ಭಟ್ಕಳದಲ್ಲಿ ಮಂಗಳವಾರ 9 ಜನರಿಗೆ ಕೊರೊನಾ

Source: S O News service | By I.G. Bhatkali | Published on 29th July 2020, 2:06 PM | Coastal News |

ಭಟ್ಕಳ: ತಾಲೂಕಿನಲ್ಲಿ ಮಂಗಳವಾರ 5 ಮಹಿಳೆಯರು ಸೇರಿದಂತೆ ಮತ್ತೆ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 
  ತಾಲೂಕಿನ ಮುಂಡಳ್ಳಿಯ 31 ವರ್ಷದ ಯುವಕ, ಮಾವಿನಕುರ್ವೆಯ 28 ವರ್ಷದ ಯುವಕ, ಪುರಸಭಾ ವ್ಯಾಪ್ತಿಯ ಮಸ್ಕತ್ ಕಾಲೋನಿಯ 60 ವರ್ಷದ ಮಹಿಳೆ, ನವಾಯತ್ ಕಾಲೋನಿಯ 68 ವರ್ಷದ ಮಹಿಳೆ, ಶಾದುಲಿ ಸ್ಟ್ರೀಟ್‍ನ 58 ವರ್ಷದ ಮಹಿಳೆ, ಗುಡ್‍ಲಕ್ ರೋಡ್‍ನ 81 ವರ್ಷದ ಪುರುಷ, ಕೆಎಚ್‍ಬಿ ಕಾಲೋನಿಯ 31 ವರ್ಷದ ಯುವಕ, ಮಿಸ್ಬಾ ರೋಡ್ ವ್ಯಾಪ್ತಿಯ 73 ವರ್ಷದ ಮಹಿಳೆ, ನಾಗಪ್ಪ ನಾಂiÀiಕ್ ರೋಡ್‍ನ 67 ವರ್ಷದ ಮಹಿಳೆಗೆ ಸೋಂಕು ತಗುಲಿದೆ. 

ಆಸ್ಪತ್ರೆಗೆ ತೆರಳಲು ಹಿಂದೇಟು:
 ತಾಲೂಕಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವಂತೆಯೇ ಸೋಂಕಿತರು ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಹಳಷ್ಟು ಸೋಂಕಿತರು ಆಸ್ಪತ್ರೆಯ ಸ್ವಚ್ಛತೆಯ ಬಗ್ಗೆ ಮಾತನಾಡುತ್ತಿದ್ದರೆ, ಇನ್ನು ಕೆಲವರು ಸರಿಯಾದ ಊಟೋಪಾಚಾರ, ರೋಗಿಗಳ ಚಿಕಿತ್ಸೆಯ ಬಗ್ಗೆ ನಿರ್ಲಕ್ಷ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೆ ಮನೆಯಲ್ಲಿ ಕ್ವಾರೆಂಟೈನ್ ಆಗಲು ಅವಕಾಶ ನೀಡುವಂತೆ ಸೋಂಕಿತರು ಆಗ್ರಹಿಸುತ್ತಿರುವುದು ಕಂಡು ಬಂದಿದೆ. ಇನ್ನು ಸೋಂಕಿತರ ಸಂಪರ್ಕ ಹಾಗೂ ಸಂಚಾರದ ವಿವರಗಳು ನಿಗೂಢವಾಗುತ್ತಲೇ ಇದ್ದು, ಪ್ರಾಥಮಿಕ ಸಂಪರ್ಕಿತರನ್ನು ಕ್ವಾರೆಂಟೈನ್‍ಗೆ ಒಪ್ಪಿಸುವ ಕಾರ್ಯವೂ ನೆನೆಗುದಿಗೆ ಬಿದ್ದಿದೆ. ಪರಿಣಾಮವಾಗಿ ತಾಲೂಕಿನ ಕೊರೊನಾ ನಿಯಂತ್ರಣ ವ್ಯವಸ್ಥೆ ಹಳಿ ತಪ್ಪಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...