ಕೆಲವು ಮಾಧ್ಯಮಗಳಿಂದ ಸುದ್ದಿಗಳಿಗೆ ಕೋಮುಬಣ್ಣ; ಸುಪ್ರೀಂ ಕಳವಳ

Source: VB | By I.G. Bhatkali | Published on 4th September 2021, 6:29 PM | National News |

ಹೊಸದಿಲ್ಲಿ: ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರಂಗಳಲ್ಲಿ ಹಾಗೂ ಡಿಜಿಟಲ್ ಔಟ್‌ಲೆಟ್‌ಗಳು ತಾವು ಪ್ರಸಾರ ಮಾಡುವ ಸುದ್ದಿಗಳಿಗೆ ಕೋಮುಬಣ್ಣ ಲೇಪಿಸುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

'ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ಜಾಲತಾಣಗಳಲ್ಲಿ ಸುದ್ದಿಗಳಿಗೆ ಕೋಮುಬಣ್ಣ ನೀಡಲಾಗುತ್ತಿದ್ದು, ಅದೊಂದು ಸಮಸ್ಯೆಯಾಗಿ ಬಿಟ್ಟಿದೆ'' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ತಿಳಿಸಿದ್ದಾರೆ. " ಕಟ್ಟಕಡೆಯದಾಗಿ ದೇಶಕ್ಕೆ ಇದರಿಂದ ಕೆಟ್ಟ ಹೆಸರು ಬರುತ್ತಿದೆ' ಎಂದವರು ಆತಂಕ ವ್ಯಕ್ತಪಡಿಸಿದರು.

ನಕಲಿ ಸುದ್ದಿಗಳನ್ನು ಹರಡುವ Nಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳು ನ್ಯಾಯಾಂಗದ ನಿರ್ದೇಶಗಳನ್ನು ಆಲಿಸುವುದೂ ಇಲ್ಲ ಅಥವಾ ಅವುಗಳಿಗೆ ಪ್ರತಿಕ್ರಿಯಿಸುವುದೂ ಇಲ್ಲ. ಯಾವುದೇ ಒಂದು ಸಂಸ್ಥೆಯ ಬಗ್ಗೆ ಅವು ಕೆಟ್ಟದಾಗಿ ಬರೆಯುತ್ತವೆ ಹಾಗೂ ಆನಂತರ ಆ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಅವು ಪ್ರತಿಕ್ರಿಯಿಸುವುದಿಲ್ಲ. ವ್ಯಕ್ತಿಗಳು ಬಿಡಿ, ಸಂಸ್ಥೆಗಳ ಪರಿಸ್ಥಿತಿ ಕೂಡಾ ಇದೇ ಆಗಿದೆ. ಪ್ರಭಾವಿ, ಬಲಿಷ್ಠರನ್ನು ಮಾತ್ರ ಅವು ಪರಿಗಣನೆಗೆ ತೆಗೆದುಕೊಳ್ಳುತ್ತವೆ.

ನ್ಯಾ- ಎನ್. ವಿ. ರಮಣ ಸಿಜೆಐ 

ಜಮಾತೆ ಉಲೇಮಾ ಇ ಹಿಂದ್ ಹಾಗೂ ಪೀಸ್ ಪಾರ್ಟಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಸಂದರ್ಭ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೊರೋನ ವೈರಸ್ ಸೋಂಕಿನ ಹರಡುವಿಕೆಯನ್ನು 2020ರ ಮಾರ್ಚ್ ನಲ್ಲಿ ದಿಲ್ಲಿಯಲ್ಲಿ ನಡೆದ ತಲ್ಲೀಗಿ ಜಮಾಅತ್ ಸಮಾವೇಶದ ಜೊತೆ ನಂಟನ್ನು ಕಲ್ಪಿಸುವ ಸುಳ್ಳು ಸುದ್ದಿಯ  ಬಹಿಷ್ಕರಿಸುವಂತೆ ಕರೆ ನೀಡುವ ಸುದ್ದಿಗಳು ಡಿಜಿಟಲ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದವು.

ಜನವರಿ ತಿಂಗಳಿನಲ್ಲಿಯೂ ಕೋಮುದ್ದೇಷದ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದಕ್ಕಾಗಿ ಸುದ್ದಿ ಮಾಧ್ಯಮಗಳನ್ನು ಸುಪ್ರೀಂಕೋರ್ಟ್ ಟೀಕಿಸಿತ್ತು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮ ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ಹೇರಲು ವಿಫಲವಾಗಿರುವುದಕ್ಕಾಗಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ನ್ಯಾಯಾಂಗದ ನಿರ್ದೇಶಗಳಿಗೆ ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್ ಈ ಸುದ್ದಿವಾಹಿನಿಗಳು ಯಾವತ್ತೂ ಪ್ರತಿಕ್ರಿಯಿಸುವುದಿಲ್ಲ'' ಎಂದು ನ್ಯಾಯಾಲಯ ಖಾರವಾಗಿ ಹೇಳಿದೆ.

ಇಂತಹ ಡಿಜಿಟಲ್ ಮಾಧ್ಯಮಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಬಲ್ಲಂತಹ ಯಾವುದಾದರೂ ಕಾನೂನು ಅಸ್ತಿತ್ವದಲ್ಲಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಕೇಂದ್ರ ಸರಕಾರದ ಅಟಾರ್ನಿ ಜನರಲ್ ತುಷಾರ್ ಮತ್ತು ಅವರು, ರೀತಿಯ ಡಿಜಿಟಲ್ ವೇದಿಕೆಗಳನ್ನು ನಿಯಂತ್ರಿಸಲು ಮಾಹಿತಿ ತಂತ್ರಜ್ಞಾನ ಕಾನೂನುಗಳನ್ನು ಕೇಂದ್ರ ಸರಕಾರವು ಫೆಬ್ರವರಿಯಲ್ಲಿ ಘೋಷಿಸಿದ್ದು ಅದು ಮೇನಲ್ಲಿ ಜಾರಿಗೆ ಬಂದಿದೆ ಎಂದರು. ಡಿಜಿಟಲ್ ಸುದ್ದಿಗಳು ಪ್ರಸಾರದ ಬಗ್ಗೆ ಇದೇ ಮೊದಲ ಬಾರಿಗೆ ಅವುಗಳನ್ನು ಸರಕಾರದ ಸುಪರ್ದಿಗೊಳಪಡಿಸಿದೆ ಎಂದರು.

ನೂತನ ಮಾಹಿತಿ ತಂತ್ರಜ್ಞಾನ ಕಾನೂನುಗಳನ್ನು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದೆ ಎಂದು ತಿಳಿಸಿದ ಸಾಲಿಸಿಟರ್ ಜನರಲ್, ಆ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲು ನ್ಯಾಯಾಲಯದ ಅನುಮತಿ ಯನ್ನು ಕೋರಿದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ತಬ್ಬಿಗಿ ಜಮಾಅತ್ ಸಮಾವೇಶದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದ ವಿವಾದಿತ ಸುದ್ದಿಗಳ ಕುರಿತಾದ ಹಾಲಿ ಪ್ರಕರಣದ ಜೊತೆ ಇತರ ಅರ್ಜಿಗಳ ಆಲಿಕೆ ನಡೆಸಲು ಒಪ್ಪಿಕೊಂಡಿತು. ಇದೀಗ ಈ ವಿಷಯವನ್ನು ಆರು ವಾರಗಳ ಬಳಿಕ ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.


 

N V Raman

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...