ನೂರು ಕೋಟಿ ಲಸಿಕೆ ಸಾಧನೆ: ಕರೋನ ವಾರಿಯರ್ಸ್ಗಳಿಗೆ ಅಭಿನಂದಿಸಿದ ಬಿಜೆಪಿ ಮಂಡಲ

Source: sonews | By MV Bhatkal | Published on 24th October 2021, 4:34 PM | Coastal News | Don't Miss |

ಭಟ್ಕಳ: ಬಿಜೆಪಿ ಮಂಡಲದ ವತಿಯಿಂದ  ಸರ್ಕಾರಿ ಆಸ್ಪತ್ರೆಯಲ್ಲಿ ಸನ್ಮಾನ್ಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಚಿತವಾಗಿ 100 ಕೋಟಿ  ಲಸಿಕೆಯನ್ನು ದೇಶದ ಜನತೆಗೆ   ಪೂರೈಸಿರುವ ಸಂಭ್ರಮದೊಂದಿಗೆ ಇದರ ಯಶಸ್ವಿಗೆ ಕಾರಣೀಕರ್ತರಾದ ಕರೋನ ವಾರಿಯರ್ಸ್ ಗಳಾದ ವೈದ್ಯರುಗಳಿಗೆ, ನರ್ಸ್ ಗಳಿಗೆ  ಹಾಗೂ ವೈದ್ಯಕೀಯ  ಸಿಬ್ಬಂದಿಗಳಿಗೆ ಹೂವನ್ನು ನೀಡಿ ಅಭಿನಂದಿಸಿ  ಸಿಹಿ ಹಂಚಲಾಯಿತು. 
ಈ ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿಗಳಾದ ಚಂದ್ರು ಎಸಳೆ ಅವರು ಮಾತನಾಡಿ  ಕೊರೋನಾ ಸಂದರ್ಭದಲ್ಲಿ  ವೈದ್ಯ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ, ಲಸಿಕಾ ವಿಚಾರಣೆ ಸಂದರ್ಭದಲ್ಲಿ ವೈದ್ಯ ಸಿಬ್ಬಂದಿಗಳ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಮಂಡಲದ ಅಧ್ಯಕ್ಷರಾದ ಶ್ರೀ ಸುಬ್ರಾಯ ದೇವಾಡಿಗ ಅವರು   ವೈದ್ಯ ಸಿಬ್ಬಂದಿಗಳನ್ನು ಸ್ವಾಗತಿಸಿ ಹೂವನ್ನು ನೀಡಿ, ಸಿಹಿ ವಿತರಣೆ ಮಾಡಿ, ಅಭಿನಂದಿಸಿದರು. 
ಕಾರ್ಯಕ್ರಮದಲ್ಲಿ   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಗೋವಿಂದ ನಾಯ್ಕ, ಮಂಡಲ ಪ್ರಭಾರಿಗಳಾದ  ಶ್ರೀ ಪ್ರಶಾಂತ್ ನಾಯ್ಕ,  ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ  ರವಿ ನಾಯ್ಕ,  ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀ ಸುರೇಶ್ ನಾಯ್ಕ, ವೈದ್ಯಾಧಿಕಾರಿಗಳಾದ ಸವಿತಾ ಕಾಮತ್ ಹಾಗೂ  ವೈದ್ಯ ಸಿಬ್ಬಂದಿಗಳು,  ಬಿಜೆಪಿ ಮಂಡಲ ಹಾಗೂ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Read These Next

ಭಟ್ಕಳ: ರಾಜ್ಯದ ವಿವಿದೆಡೆ ಮುಂದುವರೆದ ಮಳೆ; ಟೊಮ್ಯಾಟೋ ದರ ಮತ್ತೆ ಗಗನಕ್ಕೆ; ಮಹಾರಾಷ್ಟ್ರದತ್ತ ಮಾರಾಟಗಾರರು

ರಾಜ್ಯದಲ್ಲಿ ಮುಂದುವರೆದ ಮಳೆ ಕೃಷಿಕನ ಬದುಕಿನ ಮೇಲೆ ಬರೆ ಎಳೆಯುವಂತೆ ಮಾಡಿದೆ. ನಿರಂತರ ಮಳೆಯಿಂದಾಗಿ ವಿಶೇಷವಾಗಿ ಟೊಮ್ಯಾಟೋ ಬೆಳೆ ...

ಭಟ್ಕಳ: ಓಮೈಕ್ರಾನ್ ತಡೆಗೆ ಭಟ್ಕಳದಲ್ಲಿ ಚೆಕ್‍ಪೋಸ್ಟ್ ಕಾರ್ಯಾರಂಭ; ಸೋಡಿಗದ್ದೆ ಕ್ರಾಸ್, ಕುಂಟವಾಣಿಯಲ್ಲಿ ತಪಾಸಣೆ

ಕೊರೊನಾ ರೂಪಾಂತರಿ ಓಮೈಕ್ರಾನ್ ಸೋಂಕು ತಡೆಗೆ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿರುವಂತೆಯೇ, ಜಿಲ್ಲೆಯ ಗಡಿ ಪ್ರದೇಶವಾದ ...

ಸಂತ ಫ್ರಾನ್ಸಿಸ್ ಸ್ಮರಣಾರ್ಥ ಮುಂಡಳ್ಳಿ ಚರ್ಚನಿಂದ ಭಟ್ಕಳ ಬಂದರ್ ದೀಪಸ್ತಂಭದವರೆಗೆ ಕ್ರೈಸ್ತರ ಮೆರವಣಿಗೆ

.ಶ.1552ರಲ್ಲಿ ಇಹಲೋಕ ತ್ಯಜಿಸಿದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಮೃತ ದೇಹವನ್ನು ಭಟ್ಕಳ ಬಂದರಿನಲ್ಲಿ ಕೆಲ ಕಾಲ ಇರಿಸಿ ನಂತರ ಗೋವಾಗೆ ...

ಸಂತ ಫ್ರಾನ್ಸಿಸ್ ಸ್ಮರಣಾರ್ಥ ಮುಂಡಳ್ಳಿ ಚರ್ಚನಿಂದ ಭಟ್ಕಳ ಬಂದರ್ ದೀಪಸ್ತಂಭದವರೆಗೆ ಕ್ರೈಸ್ತರ ಮೆರವಣಿಗೆ

.ಶ.1552ರಲ್ಲಿ ಇಹಲೋಕ ತ್ಯಜಿಸಿದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಮೃತ ದೇಹವನ್ನು ಭಟ್ಕಳ ಬಂದರಿನಲ್ಲಿ ಕೆಲ ಕಾಲ ಇರಿಸಿ ನಂತರ ಗೋವಾಗೆ ...

ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ : ಡಿಸೆಂಬರ್ 10 ರಂದು ನಡೆಯುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ ಚುನಾವಣೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ...

ಮನೆ ಮನೆಗೆ ಲಸಿಕಾ ಮಿತ್ರ : ಜಿಲ್ಲೆಯಲ್ಲಿ ಹೆಚ್ಚಳವಾಯಿತು ಲಸಿಕೆ ಪಡೆಯುವವರ ಸಂಖ್ಯೆ

ಉಡುಪಿ : ಕೋವಿಡ್ ನಿಂದ ಗರಿಷ್ಠ ಸುರಕ್ಷತೆ ಪಡೆಯಲು 2 ಡೋಸ್ ಲಸಿಕೆಯನ್ನು ಪಡೆಯುವುದು ಅಗತ್ಯವಾಗಿದ್ದು, ಈಗಾಗಲೇ ಮೊದಲನೇ ಡೋಸ್ ಪಡೆದವರು ...