ದೇಶದ ಸಮಗ್ರತೆಯ ಬಗ್ಗೆ ಒಕ್ಕಣ್ಣಿನ ದೃಷ್ಟಿಕೋನ

Source: sonews | By Staff Correspondent | Published on 27th August 2019, 11:24 PM | National News | Special Report |

-ಗೋಪಾಲ್ ಗುರು

ಹಾಲಿ ಕೇಂದ್ರ ಸರ್ಕಾರವು ತನ್ನ ಅಧಿಕಾರಕ್ಕೆ ರಾಜಕೀಯ ಮಾನ್ಯತೆಯನ್ನು ಗಳಿಸಿಕೊಳ್ಳಳು ಭಾರತ ದೇಶಕ್ಕೆ ಸಶಕ್ತ, ಸಮಗ್ರ, ಸಕ್ರಿಯ ವೆಂಬ ಗುಣವಿಶೇಷಗಳನ್ನು ಬಳಸಲು ನಿರ್ಧರಿಸಿದೆ ಎಂಬುದು ಸ್ಪಷ್ಟವಾಗತೊಡಗಿದೆ. ಅದೇನೇ ಇದ್ದರೂ ಹಾಲೀ ಕೇಂದ್ರ ಸರ್ಕಾರದ ಪ್ರಧಾನ ವಕ್ತಾರರು ತಮ್ಮ ಇತ್ತೀಚಿನ ಹೇಳಿಕೆಯಲ್ಲಿ ಅವೆಲ್ಲಕ್ಕಿಂತ ಹೆಚ್ಚು ಸುರಕ್ಷಿತವಾದ  ಒಂದು ರಾಷ್ಟ್ರ-ಒಂದು ಸಂವಿಧಾನ ಎಂಬ ಪದಪುಂಜವನ್ನು ಬಳಸಿದ್ದು ಕುತೂಹಲಕಾರಿಯಾಗಿದೆ. ಮೂಲಕ ಸರ್ಕಾರವು ತನ್ನನ್ನೂ ಒಳಗೊಂಡಂತೆ ದೇಶದ ಸಕಲರೂ ಸಂವಿಧಾನದ ಮಾರ್ಗದರ್ಶಿ ಸೂತ್ರಗಳಿಗೆ ಬದ್ದರಾಗಿರಬೇಕೆಂದು ಸೂಚಿಸುತ್ತಿರಬಹುದು. ಅಷ್ಟು ಮಾತ್ರವಲ್ಲ. ಒಂದು ಸರ್ಕಾರದ ಮತ್ತು ಸರ್ಕಾರವನ್ನು ನಡೆಸುವವರ ನೈತಿಕ ಪ್ರಗತಿಯು ನಮ್ಮ ಸಂವಿಧಾನದ ಅಡಿಪಾಯವಾಗಿರುವ ಸ್ವಾತಂಂತ್ರ್ಯ, ಸಮಾನತೆ, ಮಾನವ ಘನತೆಗಳೆಂಬ ನೈತಿಕ ಮೌಲ್ಯಗಳ ವಿಶ್ವಾತ್ಮಕತೆಗೆ ಬದ್ಧರಾಗಿರುವುದನ್ನು ಆಧರಿಸಿರುತ್ತದೆ ಎಂಬುದನ್ನೂ ಸಹ ಅದು ಸೂಚಿಸಿದಂತಾಗಿದೆ.

ಸಂವಿಧಾನದ ಪ್ರಾಮುಖ್ಯತೆಯನ್ನು ಪುನರುಚ್ಚರಿಸುವುದೆಂದರೆ ಸಾಂವಿಧಾನಾತ್ಮಕವಾದ ಮೌಲ್ಯಗಳ ಸುತ್ತಾ ಕಟ್ಟಿಕೊಳ್ಳಬೇಕಾದ ದೇಶದ ಸಮಗ್ರತೆಯನ್ನು ಸಾಕಾರಗೊಳಿಸುವಲ್ಲಿ ಅಡ್ಡಿ ಬರುವ ಪರಸ್ಪರ ಅನುಮಾನ, ದ್ವೇಷ ಮತ್ತು ತಿರಸ್ಕಾರಗಳನ್ನು ಕಿತ್ತೊಗೆಯುವುದು ಎಂದರ್ಥವಾಗುತ್ತದೆ. ಅಧಿಕಾರದಲ್ಲಿರುವ ಯಾವುದೇ ಸರ್ಕಾರದ ಮಿತಿಗಳು ಸಮಗ್ರತೆಯ ಸಂಕೀರ್ಣ ಸ್ವರೂಪದ ಆಳಕ್ಕೆ ಹೋಗಲಾರದ ಅಸಮರ್ಥತೆಯಲ್ಲಿ ಮತ್ತು ಅಸಮ್ಮತಿಯಲ್ಲಿ ಅಡಗಿದೆ. ಸಾಮಾಜಿಕ ವಾಸ್ತವಗಳ ಆಳಕ್ಕೆ ಹೋಗುವುದರಲ್ಲಿ ಒಂದು ನೈತಿಕ ಅಪಾಯವಿರುವುದರಿಂದ ವಿಷಯದಲ್ಲಿ ಆಳಕ್ಕಿಳಿಯುವುದರ ಬದಲು ಅಸಮ್ಮತಿ ತೋರುವುದೇ ಲೇಸೆಂದು ಭಾವಿಸಲಾಗುತ್ತದೆ. ಏಕೆಂದರೆ ರೀತಿ ಆಳಕ್ಕಿಳಿದಾಗ ದೇಶದ ಅತಿ ಹೆಚ್ಚಿನ ಜನರನ್ನು ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಹೊರಗುಳಿಸಲಾಗಿದೆಯೆಂಬ ಮುಜುಗರ ಹುಟ್ಟಿಸುವಂಥಾ ಸತ್ಯವನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ದೇಶದ ಸಮಗ್ರತೆಯೆಂಬ ಏಕಮುಖೀ ಆಯಾಮದ ಪರಿಕಲ್ಪನೆಯೂ ಬಯಲುಗೊಳ್ಳಬೇಕಾಗುತ್ತದೆ. ವಿಪರ್ಯಾಸವೆಂದರೆ ವಿವಿಧ ನೆಲೆಗಳಿಂದಾಗಿ ಅಭಿವೃದ್ಧಿಯ ಮತ್ತು ಸರೀಕ ಮನುಷ್ಯರ ಪರಿಗಣನೆಯಿಂದ ಹೊರಗುಳಿಯಲ್ಪಟ್ಟ ಸಾಮಾಜಿಕ ಗುಂಪುಗಳ ಸಾಮಾಜಿಕ ಸಮಗ್ರತೆಯ ಗೈರುಹಾಜರಿಯಲ್ಲಿ ಮಾತ್ರ ರಾಷ್ಟ್ರೀಯ ಸಮಗ್ರತೆಯ ಪ್ರತಿಪಾದನೆಗಳು ಪೂರ್ಣಗೊಳ್ಳುತ್ತವೆ.

ಹೊರದಬ್ಬುವಿಕೆಗಳ ಅಂತರಿಕ ಸ್ವರೂಪಗಳು ಏಕಮುಖೀ ರಾಷ್ಟ್ರೀಯ ಸಮಗ್ರತೆಯ ಪರಿಕಲ್ಪನೆಗಳು ಪ್ರಶ್ನಿಸುತ್ತವೆ. ಇದು ಎಷ್ಟು ಏಕಮುಖಿಯಾಗಿದೆಯೆಂದರೆ ಬಾಹ್ಯ ಕಾರಣಗಳಿದ್ದಾಗ ಮಾತ್ರ ದೇಶದ ಸಮಗ್ರತೆಯ ಕಾರಣಗಳು ಹುಟ್ಟಿಕೊಳ್ಳುತ್ತವೆ. ಸಮಗ್ರತೆಯ ಕಾಳಜಿಗಳು ಅಂತರಿಕ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಹೆದರಿಕೆಯಿಲ್ಲದ ತೀರ್ಮಾನಗಳಿಂದ ಹುಟ್ಟುವುದಿಲ್ಲ. ಒಂದು ರಾಷ್ಟ್ರ-ಒಂದು ಸಂವಿಧಾನ ಎಂಬುದರ ಸುತ್ತಾ ಕಟ್ಟಿಕೊಳ್ಳಬೇಕಾದ ಸಮಗ್ರತೆಯ ಸಂಕಥನಗಳು ತಮ್ಮ ಸಾರವನ್ನು  ನಮ್ಮ ಸಂವಿಧಾನದಲ್ಲಿರುವ ಹಲವಾರು ಕಲಮುಗಳಿಂದ ಪಡೆದುಕೊಳ್ಳಬೇಕು. ಸಂವಿಧಾನದಲ್ಲಿರುವ ಅಂಥಾ ಕಲಮುಗಳು ದೇಶದ ಸಮಗ್ರತೆಗೆ ಸಮಾಜದಲ್ಲಿರುವ ಅಂತರಿಕ ಶ್ರೇಣೀಕರಣವು ಅಂತ್ಯವಾಗುವುದು ಅತ್ಯಗತ್ಯವಾದ ಪೂರ್ವಾಗತ್ಯವೆಂದು ಸೂಚಿಸುತ್ತವೆ. ಹಿನ್ನೆಲೆಯಲ್ಲಿ ಸಂವಿಧಾನದ ತಾತ್ವಿಕ ತಳಹದಿಯ ಬಗ್ಗೆ ಮತ್ತು ಅಸ್ಪೃಷ್ಯತೆಯೆಂಬ ಮಾನವ ಘನತೆಯನ್ನು ನಾಶ ಮಾಡುವಂಥ ಸಾಮಾಜಿಕ ವಾಸ್ತವಗಳ ನಿರ್ಮೂಲನೆಯೆಂಬ ಎರಡೂ ವಿಷಯಗಳ ಬಗ್ಗೆಯೂ ಸಮಾನವಾದ ಒತ್ತನ್ನು ನೀಡುವುದು ಅಗತ್ಯವಾಗುತ್ತದೆ

ಸಂವಿಧಾನದ ತತ್ವಗಳನ್ನು ಸಾಕಾರಗೊಳಿಸಬೇಕೆಂದರೆ ತತ್ವಗಳಿಗೆ ಪೂರಕವಾಗಿ ನಾಗರಿಕರ ಪರಿಕಲ್ಪನೆಯನ್ನು ರೂಪಿಸುವುದು ಅತ್ಯಗತ್ಯ. ನಾಗರಿಕರು ತಮ್ಮ ನೈತಿಕ ಬದ್ಧತೆಯ ಮೂಲಕ ಇತರರ ಬಗ್ಗೆ ದ್ವೇಷ ತಾಳದೆ ಮತ್ತು ಇತರೇ ನಗಣ್ಯರ ಬಗ್ಗೆ ಹಿಂಸಾತ್ಮಕ ಪ್ರತಿರೋಧವನ್ನು ಬೆಳೆಸಿಕೊಳ್ಳದ ರೀತಿಯಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳಲು ಬೇಕಾದ ತಾತ್ವಿಕ ಶಕ್ತಿಯನ್ನು ಪಡೆದುಕೊಳ್ಳಬಹುದು. ಇದು  ನಾಗರಿಕರಿಂದ ಇಟ್ಟುಕೊಳ್ಳಬಹುದಾದ ಅತ್ಯಂತ ಕನಿಷ್ಟಮಟ್ಟದ ನಿರೀಕ್ಷೆಒಂದು ಆದರ್ಶ ಸಂದರ್ಭದಲ್ಲಿ ನಾಗರಿಕರೆ ಪರಸ್ಪರ ಪ್ರತಿಯೊಬ್ಬರ ಘನತೆಯುಳ್ಳ ವ್ಯಕ್ತಿತ್ವದ ಬಗ್ಗೆ ಪರಸ್ಪರ ಗೌರವವುಳ್ಳ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವಲ್ಲಿ ನೈತಿಕ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಬಹುದಿತ್ತು. ಅದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಯಾವುದೇ ಸಾಮಾಜಿಕ ಸಂಬಂಧಗಳು ಮನುಷ್ಯ ಸಂಬಂಧಗಳನ್ನು ಪರಸ್ಪರ ನಿರಾಕರಣೆ ಮಾಡದಂತೆ ಅಥವಾ ನಿರಂತರ ಹಗೆತನದ ಮಟ್ಟಕ್ಕೆ ಇಳಿಸಿಬಿಡದಂತೆ ನೋಡಿಕೊಳ್ಳು ನೈತಿಕ ಜಾಗೃತಿಯನ್ನು ವ್ಯಕ್ತಿಯು ಇರಿಸಿಕೊಂಡಿರಬೇಕೆಂದು ನಿರೀಕ್ಷಿಸಲಾಗುತ್ತದೆ

ಆದರೆ ಸರ್ಕಾರದ ಹಲವಾರು ಬೆಂಬಲಿಗರ ಧೋರಣೆಗಳು ಮತ್ತು ಕ್ರಿಯೆಗಳು ಸಮಗ್ರತೆಯ ಬಗ್ಗೆ ಏಕಮುಖೀ ಒತ್ತನ್ನು ಹೊಂದಿರುವುದು ಆಸಕ್ತಿದಾಯಕವಾಗಿದೆ. ವಾಸ್ತವವಾಗಿ ಅವರಲ್ಲಿ ಹಲವರು ಸರ್ಕಾರದ ಏಕಮುಖೀ ಸಮಗ್ರತೆಯ ಪರಿಕಲ್ಪನೆಯನ್ನು ಆಚರಣೆಗಿಳಿಸಲು ಬೇಕಾದ ಸಾಮಾಜಿಕ ಪರಿಸ್ಥಿತಿಗಳನ್ನು ಸೃಷ್ಟಿಸಲು ಮತ್ತು ಹರಡಲು ನೇರವಾಗಿ ಕಾರಣರಾಗಿದ್ದಾರೆ. ಗೋ ಹತ್ಯೆ ಮತ್ತು ಅಂತರ್ಜಾತಿ ಮದುವೆಗಳ ಆಧಾರದಲ್ಲಿ ಲಿಂಚಿಂಗ್ ಮತ್ತು ಸಾಮಾಜಿಕ ಬಹಿಷ್ಕಾರಗಳ ಮಾಡುವ ಮೂಲಕ ಸಮಾಜದಲ್ಲಿ ನಾವು ಮತ್ತು ಅವರು ಎಂಬ ಧೃವಗಳು ಸೃಷ್ಟಿಯಾಗಲು ಅವರು ಕಾರಣರಾಗಿದ್ದಾರೆ. ಹಿಂಸಾಚಾರಗಳ ಪರವಾಗಿರುವವರೂ ಸಹ ಬಗೆಯ ದ್ವೇಷ, ಹಗೆತನ, ಕ್ರೋಧ ಮತ್ತು ತಿರಸ್ಕಾರಗಳ  ಘಟನೆಗಳಿಗೆ ಮೂಕಪ್ರೇಕ್ಷಕರಾಗುವ ಮೂಲಕ ಅನ್ಯಾಯದ ಮುಂದುವರೆಕೆಗೆ ಕೊಡುಗೆ ನೀಡುತ್ತಿದ್ದಾರೆ.

 

ಚಿಂತೆಗೀಡುಮಾಡುವ ವಿಷಯವೆಂದರೆ ದ್ವೆಷದ ಮನೋಭಾವವು ಸಾಮಜಿಕ ವೈರುಧ್ಯಗಳ ಪರಿಣಾಮವಾಗಿಯೋ ಅಥವಾ ಉದ್ಯೋಗಗಳನ್ನು ಪಡೆಯುವ ಸ್ಪರ್ಧೆಯ ಪರಿಣಾಮವಾಗಿಯೋ ಉದ್ಭವಿಸುತ್ತಿಲ್ಲ. ಏಕೆಂದರೆ ಹಾಲಿ ರಾಜಕೀಯ ಆಳ್ವಿಕೆಯಲ್ಲಿ ಅಂಥಾ ಸಂದರ್ಭವೇ ಇಲ್ಲ. ಉದಾಹರಣೆಗೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಯಾವ ರೀತಿಯಲ್ಲೂ ಬಹುಸಂಖ್ಯಾತರೊಡನೆ ಯಾವುದೇ ಸ್ಪರ್ಧೆ ಮಾಡುತ್ತಿಲ್ಲ. ಆದರೂ ಎರಡೂ ಸಮುದಾಯಗಳ ನಡುವಿನ ಸಂಬಂಧಗಳು ಮಾತ್ರ ಹದಗೆಟ್ಟಿದೆ. ಹೀಗೆ ಸಂಬಂಧಗಳು ಹದಗೆಟ್ಟಿರುವುದಕ್ಕೆ ಕಾರಣಗಳನ್ನು ಈಗ ಬಲಿಷ್ಟ ಭಾರತದ ಅಮೂರ್ತ ಕಲ್ಪನೆಯಲ್ಲಿ ಕಾಣಬಹುದು. ವ್ಯಕ್ತಿಗತ ಆಸಕ್ತಿಗಳಿಗೂ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ನಡುವೆ ಸೌಹಾರ್ದವನ್ನು ಬೆಸೆಯುವ ತಾರ್ಕಿಕ ಕಾರಣಗಳು ಮಾಯವಾಗಿ, ಜಾಗದಲ್ಲಿ ಅತಾರ್ಕಿಕ ಕಾರಣಗಳು ದೃಷ್ಟಿಕೋನಕ್ಕೆ ಪರಿಪೂರ್ಣತೆಯನ್ನು ಒದಗಿಸುತ್ತಿವೆ. ವಾಸ್ತವವಾಗಿ ಕಾಳಜಿಯುಳ್ಳ ನಾಗರಿಕರು ತಮ್ಮ ಗಮನವನ್ನು ಬಲಿಷ್ಟ ಭಾರತದ ಅಲ್ಪಾವಧಿಯ ಸಂಭ್ರಮಗಳಿ ಮಾತ್ರ  ತಮ್ಮ ಗಮನವನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಮೂಲಕ ಪ್ರಜ್ನಾಶೀಲ ಹಾಗೂ ಘನತೆಯುಳ್ಳ ಮನುಷ್ಯರನ್ನು ನಾಗರಿಕರನ್ನಾಗಿ ಒಳಗೊಳ್ಳುವ ಪ್ರಜ್ನಾವಂತ ಭಾರತದ ದೀರ್ಘಕಾಲೀನ ಹಿತಾಸಕ್ತಿಯಿಂದ ಅವರು ಬಹಳಷ್ಟು ದೂರಸರಿದಿದ್ದಾರೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಎನ್.ಆರ್.ಸಿ ಎನ್.ಪಿ.ಆರ್ ಹಾಗೂ ಸಿಎಎ ವಿರುದ್ಧ ದೇಶದ ಶೇ50ಕ್ಕೂ ಹೆಚ್ಚು ಜನ ಬೀದಿಗಿಳಿದಿದ್ದಾರೆ-ಪ್ರತಿಭಾ ಉಭಾಲೆ

ಭಟ್ಕಳ: ಪ್ರಸ್ತಾವಿತ ಎನ್.ಆರ್.ಸಿ, ಎನ್.ಪಿ.ಆರ್ ಹಾಗೂ ಸಿಎಎ ಎಂಬ ಕರಾಳ ಕಾನೂನಿನ ವಿರುದ್ಧ ದೇಶದ ಶೇ.50%ಕ್ಕೂ ಹೆಚ್ಚು ಜನರು ಬೀದಿಗೆ ಬಂದು ...

ಪ್ರಮಾಣಬದ್ಧ ಸಾಂವಿಧಾನಿಕತೆ

ಭಾರತದ ಸಂವಿಧಾನವೆಂಬುದು ಒಂದು ಪ್ರಮುಖವಾದ ನಿಯಮ-ನಿಯಂತ್ರಣಗಳ ದಾಖಲೆಯೆಂಬುದು ತೀರಾ ಇತ್ತೀಚಿನವರೆಗೂ ಒಂದು ಸಾಮಾನ್ಯ ಜ್ನಾನವೇ ...