ಜನರ ರಕ್ಷಣೆಗೆ ಬಂತು ಹೊಸ ಪೊಲೀಸ್ ಪಡೆ:ಭಟ್ಕಳ ದಲ್ಲಿ ಚಾಲನೆಗೊಂಡ ಕ್ಷೀಪ್ರ ಕಾರ್ಯಚರಣೆ ತಂಡ

Source: S.O. News Service | By MV Bhatkal | Published on 27th February 2021, 4:54 PM | Coastal News | Don't Miss |

ಭಟ್ಕಳ:ಈ ಬಾರಿ ಭಟ್ಕಳ ಮಹಾರಥೋತ್ಸವಕ್ಕೆ ವಿಶೇಷ ಪೊಲೀಸ್ ತಂಡವೊದು ರಚನೆಯಾಗಿರುವದು ಒಂದೆಡೆ ಸಾರ್ವಜನಿಕರ ಕೂತುಹಲಕ್ಕೆ ಕಾರಣವಾದರೆ ಇನ್ನೊಂದೆಡೆ ಭಟ್ಕಳ ಪೊಲೀಸ್ ಅಧಿಕಾರಿಗಳ ಈ ನಡೆ ಬಾರೀ ಪ್ರಶಂಸೆಗೆ ಒಳಗಾಗಿದೆ.
ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಭಟ್ಕಳ ಪೊಲೀಸರು ತಮ್ಮದೆ ಆದ ಕೊಡುಗೆ  ನೀಡಿದ್ದಾರೆ. ಇದು ಜಿಲ್ಲೆಯ ಮಟ್ಟಿಗೆ ಮೊದಲು ಪ್ರಯೋಗ. ಪ್ರತಿಬಾರಿಯೂ ಮಹಾರಥೋತ್ಸವ ಸೇರಿದಂತೆ ಇತರೆ ಯಾವುದೆ ದೊಡ್ಡ ಕಾರ್ಯಕ್ರಮ ನಡೆದರೂ ಹೊರ ಜಿಲ್ಲೆಗಳಿಂದ ಪೊಲೀಸ್ ಪಡೆ ಭಟ್ಕಳಕ್ಕೆ ಬರುತಿತ್ತು. ಆದರೆ ಈ ಬಾರಿ ಜಿಲ್ಲೆಯ ಇತರ ಭಾಗಗಳಿಂದ ಕೆಲವೆ ಕೆಲವು ಅಧಿಕಾರಿಗಳನ್ನು ಹೊರುತು ಪಡಿಸಿ ಭಟ್ಕಳ ಪೊಲೀಸರೆ ಒಂದು ವಿಶೇಷ ತಂಡವನ್ನು ರಚಿಸಿದ್ದಾರೆ. ಕಪ್ಪು ಟಿ ಶರ್ಟ, ಮಿಲಿಟಿರಿ ಫ್ಯಾಂಟನ್ನು ಧರಿಸಿದ ಈ ಪಡೆ  ಯೋಧರಂತೆ ಕಂಗೊಳಿಸಿದ್ದು, ಕೈಯಲ್ಲಿ ನೂತನ ಆಯುಧ ಹಿಡಿದು ಜನರನ್ನು ಒಮ್ಮೆ ಚಕಿತಗೊಳಿಸಿದೆ. ಎಲ್ಲಿಯೂ ಮುಖದ ಗುರುತು ಹೊರ ಬರದಂತೆ ಕಪ್ಪ ಮುಖಗವಸನ್ನು ಧರಿಸಿದ್ದು, ರಥೋತ್ಸವಕ್ಕೆ ಕೆಲವೆೆ ಕ್ಷಣಗಳಿರಬೇಕಾದರೆ ಜನರ ಎದರು ಬಂದಿರುವದು ವಿಶೇಷವಾಗಿತ್ತು.


 ತಾಲೂಕಿನ ಜನರಲ್ಲಿ ಯಾವುದೆ ಆತಂಕ ಮನೆ ಮಾಡದೆ, ಜನರ ಭದ್ರತೆಗೆ ಮೊದಲ ಆಧ್ಯತೆ ನೀಡುವ ನಿಟ್ಟಿನಲ್ಲಿ ಈ ಪಡೆ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಮುಖ ಬಂದೊಬಸ್ತ ಇದ್ದಲ್ಲಿ ಈ ಕ್ಷಿಪ್ರ ಕಾರ್ಯಚರಣೆ ಪಡೆ ಕಾರ್ಯಚರಣೆಗಿಳಿಯಲಿದೆ. ಈ ಕ್ಷಿಪ್ರ ಕಾರ್ಯಚರಣೆಯ ಮೊದಲ ಪ್ರಯೋಗವನ್ನು ಮಹಾರಥೋತ್ಸವದಂದೆ ಆರಂಭಿಸಲಾಗಿತ್ತು. ಈ ಪಡೆಯಲ್ಲಿ ವಿಶೇಷ ತರಬೇತಿ ಪಡೆದ ೫೦ ಪೊಲೀಸ್ ಸಿಬ್ಬಂದಿ, ಶರವಾತಿ ಪಡೆಯ ೧೦ ಮಹಿಳಾ ಸಿಬ್ಬಂದಿ ಬಂದೊಬಸ್ತನಲ್ಲಿ ಪಾಲ್ಗೊಂಡಿದ್ದರು. 
ಮುಂದೆಯೂ ಕಾರ್ಯನಿರ್ವಹಿಸಲಿದೆ ಈ ಪಡೆ..
ಕಾಲೇಜು ವಿದ್ಯಾರ್ಥಿನೀಯರಿಗೆ ಕಿರುಕುಳ, ಮಹಿಳೆಯರಿಗೆ ತೊಂದರೆ, ಸಮುದ್ರ ತೀರದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸದಂತೆ ತಡೆಯಲು ಈ ಪಡೆಯನ್ನು ನಿಯುಕ್ತಿಗೊಳಿಸಲಾಗುವದು. ಶರಾವತಿ ಮಹಿಳಾ ಪಡೆಯ ಸಿಬ್ಬಂದಿ ಈದರ ನೇತೃತ್ವ ವಹಿಸಲಿದ್ದು ಮುಂದಿನ ದಿನಗಳಲ್ಲಿ ಮಹಿಳಾ ಶೋಷಣೆ ನಡೆಯದಂತೆ ತಡೆಯುವಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ. ಪಾರದರ್ಶವಾದ ಸೇವೆ ನೀಡುವ ಉದ್ದೇಶದಿಂದ ಈ ಪಡೆಯ ಗುರುತು ಸಿಗದಂತೆ ಮುಖಗವಸುನ್ನು ಧರಿಸಿ ಕರ್ತವ್ಯ ನಿರ್ವಹಿಸಲಿದೆ ಎಂದು ಸಿಪಿಐ ದಿವಾಕರ ತಿಳಿಸಿದ್ದಾರೆ.

Read These Next

ಮಂಗಳ ಗ್ರಹದ ಆಚ್ಚಾದನೆ ವೀಕ್ಷಣೆ

ಮಂಗಳೂರು : ಖಗೋಳದ ಅಪರೂಪ ವಿದ್ಯಮಾನವಾದ ಚಂದ್ರನಿಂದ ಮಂಗಳ ಗ್ರಹದ ಆಚ್ಚಾದನೆಯನ್ನು  ಎಪ್ರಿಲ್ 17 ರಂದು ಸಂಜೆ ಪಿಲಿಕುಳ ಪ್ರಾದೇಶಿಕ ...

ಭಟ್ಕಳದಲ್ಲಿ ಉದ್ಯೋಗ ಸಂದರ್ಶನ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು, ...

ಕೋವಿಡ್ ನಿಯಂತ್ರಣಕ್ಕೆ ಪ್ರಥಮ ಆದ್ಯತೆ. ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು : ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್ ನಿಯಂತ್ರಣದ ಕರ್ತವ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ...

ಜಿಲ್ಲೆಯ ಮದುವೆ ಹಾಗೂ ಇತರೆ ಸಮಾರಂಭಗಳ ಆಯೋಜನೆಗೆ ಪಾಸ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಧಾರವಾಡ : ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಉಲ್ಬಣವಾಗಿದ್ದು, ನಿಯಂತ್ರಣ ಕಾರ್ಯ ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ...