ಇ- ಪಾಸ್ ವಿತರಣೆಗೆ ವೆಬ್ಸೈಟ್ ರೂಪಿಸಿದ ಎನ್ಐಸಿ

Source: sonews | By Staff Correspondent | Published on 7th April 2020, 6:26 PM | Coastal News | Don't Miss |

ಕಾರವಾರ: ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪಾಸ್ ಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪದ ಮೇರೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ಜಿಲ್ಲಾ ಕಚೇರಿಯಿಂದ ವೆಬ್ಸೈಟ್ ವೊಂದನ್ನು ರೂಪಿಸಲಾಗಿದ್ದು, ಈ ಮೂಲಕ ಇ- ಪಾಸ್ ಗಳನ್ನು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಅಗತ್ಯ ವಸ್ತುಗಳ ಪೂರೈಕೆದಾರರಿಗೆ ತಾಲೂಕು ಮಟ್ಟದಲ್ಲೇ ತಹಶಿಲ್ದಾರರು ಪಾಸ್ ಗಳನ್ನು ವಿತರಣೆ ಮಾಡುತ್ತಿದ್ದರು. ತುರ್ತಾಗಿ ಜಿಲ್ಲೆಯಿಂದ ತೆರಳಬೇಕಾಗಿರುವವರಿಗೆ ಜಿಲ್ಲಾಧಿಕಾರಿ ಅವರ ಮೂಲಕ ಪಾಸ್ ಪಡೆಯಬೇಕಾಗಿತ್ತು. ಇದರಿಂದಾಗಿ ವಿತರಣೆಯಲ್ಲಿ ವಿಳಂಬವಾಗುತ್ತಿತ್ತು. ಬೇಕಾಬಿಟ್ಟಿಯಾಗಿ ಹಲವರು ಪಾಸ್ ಪಡೆದಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದ ಕಾರಣ ಇದೀಗ ಪಾಸ್ ವಿತರಣೆಯನ್ನು ಸಂಪೂರ್ಣವಾಗಿ ಆನ್ಲೈನ್ ಮಾಡಲಾಗಿದೆ. 

ಇ- ಪಾಸ್ ಪಡೆಯುವುದು ಹೇಗೆ?: ತುರ್ತಾಗಿ ಪಾಸ್ ನ ಅಗತ್ಯ ಇದ್ದವರು ತಹಶಿಲ್ದಾರರಿಗೆ ತಮ್ಮ ಭಾವಚಿತ್ರವುಳ್ಳ ಯಾವುದಾದರೂ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ತಹಶಿಲ್ದಾರರು ಅರ್ಜಿಯನ್ನು ಪರಿಶೀಲನೆ ಮಾಡಿ, ಆನ್ಲೈನ್ ನಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಲಿದ್ದಾರೆ. ಈ ಮಾಹಿತಿ ಕ್ಷಣಮಾತ್ರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ಬರಲಿದ್ದು, ಅವರು ಅರ್ಹರಿಗೆ ಇ- ಪಾಸ್ ಗೆ ಅನುಮತಿ ನೀಡಲಿದ್ದಾರೆ. ಬಳಿಕ ತಹಶಿಲ್ದಾರರು ಇ- ಪಾಸ್ ಅನ್ನು ತಮ್ಮ ಕಚೇರಿಯಲ್ಲೇ ಮುದ್ರಿಸಿ, ಅಗತ್ಯ ಇದ್ದವರಿಗೆ ವಿತರಣೆ ಮಾಡಲಿದ್ದಾರೆ.

ಎನ್ಐಸಿ ಕಾರ್ಯಕ್ಕೆ ಶ್ಲಾಘನೆ

ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ಜಿಲ್ಲಾ ಮಾಹಿತಿ ಅಧಿಕಾರಿ ಶ್ರೀಕಾಂತ್ ಜೋಶಿ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಜಿಲ್ಲಾ ಮಾಹಿತಿ ಅಧಿಕಾರಿ (ಎಡಿಐಒ) ನಿಜು ಅಬ್ರಾಹಂ ಅವರು ಈ ಇ- ಪಾಸ್ ವ್ಯವಸ್ಥೆಯನ್ನು ರೂಪಿಸಿದ್ದಾರೆ. 

ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ಅವರು ಕೇವಲ ಎರಡು ದಿನಗಳಲ್ಲಿ ವೆಬ್ಸೈಟ್ ಅನ್ನು ರೂಪಿಸುವ ಮೂಲಕ ಪಾಸ್ ವಿತರಣೆ ಕಾರ್ಯವನ್ನು ಸರಳೀಕರಣ ಮಾಡಿದ್ದಾರೆ. ಇತ್ತೀಚಿಗೆ 'ಗ್ರಾಮ ಮಟ್ಟದಲ್ಲಿ ಅಗತ್ಯ ವಸ್ತುಗಳ ಬೇಡಿಕೆ'ಗೆ ಸಂಬಂಧಿಸಿದಂತೆ ವೆಬ್ಸೈಟ್ ಅನ್ನು ರೂಪಿಸಿದ್ದರು. ಇದು ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಇ- ಪಾಸ್, ಲಾಕ್ ಡೌನ್ ಸಮಯದಲ್ಲಿ ರೂಪಿಸಿದ ಎರಡನೇ ವೆಬ್ಸೈಟ್ ಆಗಿದೆ. 

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಎನ್ಐಸಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...