ಕೊರೋನಾ ಭೀತಿ: ಓಮನ್‍ನ ಸುಲ್ತಾನೇಟ್‍ಗೆ ಓಮಾನಿಯರಲ್ಲದವರಿಗೆ ಪ್ರವೇಶ ನಿಬರ್ಂಧ

Source: S O News Service | By Office Staff | Published on 16th March 2020, 11:30 PM | Gulf News |

ಮಸ್ಕತ್ (ಓಮನ್): ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ಅನ್ನು ತಡೆಗಟ್ಟುವ ಸಲುವಾಗಿ ಓಮನ್‍ನ ಸರ್ವೋಚ್ಛ ಸಮಿತಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.

ಭಾನುವಾರದಂದು ದೇಶದ ಆಂತರಿಕ ಸಚಿವ ಸಯ್ಯಿದ್ ಹಮೂದ್ ಬಿನ್ ಫೈಸಲ್ ಅಲ್ ಬುಸ್ಸೈದಿ ಅವರ ನೇತೃತ್ವದಲ್ಲಿ ನಡೆದ ತುರ್ತು ಸಭೆಯ ಬಳಿಕ ಸಮಿತಿಯು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಂಡಿದೆ.

ಮೊದಲ ನಿಯಮದಂತೆ, ದೇಶಕ್ಕೆ ಸಮುದ್ರ ಮಾರ್ಗವಾಗಿ ಹಾಗೂ ಭೂ ಮಾರ್ಗವಾಗಿ ಪ್ರವೇಶಿಸುವುದನ್ನು ನಿಬರ್ಂಧಿಸಲಾಗಿದೆ. ಆದರೆ, ಈ ನಿಯಮ ಗಲ್ಫ್ ದೇಶಗಳ ನಾಗರಿಕರಿಗೆ ಅನ್ವಯಿಸುವುದಿಲ್ಲ. ಈ ಮೂರು ವಿಧಾನಗಳ ಮೂಲಕ ದೇಶಕ್ಕೆ ಪ್ರವೇಶಿಸುವ ಎಲ್ಲಾ ಜನರ ಸಂಪರ್ಕ ತಡೆಹಿಡಿಯಲಾಗಿದ್ದು, ಇದು ಓಮನ್‍ನ ನಾಗರಿಕರಿಗೂ ಅನ್ವಯಿಸುತ್ತದೆ.

ಎಲ್ಲಾ ಸಾರ್ವಜನಿಕ ಪಾರ್ಕ್‍ಗಳನ್ನು ಹಾಗೂ ಗಾರ್ಡನ್‍ಗಳನ್ನು ಮುಂದಿನ ಸೂಚನೆ ಬರುವವರೆಗೂ ಮುಚ್ಚಲಾಗುವುದು. ದೇಶಾದ್ಯಂತ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗಾಗಿ ಸಭೆ ನಡೆಯುವುದಿಲ್ಲ. ಅಲ್ಲದೇ ಮುಂದಿನ ಸೂಚನೆ ಬರುವವರೆಗೂ ಯಾವುದೇ ಸಾಮಾಜಿಕ ಕೂಟಗಳು ಹಾಗೂ ವಿವಾಹ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಈ ಎಲ್ಲಾ ಕ್ರಮಗಳು ಇಂದಿನಿಂದ ಜಾರಿಯಲ್ಲಿರುತ್ತವೆ. ಓಮನ್‍ನ ಸುಲ್ತಾನೇಟ್‍ನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಆಡಳಿತ ಮಂಡಳಿಯೊಂದಿಗೆ ಸಹಕರಿಸುವಂತೆ ಸಮಿತಿ ತಿಳಿಸಿದೆ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.