ಮಂಗಳ ಗ್ರಹದ ಆಚ್ಚಾದನೆ ವೀಕ್ಷಣೆ

Source: SO News | By Laxmi Tanaya | Published on 20th April 2021, 8:32 AM | Coastal News | Don't Miss |

ಮಂಗಳೂರು  : ಖಗೋಳದ ಅಪರೂಪ ವಿದ್ಯಮಾನವಾದ ಚಂದ್ರನಿಂದ ಮಂಗಳ ಗ್ರಹದ ಆಚ್ಚಾದನೆಯನ್ನು  ಎಪ್ರಿಲ್ 17 ರಂದು ಸಂಜೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದೂರದರ್ಶಕಗಳ ಮೂಲಕ ವೀಕ್ಷಿಸಲಾಯಿತು.  

ಈ ವಿದ್ಯಮಾನದ ಆರಂಭವನ್ನು ಸಾಯಂಕಾಲದ ಸೂರ್ಯನ ಬೆಳಕಿನ ಪ್ರಖರತೆಯಿಂದ ನೋಡಲಾಗದಿದ್ದರೂ ಕೊನೆಯಲ್ಲಿ ರಾತ್ರಿ ಸುಮಾರು 7.28ರ ವೇಳೆಗೆ ಮಂಗಳ ಗ್ರಹ ಚಂದ್ರನ ಹಿಂದೆ ಪುನಃ ಗೋಚರವಾದಾಗ ಸ್ಪಷ್ಟವಾಗಿ ದೂರದರ್ಶಕದಲ್ಲಿ ಕಂಡುಬಂದಿತು. ಇಲ್ಲಿ ಸೆರೆಹಿಡಿಯಲಾದ ಛಾಯಾಚಿತ್ರಗಳನ್ನು ದೇಶದ ಇತರ ತಾರಾಲಯಗಳು ಹಾಗೂ ಹವ್ಯಾಸಿ ಖಗೋಳಶಾಸ್ತ್ರಜ್ಞರು ನಡೆಸಿದ ಸಂವಹನ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಪ್ರದರ್ಶಿಸಲಾಯಿತು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...