ವಾಟ್ಸಪ್ ನಲ್ಲಿ ಹರಿದಾಡುತ್ತಿದೆ ಈ ಸುದ್ದಿ:  ಮೀನು ಮಾರುಕಟ್ಟೆ ಆರಂಭ ವಿಳಂಬ; ರಸ್ತೆ ಇಕ್ಕೆಲಗಳಲ್ಲೇ ಮೀನು ತ್ಯಾಜ್ಯ, ಕೊರೋನಾಕ್ಕಿಂತ ಭೀಕರ ರೋಗದ ಆತಂಕದಲ್ಲಿ ಭಟ್ಕಳ

Source: sonews | By Staff Correspondent | Published on 29th August 2020, 8:22 PM | Coastal News | Special Report | Don't Miss |

ಸಾಮಾಜಿಕ ಜಾಲಾತಾಣಗಳು ಬಂದಾಗಿನಿಂದ ಸಾಮಾನ್ಯ ಜನರು ಸಮಸ್ಯೆಗಳನ್ನು ನೇರವಾಗಿ ವಾಟ್ಸಪ್ ಮೂಲಕ ಅಧಿಕಾರಗಳ ಗಮನಕ್ಕೆ ತರುತ್ತಿದ್ದಾರೆ. ಇಂತಹದ್ದೊಂದು ಸಮಸ್ಯೆಯ ವರದಿಯೊಂದು ವಾಟ್ಸಪ್ ನಲ್ಲಿ ಇಂದು ಹರಿದಾಡುತ್ತಿದೆ. ವಿಷಯದ ಗಂಭೀರತೆಯನ್ನು ಮನಗಂಡು ನಾವು ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.(ಸಂ)  

ಭಟ್ಕಳದಲ್ಲಿ ಕರೋನಾಕ್ಕಿಂತ ದೊಡ್ಡ ರೋಗಗಳು ಭಟ್ಕಳದ ಹಳೆ ಬಸ್ ನಿಲ್ದಾಣದಿಂದ ಸದ್ಯದಲ್ಲೇ ಬರಲಿದೆ ಎಂಬ ಆತಂಕ ಎದುರಾಗಿದೆ.

ನಿಜ ಮೀನು ಮಾರುಕಟ್ಟೆ ಚಾಲನೆ ಮಾಡುವುದಕ್ಕೆ ಸರಕಾರ ಆದೇಶ ನೀಡಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು,. ಆದರೆ, ಎಲ್ಲಾ ಕಡೆ ಸಮುದ್ರ ನದಿ ಬಂದರು ಮೀನುಗಾರಿಕೆಗೆ ಚಾಲನೆ ಸಿಕ್ಕಿದೆ. ದೋಣಿಗಳು ಸಮುದ್ರಕ್ಕೆ ಇಳಿದು ಮೀನಗಳನ್ನು ಹಿಡಿದು  ದಡಕ್ಕೆ ತರುತ್ತಿದ್ದಾರೆ. ಆದರೆ ಇದನ್ನು ಮಾರಲು ಸರಿಯಾದ ಸ್ಥಳ ವ್ಯವಸ್ಥೆ ಭಟ್ಕಳದ ಹಳೇ ಬಸ್ ನಿಲ್ದಾಣದಲ್ಲಿ ಇಲ್ಲವಾಗಿದೆ.

ತಮ್ಮ ದಿನನಿತ್ಯದ ಜೀವನೋಪಾಯಕ್ಕಾಗಿ ಮೀನು ಮಾರುವ ಬಡ ಹೆಂಗಸರು ಎಲ್ಲಿ ನಗರ ಭಾಗದಲ್ಲಿ ಖಾಲಿ ಜಾಗ ಇದೆ ಅಲ್ಲಲ್ಲಿ ಕುಳಿತು ಮೀನು ಮಾರಾಟ ಮಾಡುವುದು ಹಾಗೂ ಸರಿಯಾದ ವ್ಯವಸ್ಥೆ ಇಲ್ಲದೇ ಅದರಿಂದ ಬಂದ ತ್ಯಾಜ್ಯ ನೀರು ಇನ್ನಿತರ ವಸ್ತುಗಳನ್ನು ಅಲ್ಲೇ ಎಸೆದು ಹೋಗುತ್ತಿದ್ದಾರೆ.

ಇದು ಹಳೆ ಬಸ್ ನಿಲ್ದಾಣದ ವಿಷಯ. ಇಲ್ಲಿ ಒಂದು ಮೀನು ಮಾರುಕಟ್ಟೆ ಇದೆ. ಇದು ಲಾಕ್ ಡೌನ್ ಆಗಿದ್ದ ದಿನದಿಂದ ಬಂದ್ ಇದೆ. ಅದನ್ನು ಇಲ್ಲಿಯ ತನಕ ಯಾರು ಕ್ಲೀನ್ ಮಾಡಿಲ್ಲ. ಅಲ್ಲಿರುವ ಶೌಚಾಲಯದಲ್ಲಿ ಯಾರೋ ಬಂದು ಮಾಡಿದ ಮಲ ಮುತ್ರದ ವಾಸನೆ ಹಾಗೆ ಇದೆ. ಅದರ ಜೊತೆ ದಿನ ಬಂದು ಅರ್ಧ ಮೀನು ಮಾರುಕಟ್ಟೆನ್ನೂ ಮೀನು ಮಾರುವವರು ಕುಳಿತುಕೊಂಡು ಮೀನು ಮಾರಿ ಉಳಿದ ತ್ಯಾಜ್ಯ ಹಾಗೂ ಕೆಟ್ಟ ವಾಸನೆ ಬೀರುವ ಮೀನಿನ ನೀರನ್ನು ಅಲ್ಲೇ ಸುರಿದು ದಿನ ದಿನ ಹೋಗುತ್ತಿದ್ದಾರೆ. ಆದರೆ ಅದನ್ನು ಕ್ಲೀನ್ ಮಾಡಬೇಕಾದ ಪುರಸಭೆ ತನಗೆ ಎನೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ. ಅದೇ ನೀರು ತ್ಯಾಜ್ಯ ಅಲ್ಲೇ ಬಿದ್ದು ಗಬ್ಬು ನಾರುತ್ತಿರುವ ವಾಸನೆ ಕೊಳೆತ ಶವದ ವಾಸನೆಗಿಂತ ಘನಘೋರವಾಗಿದೆ. ಇಲ್ಲಿ ವಾಸನೆ ಬರುತ್ತದೆ ಎಂದು ತಿಳಿದು ಅಲ್ಲಿ ಮೀನು ಮಾರುವುದು ಬಿಟ್ಟು ಹಳೆ ಬಸ್ ನಿಲ್ದಾಣದಲ್ಲಿ ರಿಕ್ಷಾ ನಿಲ್ಲುವ ಜಾಗ ಹಾಗೂ ಅಂಗಡಿಕಾರರ ಅಂಗಡಿ ಎದುರು, ಜನರು ನಡೆಯುವ ಪುಟ್ ಪಾತ್ ಮೇಲೆ ಮೀನು ಬುಟ್ಟಿ ಇಟ್ಟು ಮೀನು ಮಾರಲು ಸುರು ಮಾಡಿದ್ದಾರೆ. ಇಲ್ಲಿ ಕೂಡ ಇದೆ ಸ್ಥಿತಿ. ಮೀನು ಮಾರಿದ ಮೇಲೆ ಅಲ್ಲೇ ತ್ಯಾಜ್ಯ ನೀರನ್ನು ಚಲ್ಲಿ ತ್ಯಾಜ್ಯ ವಸ್ತುವನ್ನು ಎಸೆದು ಹೋಗುತ್ತಾರೆ.

ಈಗಾಗಲೇ 15 ದಿನ ಕಳೆದು ಹೋಗಿದೆ. ಬೆಳಿಗ್ಗೆ ಇಂದ ರಾತ್ರಿಯ ತನಕ ವ್ಯಾಪಾರಕ್ಕೆ ಬರುವವರು ಇಲ್ಲಿ ಮೂಗು ಮುಚ್ಚಿ ಕೊಂಡೇ ಹೋಗುವುದು ಬರುವುದು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದುರ್ದೈವ ಅಂದ್ರೆ ಇಲ್ಲೇ ಒಂದು ಹಾಸ್ಪಿಟಲ್ ಸಹ ಇದೆ. ಅಲ್ಲಿಯ ರೋಗಿಗಳು ಇದರ ಕೆಟ್ಟ ವಾಸನೆಯಿಂದ ನೀರಿನಿಂದ ಉತ್ಪತ್ತಿ ಆದ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಇನ್ನೂ ಬೇರೆ ರೀತಿಯ ರೋಗಕ್ಕೆ ತುತ್ತಾಗುವುದರಲ್ಲಿ ಸಂದೇಹವಿಲ್ಲ. ಹಾಗೆಯೇ ಇಲ್ಲಿ 20 ಕ್ಕೂ ಹೆಚ್ಚು ಹೋಟೆಲ್ ಹಾಗೂ ತಿಂಡಿ ತಿನಿಸುಗಳ ಅಂಗಡಿಗಳಿವೆ. ತ್ಯಾಜ್ಯ ವಸ್ತುಗಳ ಮೇಲೆ ಕುಳಿತ ನೋಣ, ತಿಂಡಿ ತಿನಿಸುಗಳು ಮೇಲೆ ಕುಳಿತು ಅದನ್ನು ತಿನ್ನುವವರ ಬಗ್ಗೆ ಆರೋಗ್ಯದ ಬಗ್ಗೆ ಆರೋಗ್ಯ ತಿಳಿಸಬೇಕಾಗಿದೆ. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸುಚಿತ್ವ ಕಾಪಾಡಬೇಕಾದ ಪುರಸಭೆಯ ಆರೋಗ್ಯ ಅಧಿಕಾರಿಗಳು ಜಾಣ ಮೌನವಹಿಸಿರುವುದು ನೋಡಿದರೆ ಇವರ ಕರ್ತವ್ಯ ನಿಷ್ಠೆ ಕೇವಲ ಪ್ಲಾಸ್ಟಿಕ್ ಚೀಲ ಹಿಡಿಯುವುದಕ್ಕಷ್ಟೇ ಸೀಮಿತವಾದಂತಿದೆ. ಇಲ್ಲಿ ದಿನನಿತ್ಯ ವ್ಯಾಪಾರ ಮಾಡುವ ಅಂಗಡಿಕಾರರು ಹಾಗೂ ಸ್ವತಃ ಮೀನು ಮಾರುವವರು ಇಲ್ಲಿ ಉದ್ಭವಿಸುವ ಭಯಾನಕ  ಸೊಳ್ಳೆಗಳಿಂದ ಕಚ್ಚಿಸಿಕೊಂಡು ಕರೋನಾಕಿಂತ ಬಹುದೊಡ್ಡ ರೋಗಕ್ಕೆ ತುತ್ತಾಗಿ ನಮ್ಮನ್ನ ಅಗಲೀದಿದ್ದರೆ ಒಳ್ಳೆಯದು ಎನ್ನುವುದು ನನ್ನ ಪ್ರಾರ್ಥನೆ.

ಇಲ್ಲಿಯ ರೀತಿಯ ಅವ್ಯವಸ್ಥೆಯ ಬಗ್ಗೆ ಪುರಸಭೆಯ ಅಧಿಕಾರಿಗಳಿಗೆ ಫೋನ್ ಮೂಲಕ ಹೇಳಿದರೆ ದಪ್ಪ ಚರ್ಮದ ಅಧಿಕಾರಿಗಳು ಕಿವಿಗೆ ಕೇಳಿದರು ಏನು ತಿಳಿಯದ ಹಾಗೆ ಇದ್ದಿದ್ದಾರೆ. ಬರವಣಿಗೆಯ ಮೂಲಕ ಕೊಟ್ಟರೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಅಲ್ಲಿಯ ತನಕ ಯಾರೇ ರೋಗ ಬಂದು ಸತ್ತರು ನಾನು ಸುಡಲು ರೆಡಿ ಇದ್ದೀನಿ ಅನ್ನೋ ಉತ್ತರ  ಅವರ ಮಾತಿಂದ ನಿರೀಕ್ಷಿಸಬಹುದು.

ಇವರಿಂದ ಉಪಯೋಗವಾಗಲ್ಲ ಎಂದು ಹೇಳಿ ತಹಶೀಲ್ದಾರ ಅವರಿಗೆ ದೂರು ನೀಡಿದರೆ, ಅವರು ಫೋನ್ ರಿಸೀವ್ ಮಾಡಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುುದಾಗಿ  ಹೇಳಿ 10 ದಿನ ಆಗಿದೆ.. ಎಸಿ ಅವರಿಗೆ ಫೋನ್ ಮೂಲಕ ದೂರು ನೀಡಿದರು ಯಾವುದೇ ಫಲ ಇಲ್ಲ. ಇದೆಲ್ಲಾ ಸ್ಪಷ್ಟವಾಗಿ ಹೇಳುತ್ತದೆ ಜನರ ಸುಚಿತ್ವದ ಆರೋಗ್ಯ ನೆಮ್ಮದಿಯ ಬಗ್ಗೆ ಇಲ್ಲಿಯ ಯಾವೊಬ್ಬ ಅಧಿಕಾರಿಗಳಿಗೂ ಕಿಂಚಿತ್ತೂ ಯೋಚನೆ ಇದ್ದಂತೆ ಇಲ್ಲ ಹಾಗೂ ಅದು ಅವರಿಗೆ ಬೇಡವಾಗಿದೆ ಕೂಡ.

 

ದಿನ ನಿತ್ಯ ಮೀನು ಮಾರುವವರಿಗೆ ಮೊದಲಿನಂತೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಟ್ಟು, ಮೀನು ಮಾರಾಟಗಾರರ, ಬಡ ಅಂಗಡಿಕಾರರ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡಲು ಅಗದ ಇಂತಹ ಪುರಸಭೆಯ ಅಧಿಕಾರಿಗಳು ಇದ್ದರೆಷ್ಟು? ಸಾರ್ವಜನಿಕರು, ರಿಕ್ಷಾ ಡ್ರೈವರ್ ಗಳು, ಅಂಗಡಿಕಾರರು ಹಾಗೂ ಮೀನು ಮಾರಾಟಗಾರರು ರೋಚ್ಚಿಗೆ ಎದ್ದು ಪುರಸಭೆಯ ಅಧಿಕಾರಿಗಳಿಗೆ ಮುತ್ತಿಗೆ ಹಾಕುವ ತನಕ, ಹಿಗ್ಗಾ ಮುಗ್ಗಾ ಸಾಮಾನ್ಯ ಬಾಷೆ ಉಪಯೋಗಿಸದ ತನಕ ಅಲ್ಲಿಯ ಅಧಿಕಾರಿಗಳು ತಮ್ಮ ನಾಟಕದ ನಿದ್ರೆಯಿಂದ ಎದ್ದು ಬರುವ ಹಾಗೆ ಕಾಣಿಸುತ್ತಿಲ್ಲ .

ಬರವಣೆಗಳ ಮೂಲಕ ಕೊಟ್ಟರೆ ಮಾತ್ರ ನನ್ನ ಕ್ರಮ ಅನ್ನುವ ಅಧಿಕಾರಿಗಳೇ ನಿಮ್ಮ ಅಂಧ ಕರ್ತವ್ಯದ ರೀತಿಗೆ ನಮ್ಮ ದಿಕ್ಕಾರವಿದೆ.

ಪುರಸಭೆಯ ಅಧಿಕಾರಿಗಳೇ ನಿಮ್ಮ ಮೂಗಿನ ಕೆಳಗಡೆ ಇರುವ ಹಳೇ ಬಸ್ ನಿಲ್ದಾಣದ ಪರಿಸ್ಥಿತಿ ಹೀಗಾದರೆ ಉಳಿದ ಕಡೆ ಯಾವ ರೀತಿ ಸುಚಿತ್ವ ಕಾಪಾಡುವಿರೀ. ಇದು ನಿಮ್ಮ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಲ್ಲವೇ? ಈಗಲಾದರೂ ಎಚ್ಚೆತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಸುಚಿತ್ವ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಿ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...