ಅಕ್ಟೋಬರ್ ೨ ರಿಂದ ೩೦ರವರೆಗೆ ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆ

Source: sonews | By Staff Correspondent | Published on 25th September 2020, 6:26 PM | Coastal News |

ಘನ ಮತ್ತು ದ್ರವ ತ್ಯಾಜ್ಯ ನರ‍್ವಹಣಾ ಘಟಕಗಳಿಗೆ  ಏಕರೂಪಬ್ರ‍್ಯಾಂಡಿಂಗ್
ಗಾಂಧಿ ಜಯಂತಿಯಂದು ಗೋಕರ್ಣ ದಲ್ಲಿ ಚಾಲನೆ
   

ಕಾರವಾರ: ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಘನ ತ್ಯಾಜ್ಯ ನರ‍್ವಹಣೆ ಕುರಿತಂತೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಕ್ಟೋಬರ್ ೨ ರಿಂದ ೩೧ರವರೆಗೆ ಸ್ವಚ್ಛೋತ್ಸವ -ನಿತ್ಯೋತ್ಸವ ಮಾಸಾಚರಣೆ ಕರ‍್ಯಕ್ರಮವನ್ನು ಆಯೋಜಿಸಲು ಉತ್ತರಕನ್ನಡ ಜಿಲ್ಲಾ ಪಂಚಾಯತ್ ಮುಂದಾಗಿದೆ. 

ರಾಜ್ಯದ ಪ್ರತಿಯೊಂದು ಗ್ರಾಮವು ಸ್ವಚ್ಛ, ಸುಂದರ, ಆರೋಗ್ಯಕರ ಮತ್ತು ತ್ಯಾಜ್ಯ ಮುಕ್ತವಾಗಿಸುವ ಉದ್ದೇಶದಿಂದ  ಗ್ರಾಮೀಣ ಕುಡಿಯುವ ನೀರು ಮತ್ತು ನರ‍್ಮಲ್ಯ ಇಲಾಖೆಯು ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ರಾಜ್ಯಾದ್ಯಂತ ತ್ಯಾಜ್ಯ ಸಂಪನ್ಮೂಲ ನರ‍್ವಹಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ನರ‍್ಮಿಸಲಾಗುವ ತ್ಯಾಜ್ಯ ನರ‍್ವಹಣಾ ಘಟಕದ ಸ್ವಚ್ಛ ಸಂಕರ‍್ಣವು ಏಕರೂಪದ ಬಣ್ಣ, ಚಿಹ್ನೆ, ಸಂದೇಶ ಮತ್ತು ವಿನ್ಯಾಸವನ್ನು ಹೊಂದಿರಬೇಕು ಎಂಬ ಉದ್ದೇಶದಿಂದ ತ್ಯಾಜ್ಯ ನರ‍್ವಹಣಾ ಘಟಕಗಳ ಏಕರೂಪದ ಬ್ರ‍್ಯಾಂಡಿಂಗ್ ನ್ನು ವಿನ್ಯಾಸಪಡಿಸಲಾಗಿದೆ. 
ಸ್ವಚ್ಛ ಸಂಕರ‍್ಣ, ಘನ ತ್ಯಾಜ್ಯ ನರ‍್ವಹಣಾ ಘಟಕದ ವಿನ್ಯಾಸವು ರ‍್ತುಲ ರ‍್ಥಿಕತೆಯ ಮಾದರಿಯಿಂದ ಸ್ಫರ‍್ತಿ ಪಡೆದಿದೆ. ಇಲ್ಲಿ ತಿರಸ್ಕರಿಸಬಹುದಾದ ಮತ್ತು ತಿರಸ್ಕರಿಸಿದ ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ ಉನ್ನತೀಕರಿಸಿದ ಮತ್ತು ಉಪಯುಕ್ತ ದಿನ ನಿತ್ಯದ ವಸ್ತುಗಳಾಗಿ ಪರಿರ‍್ತಿಸಲಾಗುತ್ತದೆ. ಇನ್ನು ಮರು ಬಳಕೆ ಮಾಡಲಾಗದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಸ್ವಚ್ಚ ಸಂಕರ‍್ಣದಲ್ಲಿ ಘನ ತ್ಯಾಜ್ಯ, ಇ-ತ್ಯಾಜ್ಯ, ಜೈವಿಕ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಮೀಸಲಾದ ಪ್ರದೇಶಗಳೊಂದಿಗೆ ಸ್ವಯಂ ಸುಸ್ಥಿರ ವ್ಯವಸ್ಥೆ ಒಳಗೊಂಡ ಪರಿಸರ ಉದ್ಯಾನವನದ ಅನುಭವ ನೀಡುವ ಹಿನ್ನಲೆಯಲ್ಲಿ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಘನ ತ್ಯಾಜ್ಯ ಸಂಪನ್ಮೂಲ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯಾದ್ಯಂತ ೪೦೦ಕ್ಕೂ ಅಧಿಕ ಘಟಕಗಳು ಪರ‍್ಣಗೊಂಡು ಕರ‍್ಯನರ‍್ವಹಣೆಯ ಹಂತದಲ್ಲಿದೆ. ಹೀಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗೌರವ ಸೂಚಕವಾಗಿ ೧೫೦ನೇ ಜಯಂತಿ ರ‍್ಷಾಚರಣೆಯ ಸಮಾರೋಪ ಸಂರ‍್ಭದಲ್ಲಿ ರಾಜ್ಯದ ಜನರಿಗೆ ಸ್ವಚ್ಛ ಸಂಕರ‍್ಣ ಘನ ತ್ಯಾಜ್ಯ ನರ‍್ವಹಣೆಯ ಘಟಕಗಳನ್ನು ನರ‍್ಮಿಸಲಾಗುತ್ತಿದೆ.

ಹೀಗಾಗಿ ಅಕ್ಟೋಬರ್ ೨  ರಂದು ತ್ಯಾಜ್ಯ ನರ‍್ವಹಣಾ ಘಟಕಗಳ ಬ್ರ‍್ಯಾಂಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡುವ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ತ್ಯಾಜ್ಯ ನರ‍್ವಹಣಾ ಘಟಕದ ನರ‍್ಮಾಣದ ಕಾಮಗಾರಿ ಪರ‍್ಣಗೊಂಡು ತ್ಯಾಜ್ಯ ಸಂಗ್ರಹಕ್ಕಾಗಿ ವಾಹನ ಖರೀದಿ ಮಾಡಿರುವ ಹಾಗೂ ಪ್ರಸ್ತುತ ತ್ಯಾಜ್ಯ ನರ‍್ವಹಣೆ ಚಾಲ್ತಿಯಲ್ಲಿರುವ ಮಾದರಿ ಗ್ರಾಮ ಪಂಚಾಯಿತಿಯೊಂದನ್ನು ಬ್ರ‍್ಯಾಂಡಿಂಗ್ ಮಾಡಲು ಆಯ್ಕೆ ಮಾಡಲಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋರ‍್ಣ ಮತ್ತು ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮ ಪಂಚಾಯತ್ ನ್ನು ಸ್ವಚ್ಛ ಸಂಕರ‍್ಣ ತ್ಯಾಜ್ಯ ಸಂಪನ್ಮೂಲ ನರ‍್ವಹಣಾ ಘಟಕವನ್ನು ಬ್ರ‍್ಯಾಂಡಿಂಗ್ ಮಾಡಲು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗೋರ‍್ಣ ಗ್ರಾಮ ಪಂಚಾಯಿತಿಯಲ್ಲಿ ನರ‍್ಮಿಸಲಾದ ತ್ಯಾಜ್ಯ ನರ‍್ವಹಣಾ ಘಟಕವನ್ನು   ವಿನ್ಯಾಸಪಡಿಸಿರುವ ಮಾದರಿಯಲ್ಲಿ ಸಂಪರ‍್ಣ ಬ್ರ‍್ಯಾಂಡಿಂಗ್ ಮಾಡಿ ಅಕ್ಟೋಬರ್ ೨ ರಂದು ಗಾಂಧೀ ಜಯಂತಿ ದಿನದಂದು ಘಟಕವನ್ನು ಉದ್ಘಾಟಿಸಲಾಗುತ್ತಿದೆ. 

ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಏಕರೂಪ ಬ್ರ‍್ಯಾಂಡಿಂಗ್ ಮಾಡುವ ನಿಮಿತ್ತ ಉತ್ತರಕನ್ನಡ ಜಿಲ್ಲಾ ಪಂಚಾಯತ್ ಅಕ್ಟೋಬರ್ ೨ ರಂದು ಗೋರ‍್ಣ ಗ್ರಾಮ ಪಂಚಾಯಿತಿಯನ್ನು ಹಾಗೂ ಅ.೧೫ ರಂದು ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ. ಉಳಿದಂತೆ ಜಿಲ್ಲೆಯಲ್ಲಿ ಈವರೆಗೆ ಘನತ್ಯಾಜ್ಯ ವಿಲೇವಾರಿ ಘಟಕ ನರ‍್ಮಾಣ ಮಾಡಿರುವ ಎಲ್ಲಾ ಘಟಕಗಳಲ್ಲಿ ತ್ಯಾಜ್ಯ ವಿಲೇವಾರಿ ಆರಂಭವಾಗುವಂತೆ ಕರ‍್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾ ಪಂಚಾಯತ್ ಮುಂದಾಗಿದೆ.

ಗ್ರಾಮೀಣ ರ‍್ನಾಟಕವನ್ನು ಸ್ವಚ್ಛ ಸುಂದರವಾಗಿಸುವ ನಿಟ್ಟಿನಲ್ಲಿ ಇದು ಒಂದು ಮೈಲಿಗಲ್ಲು ಎನ್ನಬಹುದಾಗಿದೆ. ಇದರಿಂದ ಗ್ರಾಮೀಣ ರ‍್ನಾಟಕದ ಜನರು ಸ್ವಚ್ಛೋತ್ಸವನ್ನು ನಿತ್ಯ ಆಚರಿಸಲು ಇದು ಸಹಕಾರಿಯಾಗಲಿದೆ. ಹೀಗಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯದ ನರ‍್ವಹಣೆ, ವಿಲೇವಾರಿ ಕುರಿತು ವ್ಯಾಪಕವಾದ ಜಾಗೃತಿ ಮೂಡಿಸಲು ಉದ್ದೇಶದೊಂದಿಗೆ ಅಕ್ಟೋಬರ್ ೨ ರಿಂದ ೩೧ರವರೆಗೆ ಸ್ವಚ್ಛೋತ್ಸವ ನಿತ್ಯೋತ್ಸವ   ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.  

ಈ ಹಿನ್ನಲೆಯಲ್ಲಿ ಒಂದು ತಿಂಗಳ ಕಾಲ ನಡೆಯುವ ಈ ಮಾಸಾಚರಣೆಯ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳ ಹಂತದಲ್ಲಿ ವಿವಿಧ ಜಾಗೃತಿ ಕರ‍್ಯಕ್ರಮಗಳನ್ನು ಹಮ್ಮಿಕೊಂಡು ಸ,ಮುದಾಯದಲ್ಲಿ ತ್ಯಾಜ್ಯ ನರ‍್ವಹಣೆ, ವಿಲೇವಾರಿ, ಸ್ವಚ್ಚತಾ ಶ್ರಮದಾನ, ವಸ್ತು ಪ್ರರ‍್ಶನ, ಉದ್ಘಾಟನಾ ಕರ‍್ಯ, ಪ್ರಬಂಧ ಸ್ರ‍್ಧೆ ಸೇರಿದಂತೆ ವಿವಿಧ ಜನ ಜಾಗೃತಿ ಕರ‍್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಕರ‍್ಯನರ‍್ವಾಹಕ ಅಧಿಕಾರಿ ಎಂ ರೋಶನ್ ತಿಳಿಸಿ
 

Read These Next