ಭಟ್ಕಳ ಬ್ಲಾಕ ಕಾಂಗ್ರೆಸ ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿಗಳ ಆಯ್ಕೆ

Source: so news | By Staff Correspondent | Published on 10th September 2019, 12:32 AM | Coastal News | Don't Miss |

 


ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್ ಅವರ ಅಧ್ಯಕ್ಷತೆಯಲ್ಲಿ ಭಟ್ಕಳ ತಾಲೂಕು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸಭೆ ನಡೆದಿದ್ದು ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.

ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್ ಈಗಾಗಲೇ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಇರ್ಶಾದ ಮೊಹಿದ್ದೀನ್ ಇಸ್ಮಾಯಿಲ್ ಸಿದ್ದಿಕಾ, ಎಮ್. ಜುಬೈರ ಅಬ್ದುಲ್ಲಾ ಎಮ್., ಮೊಹಮ್ಮದ ಸಲೀಂ ಎಮ್. ನಿಜಾಮ್ ಮುಮ್ಮಿಗಟ್ಟಿ, ನಾಜಿಬುರ ರೆಹಮನ್ ಅಬ್ದುಲ್ ಖಾದೀರ, ಸಿ.ಎಮ್. ದೇವಿದಾಸ ಆಯ್ಕೆಗೊಂಡಿದ್ದಾರೆ.
ಇನ್ನುಳಿದಂತೆ ಘಟಕದ ಸಂಯೋಜಕರಾಗಿ ಮೊಹಮ್ಮದ್ ಇಸ್ಮಾಯಿಲ್ ಅಕ್ರಮ, ಸವಿತಾ ಅಜಿತ ಶೆಟ್ಟಿ, ಅಬುಬಕ್ಕರ ಹಸನ್ ಬಾಪು ದಾಮದ, ಸಲೀದ ಸಿಗಬತುಲ್ಲಾಹ ದಾಮುದಿ, ಇರ್ಪಾನ ಅಹಮ್ಮದ್ ಸಯ್ಯದ್ ಎಮ್.ಡಿ ಉಸ್ಮಾನ್, ಅಬ್ದುಲ್ ರಜಾಕ್ ಮೊಹ್ಮಮದ್ ಹುಸೇನ್, ಸಯ್ಯದ್ ಅಬು ಜಿಂದಾಲ್ ಹಮೀದ್, ಖಾದರ ಭಾಷಾ ಅಬ್ದುಲ್ ಸಹಾದ್, ಅಬ್ದುಲ್ ರವೂಪ್ ಮೊಹಮ್ಮದ್ ಮೊಹಿದ್ದೀನ್, ನಜೀರ ಅಹ್ಮದ್ ಅಬ್ದುಲ್ ಗಫರ ಶೇಖ್, ತಯಾಬ್ ಹಸನ್ ಅಜಾಯಿಬ್, ಕ್ಯೂನಿ ಎಪ್ ಡಿಸೋಜಾ, ರಿಯಾಜ್ ಅಹ್ಮದ್ ವಾಯ್ ಅತ್ತರ, ಗೌಸ ಶರೀಪ್ ಅಮೀರ ಸಾಹೇಬ್ ಹಾಗೂ ಯೋಗರಾಜ ಆಲೂರು ಜೈನ್ ಅವರು ಅಯ್ಕೆಯಗಿದ್ದಾರೆ.  
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜಿದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನೀರ್ ಅಹ್ಮದ್ ಹಾಗೂ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಇಂಟೆಕ್ಸ್ ಅಧ್ಯಕ್ಷ ವಿಷ್ಣು ದೇವಾಡಿಗ, ಪ್ರಚಾರ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ಕಿಸಾನ್ ಸಂಘದ ಅಧ್ಯಕ್ಷ ಕೆ.ಜೆ. ನಾಯ್ಕ, ಸೇವಾದಳದ ವಿಭಾಗದ ಅಧ್ಯಕ್ಷ ರಾಜೇಶ್ ನಾಯ್ಕ, ಶಿರಾಲಿ ಗ್ರಾಪಂ ಅಧ್ಯಕ್ಷ ವೆಂಕಟೇಶ್ ನಾಯ್ಕ, ಕಾಂಗ್ರೆಸ್ ಶಕ್ತಿ ಸಂಯೋಜಕ ಸತೀಶ್ ಆಚಾರ್ಯ, ಕೆ. ಸುಲೇಮಾನ್ ಹಾಗೂ ಭಟ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. 

ಸಂತಾಪ ಸೂಚಕ, ಹಣ್ಣು ಹಂಪಲು ವಿತರಣೆ: ತಾಲೂಕಾ ಬ್ಲಾಕನ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪ್ರಸಿದ್ಧ ಸಿಟಿ ಲೈಟ್ ಹೋಟೇಲಿನ ಮಾಲೀಕ ನೂರುಲ್ಲಾ ಅಮೀನ್ ಅವರು ಇತ್ತೀಚೆಗೆ ಬೈಂದೂರಿನ ನಾಯಕನಕಟ್ಟೆ ಸಮೀಪ ವಾಹನ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆ ಅವರ ಸಂತಾಪ ಸೂಚಕ ಪ್ರಯುಕ್ತ ಭಟ್ಕಳ ತಾಲೂಕು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...