ಹೊಸದಿಲ್ಲಿ: ತೈಲ ಇನ್ನಷ್ಟು ತುಟ್ಟಿ

Source: S.O. News service | Published on 15th February 2021, 7:38 PM | National News |

ಹೊಸದಿಲ್ಲಿ: ತೈಲ ಬೆಲೆಗಳು ಸತತ ಐದನೇ ದಿನವೂ ಏರಿಕೆಯಾಗಿದ್ದು, ಶನಿವಾರ ಪೆಟ್ರೋಲ್ ದರದಲ್ಲಿ ಲೀಟರ್‌ಗೆ 30 ಪೈಸೆ, ಡೀಸೆಲ್ ದರದಲ್ಲಿ 36 ಪೈಸೆ ಹೆಚ್ಚಳವಾಗಿದೆ. ಇದರಿಂದಾಗಿ ರಾಜಧಾನಿ 23 ಹೊಸದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 88.44 ರೂ. ಹಾಗೂ ಡೀಸೆಲ್ ಬೆಲೆ 78.74 ರೂ. ಆಗಿದೆ. ಡೀಸೆಲ್ ಬೆಲೆಯಲ್ಲಿನ ಹೆಚ್ಚಳ

ಈ ವರ್ಷದ ಗರಿಷ್ಠ ಏರಿಕೆಯಾಗಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 95 ರೂ. ಆಗಿದ್ದು, ಇದು ದೇಶದಲ್ಲೇ ಅಧಿಕವಾಗಿದೆ. ಡೀಸೆಲ್ ಬೆಲೆ ಕೂಡಾ ಮುಂಬೈಯಲ್ಲಿ ಲೀಟರ್‌ಗೆ 90 ರೂ. ಸನಿಹಕ್ಕೆ ಬಂದಿದೆ. ಇತರ ಎಲ್ಲಾ ಮೆಟ್ರೋ ನಗರಗಳಲ್ಲಿಯೂ ಪೆಟ್ರೋಲ್ ದರವು ಲೀಟರ್‌ಗೆ 90 ರೂ. ಗಡಿಯಲ್ಲಿದೆ ಅಥವಾ ಅದಕ್ಕಿಂತ ತುಸು ಹೆಚ್ಚಿದೆ. ದಿಲ್ಲಿ ಹೊರತುಪಡಿಸಿ ಉಳಿದ ಮೆಟ್ರೋ ನಗರಗಳಲ್ಲಿ ಡೀಸೆಲ್ ದರವು 80 ರೂ. ಗಡಿಯನ್ನು ದಾಟಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಒಂದೇ ದಿನದಲ್ಲಿ ಬ್ಯಾರೆಲ್ ಗೆ ಶೇ.2ರಷ್ಟು ಏರಿಕೆಯಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ತೈಲ ದರಗಳಲ್ಲಿ ಹೆಚ್ಚಳವಾಗಲು ಕಾರಣವೆನ್ನಲಾಗಿದೆ. ಆದರೆ, ಕೊರೋನ ವೈರಸ್ ಹಾವಳಿ ಮತ್ತೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಜಗತ್ತಿನ ವಿವಿಧೆಡೆ ಲಾಕ್‌ಡೌನ್‌ ಹೇರಲಾಗಿರುವುದರಿಂದ ತೈಲ ಬೆಲೆಗಳು ಶೀಘ್ರದಲ್ಲೇ ಇಳಿಮುಖವಾಗುವ ನಿರೀಕ್ಷೆಯಿದೆಯೆಂದು ತಜ್ಞರು ಹೇಳಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...