ದುಬೈಯಿಂದ ಮರಳಿದ ವ್ಯಕ್ತಿಗೆ ಕೊರೋನಾ ಪಾಸಿಟಿವ್

Source: S O News service | By I.G. Bhatkali | Published on 28th June 2020, 5:37 PM | Coastal News |

ಭಟ್ಕಲ್: ಇತ್ತೀಚೆಗೆ ದುಬೈಯಿಂದ ಭಟ್ಕಳಕ್ಕೆ ಮರಳಿದ ವ್ಯಕ್ತಿಗೆ  ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ರವಿವಾರ ಬೆಳಿಗ್ಗೆ ಅವರನ್ನು ಕಾರವಾರದ ಕ್ರೀಮ್ಸ್  ಆಸ್ಪತ್ರೆಯ COVID ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಮೂಲಗಳ ಪ್ರಕಾರ, ಭಟ್ಕ ಳ ದ ಕಾರ್ಗದ್ದೆ ನಿವಾಸಿಯಾದ ಈ ವ್ಯಕ್ತಿ ಜೂನ್ 18 ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಭಟ್ಕಳ ತಲುಪಿದ್ದರು. ಅವರನ್ನು ಮೊದಲು ಅಧಿಕೃತವಾಗಿ ಉಡುಪಿಯಲ್ಲಿ ಕ್ವಾರೆಂಟಿನ್ ಮಾಡಲಾಯಿತು. ನಂತರ ಭಟ್ಕಳ ದಲ್ಲಿ ಮಜ್ಲೈಸ್ ಇಸ್ಲಹ ವ ತಂಜೀಮ್ ಅವರ ಪ್ರಯತ್ನದಿಂದ ಅವರನ್ನು ಖಾಸಗಿ ಹೋಟೆಲ್ ನಲ್ಲಿ ಕ್ವರೆಂಟ್ಟಿನ್ ಮಾಡಲಾಯಿತು.  ಇಂದು ಅವರ ವರದಿ COVID-19 ಪಾಸಿಟಿವ್ ಆಗಿದ್ದು ಈ ಹಿನ್ನೆಲೆಯಲ್ಲಿ ಕೂಡಲೇ ಸೋಂಕಿತನನ್ನು ಭಟ್ಕಳಡಿಂದ ಕಾರವಾರ ಕೋವಿದ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

Read These Next

ಭಟ್ಕಳ ಜಾಲಿ ಪಟ್ಟಣ ಪಂಚಾಯತ ಕೊನೆಯ ಸಭೆಯಲ್ಲಿ ಮೇಲ್ದರ್ಜೆಗೆರಲು ಸದಸ್ಯರ ಹಂಬಲ; ಮತ್ತೆ ಒಳಚರಂಡಿ ಬಗ್ಗೆ ಅಪಸ್ವರ

ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿಳಂಬ, ಕೊರೊನಾ ಆತಂಕ, ಒಳಚರಂಡಿ ಗದ್ದಲ ಇತ್ಯಾದಿ ಎಲ್ಲ ಗೊಂದಲವನ್ನು ಕಟ್ಟಿಕೊಂಡೇ ತಾಲೂಕಿನ ಜಾಲಿ ...

ಜಿಲ್ಲೆಯ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ : ಸಿಇಓ ಪ್ರಿಯಾಂಗ ಎಂ.

ಕಾರವಾರ : ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...

ಪ್ರತಿಭಾವಂತ ಕಬ್ಬಡ್ಡಿ ಆಟಗಾರ ಮನೋಜ್ ನಾಯ್ಕ ಹೃದಯಾಘಾತದಿಂದ ಸಾವು. ಕ್ರೀಡಾ ಪ್ರೇಮಿಗಳ ಕಂಬನಿ.

ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಪ್ರಮುಖ ಕಬಡ್ಡಿ ಆಟಗಾರ, ಅತ್ಯುತ್ತಮ ಆಲ್ ರೌಂಡರ್ ಭಟ್ಕಳದ ಮನೋಜ‌ ನಾಯ್ಕ ಹೃದಯಾಘಾತದಿಂದ ...