ಒಡಿಶಾ:ಬ್ಯಾಂಕ್ ಲೂಟಿಕೋರರನ್ನು ಬಡಿದು ಕೊಂದ ಜನತೆ

Source: so english | By Arshad Koppa | Published on 6th January 2017, 2:05 PM | National News | Incidents | Don't Miss |

(ಒಡಿಶಾ): ಬ್ಯಾಂಕ್ ಒಂದನ್ನು ಲೂಟಿ ಮಾಡಿ ಓಡಿ ಹೋಗುತ್ತಿದ್ದಾಗ ಸಿಕ್ಕಿಬಿದ್ದ ಇಬ್ಬರು ಕಳ್ಳರನ್ನು ಜನರು ಹಿಗ್ಗಾ ಮುಗ್ಗಾ ಥಳಿಸಿದ ಪರಿಣಾಮವಾಗಿ ಇಬ್ಬರು ಅಲ್ಲಿಯೇ ಪ್ರಾಣ ತ್ಯಜಿಸಿದ್ದಾರೆ.

ಮೋಟಾರ್ ಸೈಕಲ್ ಬಂದ ಸಶಸ್ತ್ರ ಕಳ್ಳರು ರಾಣಾಪುರ ಪೊಲೀಸ್ ಠಾಣೆಯಮಿತಿಗಳನ್ನು ಅಡಿಯಲ್ಲಿ ಕಸಾಂದಾ ಎಂಬ ಗ್ರಾಮದ ಒಂದು ರಾಷ್ಟ್ರೀಕೃತ ಬ್ಯಾಂಕ್ ಗೆ ಮುತ್ತಿಗೆ ಹಾಕಿ ರೂ 3 ಲಕ್ಷ ಲೂಟಿದ್ದಾರೆ ಎಂದು  ಉಪ ವಿಭಾಗೀಯ ಪೊಲೀಸ್ ಅಧಿಕಾರಿ  ಜಗನ್ನಾಥ ರೆಡ್ಡಿಯವರು ಹೇಳಿದರು.

ಮೂರು ಕಚ್ಚಾ ಬಾಂಬುಳನ್ನು ಮತ್ತು ಚೂಪಾದ ಶಸ್ತ್ರಾಸ್ತ್ರಗಳ ತೋರಿಸುವ ಮೂಲಕ ಅವರು ಸಿಬ್ಬಂದಿ ಮತ್ತು ಗ್ರಾಹಕರಿಗೆ ಬೆದರಿಕೆ ಒಡ್ಡಿ ನಂತರ ನಗದು ಲೂಟಿ ಮಾಡಿ ಬ್ಯಾಂಕ್ ನಿಂದ ಹೊರಬಂದಿದ್ದಾರೆ. ಆದರೆ ಸ್ಥಳೀಯರು ಅವರನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಕಳ್ಳರು ಒಂದು ಬಾಂಬ್ ಎಸೆದಿದ್ದಾನೆ. 

ಆದರೆ ಬಾಂಬಿಗೂ ಬೆದರದ ಜನ ದೊಡ್ಡ ಗುಂಪಿನಲ್ಲಿ ಈ ಮೂವನ್ನೂ ಅಡ್ಡಗಟ್ಟಿ ಹಿಗ್ಗಾ ಮುಗ್ಗಾ ಥಳಿಸಿದರು ಈ ಥಳಿತದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮೂರನೆಯವನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮೃತರ ಪರಿಚಯ ಇನ್ನೂ ಆಗಿಲ್ಲ ಹಾಗೂ ಮೂರನೆಯ ವ್ಯಕ್ತಿ ಪ್ರಜ್ಞೆ ಪಡೆದ ಬಳಿಕವಷ್ಟೇ ಇತರ ವಿವರಗಳು ಲಭ್ಯವಾಗಲಿವೆ.

Read These Next

ಅಸ್ಸಾಂನಲ್ಲಿ ಭಾರೀ ಮಳೆ: ಅಣೆಕಟ್ಟು ಒಡೆದು ಗ್ರಾಮಗಳು ಜಲಾವೃತ; ಬ್ರಹ್ಮಪುತ್ರ ನದಿ ನೀರಿನ ಮಟ್ಟದಲ್ಲಿ ಏರಿಕೆ

ಅಸ್ಸಾಂನಲ್ಲಿ ಭಾರೀ ಮಳೆ: ಅಣೆಕಟ್ಟು ಒಡೆದು ಗ್ರಾಮಗಳು ಜಲಾವೃತ; ಬ್ರಹ್ಮಪುತ್ರ ನದಿ ನೀರಿನ ಮಟ್ಟದಲ್ಲಿ ಏರಿಕೆ

ರೋಗಿ ಮನೆ ಬಳಿ ಚಿಕಿತ್ಸೆ ಕಲ್ಪಿಸುವ ‘ಧನ್ವಂತರಿ ರಥ್’ ಯೋಜನೆ ದೇಶಾದ್ಯಂತ ಜಾರಿಗೊಳಿಸಬೇಕು: ಪ್ರಧಾನಿ ಮೋದಿ

ರೋಗಿ ಮನೆ ಬಳಿ ಚಿಕಿತ್ಸೆ ಕಲ್ಪಿಸುವ ‘ಧನ್ವಂತರಿ ರಥ್’ ಯೋಜನೆ ದೇಶಾದ್ಯಂತ ಜಾರಿಗೊಳಿಸಬೇಕು: ಪ್ರಧಾನಿ ಮೋದಿ