ಅಡಗಿಕೊಳ್ಳಲು ಹೇಡಿಯಲ್ಲ: ಶಾಸಕಿ ರೂಪಾಲಿ ಟಾಂಗ್

Source: S O News Service | By Office Staff | Published on 21st January 2020, 8:17 PM | Coastal News |

ಕಾರವಾರ: ‘ಓಡಿಹೋಗಿ ಅಡಗಿಕೊಳ್ಳಲು ನಾನು ಹೇಡಿಯಲ್ಲ. ಕೆಲವರು ಈಗಲೇ ತಾವೇ ಶಾಸಕರೆಂದು ಘೋಷಿಸಿ ಶಾಸಕರಾಗುವ ಭ್ರಮೆಯಲ್ಲಿದ್ದಾರೆ. ಆದರೆ, ಚುನಾವಣೆಗೆ ಇನ್ನೂ ಮೂರುವರೆ ವರ್ಷದ ಕಾಲಾವಧಿ ಇದೆ’ ಎಂದು ಶಾಸಕಿ ರೂಪಾಲಿ ನಾಯ್ಕ ಟಾಂಗ್ ನೀಡಿದ್ದಾರೆ.
    ತಮ್ಮ ವಿರೋಧಿಗಳ ಹೇಳಿಕೆಗಳಿಗೆ ಕೌಂಟರ್ ನೀಡಿರುವ ಅವರು, ‘ರಾಜಕೀಯ ಸ್ವಾರ್ಥಕ್ಕೆ ಯಾರನ್ನು ಬೇಕಾದರೂ ಬಳಸಿಕೊಳ್ಳುವುದು ಸರಿಯಲ್ಲ. ನಾನು ಇರುವ ಕಾಲಾವಧಿಯನ್ನು ಜನಪರ ಕಾರ್ಯಗಳಿಗೆ ಮುಡಿಪಾಗಿಡುತ್ತೇನೆ. ಈಗಲೇ ಚುನಾವಣೆಯ ತಯಾರಿ ನಡೆಸಿ, ಮುಂದಿನ ಶಾಸಕರಾಗುವ ಹಗಲು ಗನಸು ಕಾಣುತ್ತಿರುವ ಮಾಜಿ ಶಾಸಕ ಹಾಗೂ ಮಾಜಿ ಸಚಿವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ. ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಿರುವ ಅವರನ್ನು ನೋಡಿದರೆ ಬೇಸರವಾಗುತ್ತದೆ’ ಎಂದು ವ್ಯಂಗ್ಯ ಮಾಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...