ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

Source: S.O. News Service | By Manju Naik | Published on 25th June 2019, 9:29 PM | National News | Don't Miss |

ಕಾಸರಗೋಡು:ಜಾನುವಾರು   ಸಾಗಾಟ ಮಾಡುತ್ತಿದ್ದ   ಪಿಕಪ್  ವ್ಯಾನ್  ನ್ನು  ತಡೆದ  ತಂಡವೊಂದು  ಚಾಲಕ ಮತ್ತು ಸಿಬಂದಿಯ ಮೇಲೆ  ನಡೆಸಿ  ೫೦  ಸಾವಿರ ರೂ  ದೋಚಿ  ಜಾನುವಾರು ಸಹಿತ  ಪರಾರಿಯಾದ ಘಟನೆ   ಸೋಮವಾರ ಮುಂಜಾನೆ  ಎಣ್ಮಕಜೆ  ಮಂಜನಡ್ಕ ಎಂಬಲ್ಲಿ  ನಡೆದಿದೆ. 
ಕೃತ್ಯದ ಹಿಂದೆ ಬಜರಂಗ ದಳದ  ಕಾರ್ಯಕರ್ತರು ಎಂದು ಕಾಸರಗೋಡು ಚೆಂಗಳದ  ಸಹಕಾರಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳು ದೂರಿದ್ದಾರೆ .   ಗಾಯಗೊಂಡಿರುವ  ಪುತ್ತೂರು ಪರ್ಪಾಜೆಯ  ಹಂಝ ( ೩೦) ಮತ್ತು ಅಲ್ತಾಫ್ ( ೩೦ ) ಆಸ್ಪತ್ರೆಯಲ್ಲಿ   ಚಿಕಿತ್ಸೆ  ಪಡೆಯುತ್ತಿದ್ದಾರೆ ಮುಂಜಾನೆ ೬. ೩೦ ರ ಸುಮಾರಿಗೆ ಘಟನೆ ನಡೆದಿದೆ . 
ಪುತ್ತೂರು ಕೆದಿಲ ದಿಂದ  ಮೂರು ಜಾನುವಾರು ಸಹಿತ 
ಪಿಕಪ್ ವ್ಯಾನ್ ನಲ್ಲಿ  ಬಂದ್ಯೋಡಿಗೆ   ಕೊಂಡೊಯ್ಯುತ್ತಿದ್ದಾಗ ಕೃತ್ಯ ನಡೆದಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ.
ಪುತ್ತೂರಿನ ಇಸ್ಮಾಯಿಲ್  ಎಂಬವರು  ಜಾನುವಾರುಗಳನ್ನು   ಬಂದ್ಯೋಡಿಗೆ  ತಲಪಿಸಲು ತಿಳಿಸಿದ್ದರು.ಎಣ್ಮಕಜೆ ಮಂಜನಡ್ಕದಲ್ಲಿ  ಜಾನುವಾರು ಸಾಕಾಣಿಕೆ  ಕೇಂದ್ರ  ನಡೆಸುತ್ತಿರುವ  ಹಾರಿಸ್ ರ ಮನೆಗೆ ತಲಪಿಸಲು ೫೦ ಸಾವಿರ ರೂ .   ನೀಡಿದ್ದು ,  ಈ ಹಣ ನೀಡಲು  ಹಾರಿಸ್ ನ ಮನೆಗೆ ತಲಪಿದಾಗ  ಕಾರಿನಲ್ಲಿ ಬಂದ  ಏಳು ಮಂದಿಯ ತಂಡವು ಮಾರಾಕಾಸ್ತ್ರದಿಂದ ಬೆದರಿಸಿ  ಹಲ್ಲೆ ನಡೆಸಿ   ನಗದು ,  ಜಾನುವಾರು ಸಹಿತ ಕೊಂಡೊಯ್ದಿರುವುಅದಾಗಿ ದೂರಿದ್ದಾರೆ  

Read These Next

`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ...

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...