ವಿವಾಹಿತ ಮಹೆಳೆ ಬಾವಿಗೆ ಹಾರಿ ಆತ್ಮಹತ್ಯೆ

Source: sonews | By Staff Correspondent | Published on 22nd July 2017, 11:05 PM | Coastal News | Incidents | Don't Miss |

ಭಟ್ಕಳ: ತಾಲ್ಲೂಕಿನ ಬೆಳಕೆಯಲ್ಲಿ ವಿವಾಹಿತ ಮಹಿಳೆಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.

ಮೃತ ಮಹಿಳೆಯನ್ನು ಶಿರಾಲಿ ಚಿತ್ರಾಪುರದ ನಿವಾಸಿ ವೀಣಾ ಶಿವರಾಮ ನಾಯ್ಕ (೨೯) ಎಂದು ಗುರುತಿಸಲಾಗಿದೆ. ಕಳೆದ ಫೆಬ್ರವರಿಯಲ್ಲಷ್ಟೇ ಈಕೆಯ ವಿವಾಹ ಚಿತ್ರಾಪುರದ ಶಿವರಾಮ ನಾಯ್ಕ ಎನ್ನುವವರೊಂದಿಗೆ ನಡೆದಿತ್ತು. ಬೆಳಕೆಯ ತನ್ನ ತವರು ಮನೆಗೆ ಬಂದಿದ್ದ ಈಕೆಯು ಶುಕ್ರವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯವರು ಈಕೆಯನ್ನು ರಾತ್ರಿ ಹುಡುಕಾಡುತ್ತಿರುವಾಗ ಬಾವಿಯಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ನಂತರ ಅಗ್ನಶಾಮಕ ದಳದವರಿಗೆ ವಿಷಯ ತಿಳಿಸಿದ್ದು ಸಿಬ್ಬಂದಿಗಳು ಶವವನ್ನು ಮೇಲಕ್ಕೆ ತಂದಿದ್ದಾರೆ.  
ಈಕೆಯ ಪತಿ ಶಿವರಾಮ ನಾಯ್ಕ ಅವರ ಮೇಲೆ ಗ್ರಾಮೀಣ ಠಾಣೆಯಲ್ಲಿ ಆಕೆಯ ತಂದೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ತಹಸೀಲ್ದಾರ್ ವಿ.ಎನ್. ಬಾಡಕರ್, ಗ್ರಾಮೀಣ ಸಬ್ ಇನ್ಸಪೆಕ್ಟರ್ ಮಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. 
 

Read These Next

ಸಿದ್ದಾರ್ಥ ಪದವಿ ಮಹಾವಿದ್ಯಾಲಯ ದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಸಿದ್ದಾರ್ಥ ಪದವಿ ಮಹಾವಿದ್ಯಾಲಯ ದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...