ನವದೆಹಲಿ: ’ವಿಸಿಟ್’ ಆನ್ ಲೈನ್ ತಂತ್ರಜ್ಞಾನದ ಮೂಲಕ ರೋಗಿ-ವೈದ್ಯರ ನಡುವೆ ನೇರ ಸಂಪರ್ಕ

Source: vb | By Arshad Koppa | Published on 13th September 2016, 10:18 AM | Technology |

ಹೊಸದಿಲ್ಲಿ, ಸೆ.೧೧: ತಂತ್ರಜ್ಞಾನ ಸಜ್ಜಿತವಾಗಿರುವ ಹೊಸ ಸ್ಟಾರ್ಟಪ್ ಕಂಪೆನಿಗಳು ಆನ್‌ಲೈನ್ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದು, ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳೊಂದಿಗೆ ಸಂಬಂಧಿಸಿರುವ ‘ಪಾಪ’ಗಳಿಗೆ ಸವಾಲೊಡ್ಡಿವೆ. ಅವು ಸಣ್ಣ ಪಟ್ಟಣಗಳ ಜನರನ್ನು ದೊಡ್ಡ ನಗರಗಳ ವೈದ್ಯರೊಂದಿಗೆ ದೂರ ಸಂಪರ್ಕದ ಮೂಲಕ ಒಂದು ಮಾಡುತ್ತಿವೆ. ದಿಲ್ಲಿ ಮೂಲದ ‘ವಿಸಿಟ್’ ಎಂಬ ಬೇಡಿಕೆಯ ಮೇಲೆ ಆರೋಗ್ಯ ಸೇವೆ ಒದಗಿಸುವ ಆನ್‌ಲೈನ್ ವೇದಿಕೆಯು, ಬಳಕೆದಾರರಿಗೆ ಸಮಾಲೋಚನೆಗಾಗಿ ಆಯ್ಕೆ ಮಾಡಿಕೊಳ್ಳಲು ವೈದ್ಯಕೀಯ ತಜ್ಞರು ಹಾಗೂ ಸಾಮಾನ್ಯ ವೈದ್ಯರ ದಂಡನ್ನೇ ಒದಗಿಸುತ್ತಿದೆ.

ಹಲವು ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಪಡೆದಿರುವ ಸಾಮಾಜಿಕ ನಿಷೇಧಗಳು ಹಾಗೂ ಕಳಂಕಗಳನ್ನು ಖಂಡಿಸುವುದು ಈ ಔದ್ಯಮಿಕ  ಸಾಹಸದ ಹಿಂದಿನ ಚಾಲಕ ಶಕ್ತಿಯಾಗಿದೆಯೆಂದು ಸುಮಾರು ಒಂದು ವರ್ಷದ ಹಿಂದೆ ಸ್ಥಾಪಿಸಲಾಗಿರುವ ಈ ಸಂಸ್ಥೆಯ ವ್ಯವಹಾರಾಭಿವೃದ್ದಿ ಮುಖ್ಯಸ್ಥ ೨೩ರ ಹರೆಯದ ವೈಭವ್ ಸಿಂಗ್ ಹೇಳುತ್ತಾರೆ. ಮನೆಯಿಂದಲಾಗಲಿ, ಅನುಕೂಲವಾದ ಇತರ ಸ್ಥಳದಿಂದಾಗಲಿ ಕಡಿಮೆ ಅವಧಿಯಲ್ಲಿ ತಜ್ಞ  ವೈದ್ಯರೊಂದಿಗೆ ಜನರ ಸಂಪರ್ಕ ಏರ್ಪಡಿಸುವುದಕ್ಕೆ ಸಹಾಯ ಮಾಡುವುದು ತಮ್ಮ ಗುರಿಯಾಗಿದೆ. ಭಾರತದಲ್ಲಿ ಅನೇಕರು ಚರ್ಮರೋಗ ಅಥವಾ ಮಾನಸಿಕ ಕಾಯಿಲೆಗಳ ಕುರಿತು ಮಾತನಾಡಲು ಹಿಂಜರಿಯುತ್ತಾರೆಂಬುದು ತಮಗೆ ತಿಳಿದಿದೆ. ಅದನ್ನು ನಿವಾರಿಸಲು ತಮ್ಮ ಸಂಸ್ಥೆ ಬಯಸುತ್ತಿದೆಯೆಂದು ಅವರು ತಿಳಿಸಿದ್ದಾರೆ. ‘ವಿಸಿಟ್’ ವೀಡಿಯೊ ಹಾಗೂ ಧ್ವನಿವಾಹಿನಿಗಳ  ಮೂಲಕ ಶುಲ್ಕ ಸಹಿತ ಸಮಾಲೋಚನೆಯ ಕೊಡುಗೆ ನೀಡುತ್ತದೆ ಹಾಗೂ ಪಠ್ಯ ಸಂಭಾಷಣೆಯ ಮೂಲಕ ೭ ದಿನಗಳ ಧರ್ಮಾರ್ಥ ತಪಾಸಣೆಯನ್ನು ಒದಗಿಸುತ್ತದೆ. ಇದಲ್ಲದೆ, ತನ್ನ ಬಳಿಯಿರುವ ಎಂಬಿಬಿಎಸ್ ವೈದ್ಯರ ಸಮೂಹದಿಂದ ತನ್ನ ‘ಕ್ಯೂ ಸೇವೆ" ಮೂಲಕ ನಿಶ್ಶುಲ್ಕವಾಗಿ ಪಠ್ಯ ವೈದ್ಯಕೀಯ ಸಮಾಲೋಚನೆಗೆ ಅವಕಾಶ ಕಲ್ಪಿಸುತ್ತದೆ. ಪ್ರಕೃತ, ದಿನಕ್ಕೆ ೮೦-೮೫ ಮಂದಿ ಈ ಸೇವೆ ಪಡೆಯುತ್ತಿದ್ದಾರೆ. ವೆಬ್ ಹಾಗೂ ಮೊಬೈಲ್‌ಗಳಲ್ಲಿ ಲಭಿಸುವ ಈ ಆನ್ ಲೈನ್  ವೇದಿಕೆಯು, ಮಾನಸಿಕ ತಜ್ಞರು, ಪಥ ತಜ್ಞರು, ಚರ್ಮರೋಗ ತಜ್ಞರು ಹಾಗೂ ಸಾಮಾನ್ಯ ವೈದ್ಯರು ಸೇರಿದಂತೆ ೫೦೦ ವೈದ್ಯರ ತಂಡವನ್ನು ಪಡೆದಿದೆ.
 

Read These Next

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...