ಕಿಸಾನ್ ಸಮ್ಮಾನ ಫಲಾನುಭವಿಗಳ ಹೆಸರು ನೋಂದಣೆಗೆ ಸೂಚನೆ

Source: so news | By Manju Naik | Published on 19th June 2019, 7:24 PM | Coastal News | Don't Miss |

ಭಟ್ಕಳ: ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ, ಪಿಎಮ್ ಕಿಸಾನ್ ಯೋಜನೆ ಅಡಿಯಲ್ಲೂ ಬರುವ ಎಲ್ಲಾ  ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ ಆರು ಸಾವಿರ ರೂಪಾಯಿಯನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು 3 ಕಂತುಗಳಲ್ಲಿ ನೀಡಲಾಗುವುದೆಂದು ಮಂಗಳವಾರ ತಹಶೀಲ್ದಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ ವಿ.ಎನ್.ಬಾಡ್ಕರ್   ಈ ಯೋಜನೆ ಅಡಿಯಲ್ಲಿ ಬರುವ ಎಲ್ಲಾ ಫಲಾನುಭವಿ ರೈತರು ಇದೆ ಬರುವ ಜೂನ್ 31ಕೊನೆಯ ದಿನಾಂಕ ಆಗಿರುವುದರಿಂದ 10 ದಿನಗಳ ಒಳಗಾಗಿ ಎಲ್ಲಾ ರೈತರು ಅರ್ಜಿಸಲ್ಲಿಸಬೇಕು ಹಾಗೆ ಅರ್ಜಿ ಜೊತೆಯಲ್ಲಿ ಜಾಗದ ಪಹಣೆ ಪತ್ರಿಕೆ(ರೆಕಾರ್ಡ್ ಉತ್ತರ) ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ ಹಾಗೂ ಅರ್ಜಿದಾರ ಫೋಟೋ ಸೇರಿಸಿ ಗ್ರಾಮ ಪಂಚಾಯಿತ, ರೈತ ಸಂಪರ್ಕ ಕೇಂದ್ರ ಅಥವಾ ಅಟಲ್ ಜೀ ಸ್ನೇಹ ಕೇಂದ್ರಗಳಲ್ಲಿ 10 ದಿನದ ಒಳಗಾಗಿ 3 ಕೆಂದ್ರಗಳಲ್ಲಿ ಯಾವುದಾದರೂ ಒಂದು ಕೇಂದ್ರದಲ್ಲಿ ಅರ್ಜಿ ಸಲ್ಲಿಸ ಬಹುದಾಗಿದೆ. ತಾಲೂಕಿನಲ್ಲಿ ಕೃಷಿ ಗಣತಿಯ ಪ್ರಕಾರ19466 ಫಲಾನುಭವಿಗಳಿದ್ದು ಇದರಲ್ಲಿ ಈಗಾಗಲೇ 2373 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಲ್ಲಿ ಸಂವಿಧಾನ ಹುದ್ದೆ,  ಮಂತ್ರಿ, ರಾಜ್ಯ ಮಂತ್ರಿ, ಅಥವಾ ಲೋಕಸಭಾ ಸದಸ್ಯ,  ಮುನ್ಸಿಪಾಲ್ ಕಾಪೋರೇಟರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ವೈದ್ಯರು, ಅಭಿಯಂತರರು, ವಕೀಲರು, ಚಾರ್ಟೆಡ್ ಅಕೌಂಟೆಂಟ್ ಹಾಗೂ ವಾಸ್ತುಶಿಲ್ಪ ಮುಂತಾದ ವೃತ್ತಿಪರ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವವರಿಗೆ ಈ ಯೋಜನೆ ಅರ್ಜಿಸಲ್ಲಿಸಲು ಅವಕಾಶ ಹೊಂದಿರುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿ ನಂತರ ತಾಲೂಕಿನ ರೈತರಿರಿಗೆ ಹಾಗೂ ರೈತ ಮುಖಂಡರು ಸಭೆ ಕರೆಯಲಾಯಿತು
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾ ಅಧಿಕಾರಿ ಪ್ರಭಾರಕ ಚಿಕ್ಕನಮನೆ, ವಿ.ಎಲ್. ನಾಯ್ಕ, ಜಿ.ಎಲ್.ನಾಯ್ಕ ಕೃಷಿ ಅಧಿಕಾರಿ ಮಾವಳ್ಳಿ, ಜಿ.ಎಲ್ ನಾಯ್ಕ ಕೃಷಿ ಅಧಿಕಾರಿ ಸೂಸಗಡಿ, ಜಿ.ಎಲ್ ನಾಯ್ಕ ಕೃಷಿ ಅಧಿಕಾರಿ ಮುಂತಾದವರು ಉಪಸ್ಥಿತರಿದ್ದರು.

Read These Next

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’