ಕೆನಡಾಕ್ಕೆ ವಲಸೆ ಹೋಗುವ ಭಾರತೀಯರ ಸಂಖ್ಯೆ; ಕಳೆದ 10 ವರ್ಷಗಳಲಿ ಮೂರು ಪಟ್ಟು ಹೆಚ್ಚಳ

Source: Vb | By I.G. Bhatkali | Published on 12th March 2023, 1:04 PM | National News |

ಹೊಸದಿಲ್ಲಿ: ಕೆನಡಕ್ಕೆ ವಲಸೆ ಹೋಗುವ ಭಾರತೀಯರ ಸಂಖ್ಯೆಯು 2013ರಿಂದೀಚೆಗೆ ಮೂರು ಪಟ್ಟು ಹೆಚ್ಚಾಗಿರುವುದು ನೂತನ ದತ್ತಾಂಶಗಳಿಂದ ತಿಳಿದುಬಂದಿದೆ.

ಕೆನಡದ ಖಾಯಂ ನಿವಾಸಿಗಳಾದ ಭಾರತೀಯರ ಸಂಖ್ಯೆಯು 2013ರಲ್ಲಿ 32,828ರಷ್ಟಿದ್ದುದು 2022ರಲ್ಲಿ 1,18,095ಕ್ಕೇರಿದ್ದು, ಶೇ.260ರಷ್ಟು ಹೆಚ್ಚಳವಾಗಿದೆ. ಈ 2013ರಿಂದೀಚೆಗೆ ಪ್ರತೀ ವರ್ಷವೂ ಈ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿರುವುದಾಗಿ ಕೆನಡ ಸರಕಾರ ಪ್ರಕಟಿಸಿರುವ ಅಂಕಿಅಂಶಗಳು ಸೂಚಿಸಿವೆ.

2015ರಲ್ಲಿ ಕೆನಡವು ವಿದೇಶದಲ್ಲಿನ ಅತ್ಯಂತ ಪರಿಣಿತ ಉದ್ಯೋಗಿಗಳಿಗೆ ಖಾಯಂ ವಾಸ್ತವ್ಯದ ಆಹ್ವಾನದ ಕೊಡುಗೆಯನ್ನು ನೀಡುವ ತರಿತ ಪ್ರವೇಶ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ2017ರಿಂದ 2021ರವರೆಗಿನ ಆಡಳಿತಾವಧಿಯಲ್ಲಿ ಕೆನಡಕ್ಕೆ ವಲಸೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಜಿಗಿತವುಂಟಾಗಿತ್ತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...