ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿರ್ಬಂಧಗಳ ಹೊಸ ಮಾರ್ಗಸೂಚಿ ಜಿಲ್ಲೆಯಲ್ಲಿ ಯಥಾವತ್ ಅನುಷ್ಠಾನ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Source: SO News | By Laxmi Tanaya | Published on 22nd April 2021, 7:40 AM | State News | Don't Miss |

ಧಾರವಾಡ : ದೇಶದಲ್ಲಿ ಕೋವಿಡ್ 2ನೇ ಅಲೆ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ  ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಯಥಾವತ್ ಜಾರಿಗೊಳಿಸಲಾಗುವುದು. ಏಪ್ರಿಲ್ 21 ರ ರಾತ್ರಿಯಿಂದ ಮೇ 4 ರವರೆಗೆ ಈ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ.  ಈ ಅವಧಿಯಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಸಹಕರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

 ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಏ.21ರಿಂದ  ಮೇ.4 ರ ವರೆಗೆ ಪ್ರತಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನೈಟ್ ಕಫ್ರ್ಯೂ ಜಾರಿಯಲ್ಲಿರುತ್ತದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ  ವಾರಾಂತ್ಯದ ಕಫ್ರ್ಯೂ ಇರುತ್ತದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲೆಯ ಗ್ರಾಮೀಣ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಯಾದ ನಾನು ನಿಷೇಧಾಜ್ಞೆಯ ಆದೇಶ ಹೊರಡಿಸುತ್ತೇನೆ ಎಂದರು.

ನೈಟ್ ಕಫ್ರ್ಯೂ ಮಾರ್ಗಸೂಚಿಗಳು: ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ವ್ಯಕ್ತಿಗಳ ಸಂಚಾರವನ್ನು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತುರ್ತು ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳು ಮತ್ತು ಅವರೊಂದಿಗೆ ಒಬ್ಬರಿಗೆ ಅವಕಾಶ ನೀಡಲಾಗುವುದು. ರಾತ್ರಿಯಲ್ಲಿ ಕಾರ್ಯಾಚರಣೆ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು, ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ. ಅಂತಹ ಸಂಸ್ಥೆಗಳ ನೌಕರರು ಆಯಾ ಸಂಸ್ಥೆ ಸಂಸ್ಥೆ ನೀಡುವ ಗುರುತಿನ ಚೀಟಿ ತೋರಿಸಬೇಕು. ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಟ್ರಕ್‍ಗಳು, ಸರಕು ವಾಹನಗಳು ಅಥವಾ ಖಾಲಿ ವಾಹನಗಳು ಸೇರಿದಂತೆ ಯಾವುದೇ ಸರಕು ಸಾಗಣೆದಾರರ ವಾಹನಗಳಿಗೆ   ನಿಬರ್ಂಧವಿರುವುದಿಲ್ಲ. ದೂರದ ಪ್ರಯಾಣದ ರಾತ್ರಿ ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಪ್ರಯಾಣವನ್ನು ಅನುಮತಿಸಲಾಗಿದೆ. ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಿಗೆ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳು ಸಂಚರಿಸಲು ಅವಕಾಶವಿದೆ. ಕಟ್ಟಡ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ಸರಕುಗಳು ಅಗಡಿ ಮುಂಗಟ್ಟುಗಳ ವಹಿವಾಟಿಗೆ ನಿರ್ಬಂಧವಿಲ್ಲ. 

ನಿಷೇಧಿತ ಚಟುವಟಿಕೆಗಳು : ಶಾಲಾ, ಕಾಲೇಜುಗಳು, ಕೋಚಿಂಗ್ ಸೆಂಟರ್‍ಗಳು ಮುಚ್ಚಲ್ಪಡುತ್ತವೆ.   ಆನ್‍ಲೈನ್ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸಬಹುದು. ಎಲ್ಲಾ ಸಿನಿಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಜಿಮ್‍ಗಳು, ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ, ಈಜುಕೊಳಗಳು, ಮನರಂಜನೆ, ಮನೋರಂಜನಾ ಉದ್ಯಾನಗಳು, ಚಿತ್ರಮಂದಿರಗಳು, ಬಾರ್‍ಗಳು ಮತ್ತು ಸಭಾಂಗಣಗಳು ಹಾಗೂ ಕ್ಲಬ್‍ಗಳನ್ನು ಬಂದ್ ಮಾಡಲಾಗುವುದು.  

   ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕøತಿಕ, ಧಾರ್ಮಿಕ ಸಭೆ  ಹಾಗೂ ಇತರೆ ಸಭೆಗಳನ್ನು ಆಯೋಜಿಸುವಂತಿಲ್ಲ. ಎಲ್ಲಾ ಧಾರ್ಮಿಕ ಸ್ಥಳಗಳು ಹಾಗೂ ಪೂಜಾ ಸ್ಥಳಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ದೈನಂದಿನ ಪೂಜಾಕಾರ್ಯಗಳನ್ನು ಮಾಡಬಹುದು. ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಯಾಟರಿಂಗ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಟ್ಟಡ ಕಾಮಗಾರಿ ಹಾಗೂ ದುರಸ್ತಿ ಚಟುವಟಿಕೆಗಳಿಗೆ  ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು.  

 ಎಲ್ಲಾ ಕೈಗಾರಿಕೆಗಳು, ಕೈಗಾರಿಕಾ ಸಂಸ್ಥೆಗಳು, ಉತ್ಪಾದನಾ ಘಟಕಗಳು ಕೋವಿಡ್ ಸೂಕ್ತ ನಿಯಮಗಳನ್ನು ಅನುಸರಿಸಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.  ಪಡಿತರ ಅಂಗಡಿಗಳು (ಪಿಡಿಎಸ್), ಆಹಾರ,  ದಿನಸಿ,  ಹಣ್ಣು, ತರಕಾರಿ ಅಂಗಡಿಗಳು ಮತ್ತು ಹಾಲಿನ ಡೈರಿಗಳು ಹಾಗೂ ಮಾಂಸ ಮತ್ತು ಮೀನು, ಪ್ರಾಣಿಗಳ ಮೇವನ್ನು ಅನುಮತಿಸಲಾಗಿದೆ.  ಮದ್ಯದಂಗಡಿ, ಮಳಿಗೆ ಮತ್ತು ಬಾರ್ ಹಾಗೂ ರೆಸ್ಟೊರೆಂಟ್‍ಗಳಲ್ಲಿ ಪಾರ್ಸೆಲ್‍ಗೆ ಅವಕಾಶ ನೀಡಲಾಗಿದೆ. ಆಹಾರ ಸಂಸ್ಕರಣ ಘಟಕಗಳಿಗೆ ಅವಕಾಶ ನೀಡಲಾಗಿದೆ. ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗೆ ಅನುಮತಿ ನೀಡಲಾಗಿದೆ.  ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅನುಮತಿ ನೀಡಲಾಗಿದೆ. ಸಲೂನ್ ಮತ್ತು ಬ್ಯೂಟಿ ಪಾರ್ಲರ್‍ಗಳಿಗೆ ಕೋವಿಡ್ ನಿಯಮ ಅನುಸರಿಸಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ.
 
 ಐಟಿ ಮತ್ತು ಇತರೆ ಕಂಪನಿಗಳು ಅವಶ್ಯಕತೆ ಇರುವ ಸಿಬ್ಬಂದಿಗಷ್ಟೇ ಕಚೇರಿಗೆ ಬರಲು ತಿಳಿಸಬೇಕು. ಉಳಿದವರು ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು. ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸಗಳು ಸಂಬಂಧಿಸಿದ ಕೋರ್ಟ್ ಆದೇಶದಂತೆ ಕಾರ್ಯನಿರ್ವಹಿಸಬೇಕು. ಸರ್ಕಾರದ ಕಚೇರಿಗಳು ಸಂಬಂಧಪಟ್ಟ ಇಲಾಖೆಯವರು ಹೊರಡಿಸುವ ಆದೇಶದಂತೆ ಕಾರ್ಯನಿರ್ವಹಿಸಬೇಕು. 

 ಪೆಟ್ರೊಲ್, ಡಿಸೇಲ್, ಸಿಲಿಂಡರ್ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತವೆ. ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು, ರೈಲುಗಳು, ಟ್ಯಾಕ್ಸಿ, ಕ್ಯಾಬ್ ಹಾಗೂ ಆಟೋ ರಿಕ್ಷಾ ಮತ್ತಿತರ ಸಾರಿಗೆ ಸೇವೆಗಳು ಕೊರೊನಾ ಮಾರ್ಗಸೂಚಿ ಅನುಸರಿಸಿ ಕಾರ್ಯನಿರ್ವಹಿಸಬೇಕು. ಆರೋಗ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿಗಳು, ಆಯುಷ್ ಮತ್ತು ಪಶು ವೈದ್ಯಕೀಯ ಆಸ್ಪತ್ರೆಗಳು ತೆರೆದಿರುತ್ತವೆ.  ಅಂತರ ರಾಜ್ಯ ಹಾಗೂ ರಾಜ್ಯದೊಳಗೆ ಸಂಚರಿಸಲು ಅವಕಾಶ  ನೀಡಲಾಗಿದ್ದು, ಕಟ್ಟು ನಿಟ್ಟಾಗಿ ಕೋವಿಡ್ ನಿಯಮಗಳನ್ನು ಅನುಸರಿಸಬೇಕು. ಮದುವೆಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಾಗೂ ಅಂತ್ಯಕ್ರಿಯಗೆ 20 ಜನರಿಗೆ ಅವಕಾಶ ನೀಡಲಾಗಿದೆ.

 ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ, ಅವರಿಗೆ ದಂಡ ವಿಧಿಸಲಾಗುವುದು, ಕಚೇರಿ, ಇತರೆ  ಕೆಲಸದ ಸ್ಥಳಗಳು, ಅಂಗಡಿಗಳು, ಮಾರುಕಟ್ಟೆಗಳು ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ   ಕೆಲಸ ಮಾಡುವ ಸ್ಥಳಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು ಹಾಗೂ ಸ್ಯಾನಿಟೈಜೆಷನ್ ಮಾಡಬೇಕು.  ಥರ್ಮಲ್ ಸ್ಕ್ರೀನಿಂಗ್ ಬಳಸಿ ಜನರ ಶಾರೀರಿಕ ತಾಪಮಾನ ಪರೀಕ್ಷಿಸುತ್ತಿರಬೇಕು ಎಂದರು. 

ಮದುವೆ 50 ಜನರಿಗೆ ಮಾತ್ರ ಅವಕಾಶ: ನೈಟ್‍ಕಫ್ರ್ಯೂ ಮತ್ತು ಶನಿವಾರ, ಭಾನುವಾರದ ಕಫ್ರ್ಯೂ ದಿನಗಳಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ಆಯೋಜಿಸಬಹುದು. ಆದರೆ ಸಂಬಂಧಿಸಿದ ತಹಶೀಲ್ದಾರರು ಅಥವಾ ಮಹಾನಗರ ಪಾಲಿಕೆಯ ವಲಯ ಸಹಾಯಕ ಆಯುಕ್ತರು ನೀಡುವ ಪಾಸ್‍ಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಪಾಸ್ ಹೊಂದಿದ 50 ಜನರು ಮಾತ್ರ ಮದುವೆ ಸ್ಥಳದಲ್ಲಿ ಇರಬೇಕು. ಹೆಚ್ಚು ಜನರಿದ್ದರೆ ವಧು, ವರ, ಪಾಲಕರು ಹಾಗೂ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ರೆಮಿಡಿಸೀವರ್, ಆಕ್ಸಿಜನ್ ಕೊರತೆ ಇಲ್ಲ : ಜಿಲ್ಲೆಯಲ್ಲಿ ರೆಮಿಡಿಸೀವರ್  ಇಂಜೆಕ್ಷನ್ ಹಾಗೂ ವೈದ್ಯಕೀಯ ಆಕ್ಸಿಜನ್ ಕೊರತೆ ಇಲ್ಲ. ನಮ್ಮ ಜಿಲ್ಲೆಯಿಂದ ಪ್ರತಿದಿನ ಸಲ್ಲಿಸಲಾಗುವ ಬೇಡಿಕೆಗೆ ಅನುಗುಣವಾಗಿ ರಾಜ್ಯ ಸರ್ಕಾರ ರೆಮಿಡಿಸೀವರ್ ಇಂಜೆಕ್ಷನ್ ಪೂರೈಸುತ್ತಿದೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಂದ ರೆಮಿಡಿಸೀವರ್ ಕೊರತೆ ಬಗ್ಗೆ ಈವರೆಗೆ ದೂರುಗಳು ಬಂದಿಲ್ಲ. ವೈದ್ಯಕೀಯ ಆಕ್ಸಿಜನ್ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಕಿಮ್ಸ್ ಒಂದರಲ್ಲಿಯೇ 40 ಕೆಎಲ್ ಸಂಗ್ರಹ ಸಾಮಥ್ರ್ಯದ 2 ಘಟಕಗಳಿವೆ. ಜಿಲ್ಲಾಸ್ಪತ್ರೆಯಿಲ್ಲಿಯೂ 6 ಕೆಎಲ್ ಸಂಗ್ರಹ ಸಾಮಥ್ರ್ಯವಿದೆ.  ಉಳಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳು ಸೇರಿ ಸುಮಾರು 10 ಕೆಎಲ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಸಾಮಥ್ರ್ಯ ಹೊಂದಿವೆ. 

ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇಲ್ಲ : ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇಲ್ಲ. ಪ್ರಸ್ತುತ 1627 ಸಕ್ರಿಯ ಪ್ರಕರಣಗಳಲ್ಲಿ 421ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 342 ನಮ್ಮ ಜಿಲ್ಲೆಯವರು. ಹಾಗೂ 79 ನೆರೆಯ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.  ಉಳಿದವರು ಮನೆಗಳಲ್ಲಿಯೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಣ ರಹಿತ ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. 

 ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವೀಮಠ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ: ಶಶಿ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...

ಕುಂದಾಪುರ: ಕುಂದಾಪುರ, ಉಳ್ಳಾಲ, ಕಾಪುವಿನಲ್ಲಿ ಕಡಲ್ಕೊರೆತ, ಮರವಂತೆಯಲ್ಲಿ ತೆಂಗಿನಮರ, ಮೀನುಗಾರಿಕಾ ಶೆಡ್‌ಗಳು ಸಮುದ್ರಪಾಲು, ಸೋಮೇಶ್ವರದಲ್ಲಿ ಆವರಣ ಗೋಡೆ ಕುಸಿತ

ವಾಯುಭಾರ ಕುಸಿತದಿಂದ ಪಶ್ಚಿಮದ ಅರಬಿ ಸಮುದ್ರದಲ್ಲಿ ಉಂಟಾದ ತೌಕ್ತೆ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧಗೊಳ್ಳಲಾರಂಭಿಸಿದ್ದು

*ಕಲ್ಲಡ್ಕದಲ್ಲಿ ಬಿಜೆಪಿ ಕರ‍್ಯರ‍್ತರಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಅರೋಪಿಗಳ ಮೇಲೆ ಇಲಾಖೆ ಯಾಕಾಗಿ ಕ್ರಮ ಕೈಗೊಳ್ಳತ್ತಿಲ್ಲ : ಎಸ್ ಡಿ ಪಿ ಐ*

ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಇಂದು ಲಾಕ್ಡೌನ್ ಅವದಿ ಮುಗಿದ ನಂತರ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ಬಂಟ್ವಾಳ ನಗರ ...

ಉಡುಪಿ: ಕರಾವಳಿಯಲ್ಲಿ ಇಂದು, ನಾಳೆ ರೆಡ್ ಅಲರ್ಟ್, ಅರಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತ ಭೀತಿ

ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ 'ತೌಕ್ತೆ' ಹೆಸರಿನ ಚಂಡಮಾರುತ ಉಂಟಾಗಿದ್ದು, ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ...

ಕೋಲಾರ: ವೇಮಗಲ್ ವೃತ್ತನಿರೀಕ್ಷಕ ಹಂತದ ಠಾಣೆಯಾಗಿ ಮೇಲ್ದರ್ಜೆಗೆ ಸಚಿವ ಬಸವರಾಜ್ ಬೊಮ್ಮಾಯಿಗೆ ಸುದರ್ಶನ್ ಧನ್ಯವಾದ

ವೇಮಗಲ್ ಪೊಲೀಸ್ ಠಾಣೆಯನ್ನು ವೃತ್ತ ನಿರೀಕ್ಷಕ ಹಂತದ ಠಾಣೆಯಾಗಿ ಹಾಗೂ ನರಸಾಪುರ ಹೊರ ಠಾಣೆಯನ್ನು ಉಪ ಆರಕ್ಷಕ ನಿರೀಕ್ಷಕರ ...

ತೌಕ್ತೆ ಚಂಡಮಾರುತ ದ ಎಫೆಕ್ಟ್ ಗೆ ತತ್ತರಿಸಿದ ಉತ್ತರಕನ್ನಡ ಕರಾವಳಿ. ಮನೆಗಳಿಗೆ ನುಗ್ಗಿದ ನೀರು, ಆಸ್ತಿಪಾಸ್ತಿಗೆ ಹಾನಿ.

ಕಾರವಾರ : ತೌಕ್ತೆ ಚಂಡಮಾರುತದ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ತಟ್ಟಿದೆ. ಪರಿಣಾಮವಾಗಿ ಜಿಲ್ಲೆಯ ಕಡಲಂಚಿನಲ್ಲಿ ...

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಬಳಕೆಯ ಬಗ್ಗೆ ನೌಕಾದಳದ ಅಧಿಕಾರಿಗಳಿಂದ ಮಾಹಿತಿ

ಪ್ರಸಕ್ತವಾಗಿ ಕೋವಿಡ್ ಕೇಂದ್ರಗಳಿಗೆ ಆಮ್ಲಜನಕ ಬೇಡಿಕೆ ಹೆಚ್ಚುತ್ತಿದ್ದು, ಆಮ್ಲಜನಕ ಬಳಕೆಯ ಸಂದರ್ಭದಲ್ಲಿ ಯಾವುದೇ ಅನಾಹುತ ...