ಮಂಗಳೂರು ಗೋಲಿಬಾರ್: ಹಲವು ಪ್ರಶ್ನೆಗಳಿಗೆ ಪೊಲೀಸರಲ್ಲಿ ಉತ್ತರವೇ ಇಲ್ಲ: New Indian Express ವರದಿ

Source: sonews | By Staff Correspondent | Published on 21st December 2019, 11:14 PM | Coastal News | Incidents | NewsVoir |

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರ ಮೇಲೆ ಗುರುವಾರ ನಗರದಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮಂಗಳೂರಿನಲ್ಲಿ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಕೈಗೆತ್ತಿಕೊಂಡ ಕ್ರಮಗಳ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಪೊಲೀಸರು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಸಂಪೂರ್ಣ ವಿಫಲರಾಗಿದ್ದಾರೆಂಬ ಆರೋಪಗಳೂ ಕೇಳಿ ಬಂದಿವೆ ಎಂದು newindianexpress.com ವರದಿ ಮಾಡಿದೆ.

ಪ್ರತಿಭಟನಕಾರರ ಮೇಲಿನ 'ವಿಪರೀತ' ಪೊಲೀಸ್ ಕಾರ್ಯಾಚರಣೆಯನ್ನು ಹತ್ತಿಕ್ಕುವಲ್ಲಿ ಪ್ರಯತ್ನಿಸದ ನಗರ ಪೊಲೀಸ್ ಆಯುಕ್ತ  ಪಿ.ಎಸ್. ಹರ್ಷ  ಹಿರಿಯಾಧಿಕಾರಿಗಳಿಂದ ತರಾಟೆಗೊಳಗಾಗಿದ್ದಾರಲ್ಲದ,  ಅವರ ವಿರುದ್ಧ ಕ್ರಮಕ್ಕೂ ಹಿರಿಯ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆಂದು ಮೂಲಗಳು ತಿಳಿಸಿರುವುದಾಗಿ newindianexpress.com ವರದಿ ತಿಳಿಸಿದೆ.

ಪೊಲೀಸ್ ನಿಯಮಗಳ ಪ್ರಕಾರ ಇಂತಹ ಸಂದರ್ಭಗಳಲ್ಲಿ ಪ್ರತಿಭಟನಾಕಾರರ ಮೊಣಕಾಲಿನ ಕೆಳಗೆ ಗುಂಡು ಹಾರಿಸಬೇಕಾಗಿದೆಯಾದರೂ ಪೊಲೀಸರು ಹಾರಿಸಿದ ಎಂಟು ಗುಂಡುಗಳ ಪೈಕಿ ಏಳು ಸಂತ್ರಸ್ತರ ಸೊಂಟದ ಮೇಲಿನ ಭಾಗಗಳಿಗೆ ತಾಗಿತ್ತು. ಒಂದು ಬುಲೆಟ್ ಅಂತೂ ಮಾಜಿ ಮೇಯರ್ ಕೆ. ಅಶ್ರಫ್ ಅವರ ತಲೆಗೆ ಉಜ್ಜಿ ಹೋಗಿದ್ದರೆ, ಇನ್ನೊಂದು ವಿದ್ಯಾರ್ಥಿಯೊಬ್ಬನ ಎದೆಗೆ ತಾಗಿದೆ. ಘಟನೆಯ ಕುರಿತಾದ ಹಲವು ವೀಡಿಯೋಗಳಲ್ಲಿ ಪೊಲೀಸರು ಎದೆಯ ಮಟ್ಟದಲ್ಲಿ ಗುಂಡು ಹಾರಿಸುತ್ತಿರುವುದು ಕಾಣಿಸುತ್ತದೆ.

ಹಲವಾರು ಸುತ್ತು ಗುಂಡು ಹಾರಿಸಿದ ಹೊರತಾಗಿಯೂ ಯಾರೂ ಸಾಯಲಿಲ್ಲವೇಕೆ ಎಂದು ಒಬ್ಬರು ಪೊಲೀಸ್ ಇನ್‍ಸ್ಪೆಕ್ಟರ್ ಸಹೋದ್ಯೋಗಿಯನ್ನು ಕೇಳುತ್ತಿರುವ ವೀಡಿಯೋ ಕೂಡ ಹರಿದಾಡುತ್ತಿದ್ದು ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಿಂತ ಹೆಚ್ಚಾಗಿ ಬೇರೆ ಉದ್ದೇಶ  ಅವರದ್ದಾಗಿತ್ತೆಂಬುದು ಸ್ಪಷ್ಟ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಈ ವೀಡಿಯೋವನ್ನು ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದಾರೆ.

ಈ ವೀಡಿಯೋ ಕುರಿತು ತನಗೆ ತಿಳಿದಿಲ್ಲ ಎಂದು ಹೇಳಿದ ಪೊಲೀಸ್ ಆಯುಕ್ತರು ಅದೇ ಸಮಯ ಅದರ ಕುರಿತು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಯೊಂದರ ಕೊಠಡಿಯ ಬಾಗಿಲನ್ನು ಪೊಲೀಸರು ತುಳಿಯುತ್ತಿರುವ ವೀಡಿಯೋ ಕುರಿತೂ ಅವರು ಪ್ರತಿಕ್ರಿಯಿಸಿಲ್ಲ.

ಪ್ರತಿಭಟನಾಕಾರರ ಸಂಖ್ಯೆ 6,000ದಿಂದ 7,000 ತನಕ ಇತ್ತು ಎಂದು ಆಯುಕ್ತರು ಹೇಳಿರುವುದೂ ಉತ್ಪ್ರೇಕ್ಷೆಯಾಗಿದೆಯಲ್ಲಿದೆ, 33 ಪೊಲೀಸರಿಗೆ ಘಟನೆಯಲ್ಲಿ ಗಾಯಗಳುಂಟಾಗಿದೆ ಎಂದು ಅವರು ನೀಡಿರುವ ಸಂಖ್ಯೆ ಹಾಗೂ  ಡಿಸಿಪಿ ಅರುಣಾಂಶುಗಿರಿ ಅವರ ಕೈಯ್ಯನ್ನು ಪ್ರತಿಭಟನಾಕಾರರು ಬಹುತೇಕ ತುಂಡರಿಸಿ ಬಿಟ್ಟಿದ್ದರು ಎಂದು ಹೇಳಿಕೆಯೂ ತಪ್ಪು ಎಂದು ಮೂಲಗಳು ಹೇಳಿವೆ ಎಂದು newindianexpress.com ವರದಿ ತಿಳಿಸಿದೆ.

ಗೋಲಿಬಾರಿನಲ್ಲಿ ಮೃತರಾದ ಇಬ್ಬರ ಮೃತದೇಹ ಇರಿಸಲಾಗಿದ್ದ ವೆನ್ಲಾಕ್ ಆಸ್ಪತ್ರೆಯ ಹೊರಗೆ ಕೇರಳದಿಂದ 50 ಮಂದಿ ವರದಿ ಮಾಡಲೆಂದು  ಬಂದಿದ್ದರು. ಆದರೆ ಅವರು ನಗರಕ್ಕೆ ಅಪರಿಚಿತರಾಗಿದ್ದರಿಂದ ಅವರಿಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಬಂಧಿಸಲಾಗಿತ್ತು ಎಂದು ಆಯುಕ್ತ ಹೇಳಿದ್ದರು. ಆದರೆ ವಾಸ್ತವವಾಗಿ ಅವರ ಸಂಖ್ಯೆ 8 ಆಗಿತ್ತೇ ಹೊರತು 50 ಆಗಿರಲಿಲ್ಲ.

ಘಟನೆಯಲ್ಲಿ ಗಾಯಗೊಂಡ ನಾಗರಿಕರ ಸಂಖ್ಯೆ 5 ಎಂದು ಆಯುಕ್ತರು ಹೇಳಿದ್ದರೆ ಕನಿಷ್ಠ 25 ಮಂದಿ ಗಾಯಾಳುಗಳಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃಪೆ:ವಾರ್ತಾಭಾರತಿ

Read These Next

ಕಾರವಾರ: ಪರಿಶಿಷ್ಟ ಜಾತಿ, ಪಂಗಡದವರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥ ಪಡಿಸಿ; ಡಿ.ಸಿ. ಸೂಚನೆ

ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆ ಹಾಗೂ ತಾಲ್ಲೂಕು ಮಟ್ಟದ ಸಭೆಗಳನ್ನು ನಿಗದಿತವಾಗಿ ನಡೆಸಿ, ಸಮಸ್ಯೆಗಳನ್ನು ಶೀಘ್ರ ...

ಬಿಜೆಪಿ ಟಿಕೆಟ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ; ಒಡಿಶಾದಲ್ಲಿ ಹಾಲಶ್ರೀ ಬಂಧನ

ಬಿಜೆಪಿ ಟಿಕೆಟ್ ಹೆಸರಿ ನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣದ ಆರೋಪಿ ಹೊಸ ಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಮಠದ ಹಾಲವೀರಪ್ಪ ...

ಚೈತ್ರಾ ವಂಚನೆ ಪ್ರಕರಣ; ಉಡುಪಿಯಲ್ಲಿ ಸಿಸಿಬಿ ಪೊಲೀಸರಿಂದ ತೀವ್ರ ತನಿಖೆ; ಹಿರಿಯಡ್ಕದಲ್ಲಿ 2 ಅಂತಸ್ತಿನ ಮನೆ ನಿರ್ಮಿಸುತ್ತಿರುವುದು ಬೆಳಕಿಗೆ

ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಕೋಟ್ಯಂತರ ರೂ. ವಂಚಿಸಿದ ...

ಹುಬ್ಬಳ್ಳಿ ನವನಗರ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿದ ಮುಂಡಗೋಡ ಪೊಲೀಸರು 

ಮುಂಡಗೋಡ: ಅತ್ಯಂತ ಕ್ಲಿಸ್ಟಕರವಾದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮುಂಡಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ. ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...

ಕೊರೊನಾ ಸೋಂಕು ಎರಡನೇ ಹಂತ ದಾಟದಂತೆ ಕ್ರಮ ವಹಿಸೋಣ# #ನಾನು ಬದುಕಬೇಕೆಂಬ ಭಾವನೆ ಮೊದಲು ಬರಬೇಕು : ಕೆ.ಎಸ್.ಈಶ್ವರಪ್ಪ

ಕೊರೊನಾ ಸೋಂಕು ಎರಡನೇ ಹಂತ ದಾಟದಂತೆ ಕ್ರಮ ವಹಿಸೋಣ# #ನಾನು ಬದುಕಬೇಕೆಂಬ ಭಾವನೆ ಮೊದಲು ಬರಬೇಕು : ಕೆ.ಎಸ್.ಈಶ್ವರಪ್ಪ