ಕಠ್ಮಂಡು: ಏರ್‌ಲೈನ್ಸ್ ವಿಮಾನ ಪತನ ; ಹಲವು ಮಂದಿ ಸಾವು

Source: SOnews | By Staff Correspondent | Published on 15th January 2023, 3:17 PM | National News |

ಕಠ್ಮಂಡು: ಸುಮಾರು 72 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಯೇತಿ ಏರ್‌ಲೈನ್ಸ್ ವಿಮಾನ ರವಿವಾರ ಬೆಳಗ್ಗೆ ನೇಪಾಳದ ಪೋಖರಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ  ಪತನಗೊಂಡಿದೆ. ಹಲವರು ಸಾವನ್ನಪ್ಪಿರುವ ಶಂಕೆ  ಇದೆ ಎಂದು ವರದಿಯಾಗಿದೆ.

ವಿಮಾನವು  ಪತನಗೊಂಡ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಕಾರ್ಯಕರ್ತರು ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

 ಪೋಖರಾ-ಕಠ್ಮಂಡು ವಿಮಾನದಲ್ಲಿ 68 ಪ್ರಯಾಣಿಕರು ಹಾಗೂ  ನಾಲ್ವರು ಸಿಬ್ಬಂದಿ ಇದ್ದರು ಎಂದು ವರದಿಗಳು ತಿಳಿಸಿವೆ.

ಯೇತಿ ಏರ್‌ಲೈನ್ಸ್ ಸೇರಿರುವ  ಅವಳಿ-ಎಂಜಿನ್ ಎಟಿಆರ್ 72 ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪೋಖರಾಕ್ಕೆ ಹೊರಟಿತ್ತು. ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೆ ಸಮೀಪವಿದ್ದಾಗ  ಹಳೆಯ ವಿಮಾನ ನಿಲ್ದಾಣ ಹಾಗೂ  ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ವಿಮಾನ ಅಪಘಾತಕ್ಕೀಡಾಯಿತು ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ವಿಮಾನ ಟೇಕ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ಅಪಘಾತ ಸಂಭವಿಸಿದೆ. ಎರಡು ನಗರಗಳ ನಡುವಿನ ಹಾರಾಟದ ಸಮಯ 25 ನಿಮಿಷಗಳು.

ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ.

''ಎಷ್ಟು ಜನ ಬದುಕುಳಿದಿದ್ದಾರೆ ಎಂಬ  ಬಗ್ಗೆ ನಮಗೆ ಈಗ ತಿಳಿದಿಲ್ಲ. ಇದುವರೆಗೆ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ’’ ಎಂದು ಯೇತಿ ಏರ್‌ಲೈನ್ಸ್ ವಕ್ತಾರರು ಹೇಳಿದ್ದಾರೆ.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...