕೆಂಡ್‌ಗೆ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಿದ್ದಾನೆ. ಕೃಷಿಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನ, ಯಂತ್ರೋಪಕರಣ, ಕೊಯ್ದು ತಂತ್ರಗಳಿದ್ದರೂ ನಾವು ಇಂದಿಗೂ 21ನೇ ಶತಮಾನದಲ್ಲಿ ಕ್ಷಾಮದ ಬಗ್ಗೆ ಮಾತನಾಡುತ್ತಿರುವುದು ಅಸಹನೀಯವಾಗಿದೆ ಎಂದು ಯೆಮನ್ ಫ್ಯಾಮಿಲಿ ಕ್ಯಾರ್ ಅಸೋಸಿಯೇಷನ್‌ ಮೊಹಾನ್ನ ಅಹ್ಮದ್‌ ಅಲಿ ಹೇಳಿದ್ದಾರೆ.

Read These Next

ಪೇಶಾವರ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ೪೦ ಮಂದಿ ಸಾವು; ೧೦೦ಕ್ಕೂ ಹೆಚ್ಚು ಗಂಭೀರ

ಪಾಕಿಸ್ತಾನದ ಪೇಶಾವರದಲ್ಲಿ ಸೋಮವಾರ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ೪೦ ಮಂದಿ ಸಾವನ್ನಪ್ಪಿದ್ದು ೧೦೦ ಕ್ಕೂ ಹೆಚ್ಚು ...

ತಾಂತ್ರಿಕ ದೋಷ: ಅಮೆರಿಕದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ; ಸೈಬರ್ ದಾಳಿಯಲ್ಲ, ಶ್ವೇತಭವನ ಸ್ಪಷ್ಟನೆ

ಪ್ರಮುಖ ಪೈಲಟ್ ಅಧಿಸೂಚನೆಯ ವೈಫಲ್ಯದಿಂದಾಗಿ ಬುಧವಾರ ಬೆಳಗ್ಗೆ ಅಮೆರಿಕದಾದ್ಯಂತ ಎಲ್ಲಾ ವಿಮಾನಗಳೂ ಹಾರಾಟ ಸ್ಥಗಿತಗೊಳಿಸಿವೆ ಎಂದು ...

ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಡಬ್ಲ್ಯುಎಚ್‌ಒ ಎಚ್ಚರಿಕೆ; ಕೆಮ್ಮಿನ ನಾಲ್ಕು ಸಿರಪ್‌ಗಳ ಕುರಿತು ಕೇಂದ್ರದ ತನಿಖೆ

ಹರ್ಯಾಣದ ಔಷಧಿ ಕಂಪೆನಿಯೊಂದು ತಯಾರಿಸಿರುವ ನಾಲ್ಕು ಕೆಮ್ಮಿನ ಸಿರಪ್ ಗಳಿಗೂ ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೂ ...