ನಿನಾದ' ಅಂತರ್ಜಾಲ ರಾಜ್ಯಮಟ್ಟದ ಸ್ವರಚಿತ ಕವನ ವಾಚನ ಸ್ಪರ್ಧೆ ಫಲಿತಾಂಶ

Source: SO News | By Laxmi Tanaya | Published on 16th October 2020, 4:19 PM | State News | Don't Miss |

ಭಟ್ಕಳ: ರಾಜ್ಯದಲ್ಲಿಯೇ ತನ್ನ ವಿಶಿಷ್ಟ ಹಾಗೂ ಅರ್ಥಪೂರ್ಣ ಸಾಹಿತ್ಯ ಹಾಗೂ ಸಂಗೀತ ಚಟುವಟಿಕೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರು ದಸರಾ ಪ್ರಯುಕ್ತ ಹಮ್ಮಿಕೊಂಡ ರಾಜ್ಯಮಟ್ಟದ ಅಂತರ್ಜಾಲ ಸ್ವರಚಿತ ಕಾವ್ಯವಾಚನ ಸ್ಪರ್ಧೆಯ ಫಲಿತಾಂಶ ಘೋಷಣೆ ಮಾಡಲಾಗಿದೆ.

 ವಿದ್ಯಾಶ್ರೀ ಎಸ್. ಅಡೂರ್  ಮುಂಡಾಜೆ ಉಜಿರೆ ಇವರು
ನಿನಾದ ಕಾವ್ಯ ಸಿರಿ ಪ್ರಶಸ್ತಿ ಯೊಂದಿಗೆ 
ಪ್ರಥಮ ಬಹುಮಾನ ₹ 1000 ಜೊತೆಗೆ *'ನಿನಾದ  ಫಲಕ ಮತ್ತು ಅಭಿನಂದನ ಪತ್ರವನ್ನು ಪಡೆದುಕೊಂಡಿದ್ದಾರೆ.

ದ್ವಿತೀಯ ಬಹುಮಾ‌ನ ₹750  ಜೊತೆಗೆ ಫಲಕ ಮತ್ತು ಅಭಿನಂದನ ಪತ್ರವನ್ನು
ಸಂಧ್ಯಾ ನಾಯ್ಕ ಅಘನಾಶಿನಿ ಕುಮಟ ಪಡೆದುಕೊಂಡಿದ್ದು

ತೃತೀಯ ಬಹುಮಾನ  ಇಬ್ಬರು ಹಂಚಿಕೊಂಡಿದ್ದು 
ಶಾರಾದಾ ನಾರಾವಿ ಬೆಳ್ತಂಗಡಿ ಹಾಗೂ ಪೂರ್ಣಿಮಾ ಹಲಗೇರಿ ಬಳ್ಳಾರಿ ಇವರು 
₹500 ಜೊತೆಗೆ ಫಲಕ ಮತ್ತು ಅಭಿನಂದನ ಪತ್ರವನ್ನು ಪಡೆದುಕೊಂಡಿದ್ದಾರೆ.

ಸಮಾಧಾನಕರ ಬಹುಮಾನವನ್ನು :

ಡಾ. ಮಾನಸಾ ಕೀಳಂಬಿ ಶಿವಮೊಗ್ಗ,
ಅರ್ಚನಾ ಎಚ್. ಬೆಂಗಳೂರು,
ಡಾ. ವಿಜಯಾದೇವಿ, ಭದ್ರಾವತಿ,
ಎನ್.ಆರ್.ರೂಪಶ್ರೀ ಮೈಸೂರು ,
ನರಸಿಂಹ ಹೆಗಡೆ ಕೋವೆಸರ, ಶಿರಸಿ,
ನರೇಂದ್ರ ಎಸ್.ಗಂಗೊಳ್ಳಿ,
ಸುರೇಖಾ ಹರಿಪ್ರಸಾದ ಶೆಟ್ಟಿ ಮುಂಬಯಿ,
ಇಂದಿರಾ ಎಸ್.ಸುರತ್ಕಲ್,
ಆರ್.ಪಣಿಶ್ರೀ ಮೇರಿಲ್ಯಾಂಡ್ ಅಮೇರಿಕಾ,
ವಿ.ಐ.ಹೆಗಡೆ ಕೂಜಳ್ಳಿ, ಕುಮಟಾ,
 ಬಿ.ಕೆ.ಮೀನಾಕ್ಷಿ‌ ಮೈಸೂರು,
ಮಂಜುಳಾ ರಾವ್ ವಾಷಿಂಗ್ಟನ್ ಅಮೇರಿಕಾ ಇವರು ಪಡೆದು ಕೊಂಡಿದ್ದಾರೆ.


ವೀಕ್ಷಕರ ಮೆಚ್ಚುಗೆ:
ಉಮೇಶ ನಾಯ್ಕ‌,ಸರ್ಪನಕಟ್ಟೆ, ಭಟ್ಕಳ .
ಆರತಿ ತಳೇಕರ ಕಾರವಾರ
ಡಾ.ಶಿಲ್ಪಾ ಕೆ ಉಳ್ಳಾಲ ಮಂಗಳೂರು
ಪಲ್ಲವಿ ಕಿರಣ ಹೊನ್ನಾವರ
ತೃಪ್ತಿ ಪಟಗಾರ ಕುಮಟ ಇವರು ಪಾತ್ರರಾಗಿದ್ದಾರೆ ಎಂದು ತಿಳಿಸಲಾಗಿದೆ.

ಮೊದಲ ಮೂರು ಬಹುಮಾನ ವಿಜೇತರಿಗೆ ಫಲಕ ಮತ್ತು ಅಭಿನಂದನ ಪತ್ರ  ಜೊತೆಗೆ ಬಹುಮಾನ ಮೊತ್ತವನ್ನು ಹಾಗೂ ಸಮಾಧಾನಕರ ಬಹುಮಾನ ಪಡೆದ ಸ್ಪರ್ಧಿಗಳಿಗೆ ಮತ್ತು ವೀಕ್ಷಕರ ಮೆಚ್ಚುಗೆ ಪಡೆದ  ಸ್ಪರ್ಧಿಗಳಿಗೆ ಅಭಿನಂದನಾ ಪತ್ರವನ್ನು  ನೀಡಲಾಗುವುದು ಎಂದು *'ನಿನಾದ'* ಸಾಹಿತ್ಯ, ಸಂಗೀತ ಸಂಚಯ ಸಂಘಟನೆಯ ಸಂಚಾಲಕ ಉಮೇಶ ಮುಂಡಳ್ಳಿ ಭಟ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿನಾದ ರಾಜ್ಯಮಟ್ಟದ ಅಂತರ್ಜಾಲ ಸ್ವರಚಿತ ಕಾವ್ಯ ವಾಚನ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೇ ಅನಿವಾಸಿ ಭಾರತೀಯರಾದ ಅಮೇರಿಕದಲ್ಲಿ ನೆಲೆಸಿರುವ ಕನ್ನಡಿಗರು ಭಾಗವಹಿಸಿದ್ದು ವಿಶೇಷವಾಗಿದ್ದು.ಮುಕ್ತ ಅವಕಾಶ ನೀಡಿದ ಕಾರಣ ನಾಡಿನ ಹಿರಿಕಿರಿಯ ಕವಿಗಳು ಭಾಗವಹಿಸಿದ್ದು ಇಲ್ಲಿ ವಿಶೇಷವಾಗಿತ್ತು.  ಎಲ್ಲ ಕವಿಗಳ ಕಾವ್ಯವಾಚನದ ವಿಡಿಯೋಗಳನ್ನು ನಮ್ಮ ನಿನಾದ ವಾಹಿನಿ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿತ್ತು. ನಿರ್ಣಾಯಕರ ನಿರ್ಣಯದ ಜೊತೆಗೆ ಯೂಟ್ಯೂಬ್ ನಲ್ಲಿ  ವೀಕ್ಷಕರು ಆಯ್ಕೆಮಾಡಿದ ಐವರು  ಕವಿಗಳನ್ನು ಕೂಡ ವೀಕ್ಷಕರ ಮೆಚ್ಚುಗೆಯ ಬಹುಮಾನದೊಂದಿಗೆ ಪ್ರೋತ್ಸಾಹಿಸಲಾಗಿದೆ ಎಂದು ಹಾಗೂ ನಾಡ ಹಬ್ಬ ವಿಜಯದಶಮಿ ಒಳಗೆ ಬಹುಮಾನಗಳನ್ನು ವಿಜೇತರಿಗೆ ತಲುಪಿಸಲಾಗುವುದು ಎಂದು  ನಿನಾದ ಸಂಚಾಲಕ ಉಮೇಶ ಮುಂಡಳ್ಳಿ ಹಾಗೂ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...