ಭಟ್ಕಳದ ಯುವಕರಿಂದ ಅರಬ್‍ರಾಷ್ಟ್ರ ಓಮನ್‍ನಲ್ಲಿಸಮುದ್ರ ಸೆಳೆತಕ್ಕೆ ಸಿಲುಕಿದ ಇಬ್ಬರ ರಕ್ಷಣೆ

Source: S.O. News Service | By I.G. Bhatkali | Published on 1st September 2020, 3:52 PM | Coastal News | Gulf News |

ಭಟ್ಕಳ: ಅರಬ್ ರಾಷ್ಟ್ರ ಓಮನ್‍ನಲ್ಲಿ ಸಮುದ್ರದ ಅಲೆಗಳ ನಡುವೆ ಸಿಲುಕಿ ಜೀವ ಉಳಿಸಿಕೊಳ್ಳಿಸಿಕೊಳ್ಳಲು ಗೋಗರೆಯುತ್ತಿದ್ದ ಅಲ್ಲಿನ ಇಬ್ಬರನ್ನು ಭಟ್ಕಳ ಮೂಲದ ಯುವಕರು ದಡಕ್ಕೆ ತಂದು ಪಾರು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಭಟ್ಕಳ ಮೂಲದ ಶಾಹೀದ್ ರುಕ್ನುದ್ದೀನ್, ಮೊಹಿದೀನ್ ಅನಾಸ್, ಮುದಾಸೀರ್ ಕೋಲಾ ಓಮನ್‍ನ ಕರಾವಳಿ ತೀರ ಸೀಬ್‍ನಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಶುಕ್ರವಾರ ರಾತ್ರಿ ಮೀನು ತರಲು ಸಮುದ್ರ ತೀರಕ್ಕೆ ತೆರಳಿದ್ದರು. ಮೀನು ಸಿಗದೇ ಮನೆಗೆ ವಾಪಸ್ಸಾಗಬೇಕು ಎನ್ನುವಷ್ಟರಲ್ಲಿ ತಡ ರಾತ್ರಿ 11.30 ಗಂಟೆಯ ಸುಮಾರಿಗೆ ಯಾರೋ ಕೂಗಿಕೊಂಡ ಶಬ್ದ ಕೇಳಿದ್ದು, ಆರಂಭದಲ್ಲಿ ಯಾರಾದರೂ ತಮಾಷೆ ಮಾಡಬಹುದು ಎಂದು ಸುಮ್ಮನಾಗಿದ್ದಾರೆ. ಸರಿಸುಮಾರು 15-20 ನಿಮಿಷ ಅಲ್ಲಿಯೇ ನಿಂತಿದ್ದಾರೆ.

ಆದರೆ ಕೂಗಾಟ ಹೆಚ್ಚುತ್ತಿರುವಂತೆಯೇ ತಮ್ಮ ಬಳಿ ಇದ್ದ ಟಾರ್ಚ ಬೆಳಕನ್ನು ಸಮುದ್ರದ ಅಲೆಗಳ ನಡುವೆ ಹರಿಸಿದ್ದಾರೆ. ಟಾರ್ಚ್ ಬೆಳಕನ್ನು ಕಂಡೊಡನೆ ಸಮುದ್ರದಲ್ಲಿ ವ್ಯಕ್ತಿಯೋರ್ವರು ರಕ್ಷಣೆಗಾಗಿ ಕೈ ಮಾಡುತ್ತಿರುವುದು ಗೋಚರಿಸಿದೆ. ಸಮುದ್ರದಲ್ಲಿ ಬಡಿದುಕೊಳ್ಳುತ್ತಿರುವವರ ಭಾಷೆ ಗೊತ್ತಾಗದಿದ್ದರೂ ಅಲ್ಲಿದ್ದ ವ್ಯಕ್ತಿಗಳು ಅಪಾಯದಲ್ಲಿರುವುದು ಖಚಿತವಾಗಿದೆ. ಕೂಡಲೇ ಸಮುದ್ರಕ್ಕೆ ಹಾರಿ ಇಬ್ಬರು ಓಮನ್ ಪ್ರಜೆಗಳನ್ನು ದಡ ಸೇರಿಸಿದ್ದಾರೆ. ಆ ಹೊತ್ತಿಗಾಗಲೇ ಇವರೊಂದಿಗೆ ಇದ್ದ ಮತ್ತೋರ್ವ ಓಮನ್ ಪ್ರಜೆ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ಮಾಹಿತಿ ಸ್ಥಳೀಯರಿಗೆ ಸಿಕ್ಕಿದ್ದು, ದೋಣಿಯ ಮೂಲಕ ಆತನನ್ನೂ ರಕ್ಷಿಸಿ ದಡಕ್ಕೆ ತರಲಾಗಿದೆ.

ಲಭ್ಯ ಮಾಹಿತಿಯ ಪ್ರಕಾರ ಮೂವರು ಓಮನ್ ಪ್ರಜೆಗಳು ಸಮುದ್ರದಲ್ಲಿ ದೋಣಿ ವಿಹಾರಕ್ಕೆ ತೆರಳಿದ್ದು, ಕಡಲ ಅಬ್ಬರದಿಂದಾಗಿ ದೋಣಿ ಮುಳುಗಿ ಮೂವರು ಅಪಾಯಕ್ಕೆ ಸಿಲುಕಿದ್ದರು. ಓಮನ್ ಪೊಲೀಸರು ರಕ್ಷಣಾ ಕಾರ್ಯದ ಮಾಹಿತಿಯನ್ನು ಪಡೆದಿದ್ದಾರೆ. ಭಟ್ಕಳದ ಯುವಕರ ಸಾಹಸ ಓಮನ್‍ನಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಅಲ್ಲಿನ ಮಾಧ್ಯಮಗಳು ರಕ್ಷಣಾ ಕಾರ್ಯವನ್ನು ಶ್ಲಾಘಿಸಿವೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.