ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ದೋರಣೆ; ಜೋಗೇಶ್ವರಹಳ್ಳ ಗ್ರಾಮದ ರಸ್ತೆ ದುರಸ್ತಿ ಕಾರ್ಯಕ್ಕೆ ಬಡಿದ ಗ್ರಹಣ

Source: sonews | By Staff Correspondent | Published on 27th February 2020, 6:32 PM | Coastal News | Don't Miss |

•    ರಸ್ತೆ ಮೇಲೆ ಓಡಾಡಲು ಹೈರಾಣಾಗುತ್ತಿರುವ ಗ್ರಾಮಸ್ಥರು

ಮುಂಡಗೋಡ : ರಸ್ತೆಯ ತುಂಬೆಲ್ಲಾ ಹರಡಿಕೊಂಡಿರುವ ಖಡಿಕರಣ ಮಾಡಿದ ಕಲ್ಲುಗಳು ಹಾಗೂ ಕಚ್ಚಾ ರಸ್ತೆಯಿಂದ ಎದ್ದು ಹೊರಬಂದಿರುವ ಕಲ್ಲುಗಳು ಇಲ್ಲಿಯ ನಿವಾಸಿಗಳಿಗೆ ದ್ವೀಚಕ್ರ ಮುಖಾಂತರ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವುದು ದುಸ್ತರ ಪರಿಸ್ಥಿತಿ ನಿರ್ಮಾಣವಾಗಿದ್ದು ಕಣ್ಣಲ್ಲಿ ಕಣ್ಣು ಇಟ್ಟುಕೊಂಡು ವಾಹನ ಚಲಾಯಿಸುವ ಪರಿಸ್ಥಿತಿ ಸ್ವಲ್ಪ ಕಣ್ಣು ತಪ್ಪಿದ್ದರೆ ವಾಹನ ಸಮೇತ ಬಿಳುವುದು ಖಚಿತ ಎಂಬ ತಾಲೂಕಿನ ಜೋಗೀಶ್ವರಹಳ್ಳದ ಗ್ರಾಮದ ಗೌಳಿ ಜನರ ಪರಿಸ್ಥಿತಿ. ಶೀಘ್ರದಲ್ಲಿ ಡಾಂಬರಿರಣ ರಸ್ತೆ ನಿರ್ಮಾಣ ಮಾಡುವುದು ಜರೂರ ಇದೆ ಹಳೆ ಕರಿನಕೊಪ್ಪ ಗ್ರಾಮದಿಂದ ಸುಮಾರು 3 ಕಿ.ಮಿ ದೂರವಿರುವ ಜೋಗೇಶ್ವರಹಳ್ಳದ ಗ್ರಾಮಕ್ಕೆ ಹೋಗುವ ರಸ್ತೆಗೆ ದ್ವೀಚಕ್ರ ವಾಹನ ಚಲಾಯಿಸುಕೊಂಡು  ಗ್ರಾಮ ಮುಟ್ಟುವುದು ಯುದ್ದದಲ್ಲಿ ಗೆದ್ದು ಬಂದಂತೆ, ಈ  ದುಃಸ್ಥಿತಿ ಜೋಗೇಶ್ವರ ಹಳ್ಳ ಗೌಳಿದಡ್ಡಿಯ ನಿವಾಸಿಗಳು ಸಹಿಸಿಕೊಂಡು ಬರುತ್ತಿದ್ದಾರೆ. ತಮಗೆ ಹೀಗಾಗಿದೆ ಎಂದು ಇವರು ಕೋಪ ತಾಪ ಪ್ರದರ್ಶಿಸುವರಲ್ಲ ಹಿಡಿಶಾಪ ಹಾಕುವರಲ್ಲ ಈ ಗೌಳಿ ಜನಾಂಗ ತುಂಬಾ ಸಂಭಾವಿತರು ಇರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಪರಿಸ್ಥಿತಿ ಹೀಗೆ ಮುಂದು ವರೆದಿದೆ. 

ಸೂರ್ಯ ಇರುವಾಗಲೇ ದ್ವೀಚಕ್ರ ವಾಹನ ಚಾಲಕರಿಗೆ ಈ ಪರಿಸ್ಥಿತಿ ಯಾದರೆ ಇನ್ನೂ ರಾತ್ರಿ ವೇಳೆಯಲ್ಲಿ ಚಲಾಯಿಸುವುದು ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಈ ಕುರಿತು ಸಂಬಂದಿಸಿದ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಕಾರ್ಯಗತ ಮಾಡಲು ಮನಸ್ಸು ಮಾಡುತ್ತಿಲ್ಲ ಎಂಬುದು ಇಲ್ಲಿಯ ಜನರು ಕೊರಗು. ಸಂಬಂದಿಸಿದ ಅಧಿಕಾರಿಗಳಾದರೂ ಇತ್ತ ಗಮನ ಕೊಡಬೇಕಲ್ಲವೇ ಎನ್ನುತ್ತಾರೆ ಇಲ್ಲಿ ಜನರು.

ಇಲ್ಲಿ ಸುಮಾರು 20 ಮನೆಗಳಿದ್ದು ಸುಮಾರು 100 ಕ್ಕಿಂತ ಅಧಿಕ ಜನರು ವಾಸಿಸುತ್ತಾರೆ. ಗ್ರಾಮದ ತುಂಬೆಲ್ಲಾ ಕಚ್ಚಾ ರಸ್ತೆಗಳದೆ ಕಾರುಬಾರು ನೋಡುತ್ತೇನೆ ಎಂದರು ಸಹಿತ ಡಾಂಬರಿಕರಣ ರಸ್ತೆ ಇಲ್ಲವೆ ಕಾಂಕ್ರೀಟ್ ಕರಣ ರಸ್ತೆ ಕಾಣಸಿಗದು. ಇಲ್ಲಿಯವರ ಮೂಲಕಸಬು ಹೈನುಗಾರಿಕೆ ಹಾಗೂ ಕೃಷಿ. ಇಲ್ಲಿಯ ಜನರು ಪೇಟೆಗೆ ಹಾಲು ಮಾರಲು ಬರುವವರ ಸಂಖ್ಯೆ ಅಧಿಕವಾಗಿದೆ. ದಿನಾಲು ದ್ವೀಚಕ್ರ ವಾಹನಗಳಲ್ಲಿ ಹಾಲಿನ ಕ್ಯಾನುಗಳನ್ನು ಕಟ್ಟಿಕೊಂಡು ಹೋಗುವುದು ಹಾಗೂ ಬರುವುದು ಮಾಡಿ ತಮ್ಮ ಉಪಜೀವನ ಸಾಗಿಸುತ್ತಾರೆ. ಆದರೆ ಇಲ್ಲಿ ಹಾಲು ಮಾರಾಟಾ ಮಾಡಿ ಬಂದಂತಹ ಹಣದಿಂದ ತಮ್ಮ ಉಪಜೀವನ ಸಾಗಿಸಲು ದಿನನಿತ್ಯದ ವಸ್ತುಗಳಿಗೆ ಖರ್ಚುಮಾಡುವುದಕ್ಕಿಂತ ಹೆಚ್ಚಾಗಿ ದ್ವೀಚಕ್ರವಾಹನಗಳಿಂದ ಬಿದ್ದು ಪೆಟ್ಟಾಗಿ ಆಸ್ಪತ್ರೆಗೆ ದುಡ್ಡು ಹಾಕುವುದು ಜಾಸ್ತಿ ಎಂಬ ಮಾತು ಕೇಳಿಬರುತ್ತಿದೆ. ಇಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಕರು ಈ ರಸ್ತೆಯ ದುಃಸ್ಥಿತಿಯಿಂದ ತಾವು ಸಹಿತ ಬಿದ್ದ ಅನುಭವನ್ನು ಹೇಳಿಕೊಳ್ಳುತ್ತಾರೆ.

ಸೂರ್ಯ ಇರುವಾಗಲೇ ದ್ವೀಚಕ್ರ ವಾಹನ ಚಾಲಕರಿಗೆ ಈ ಪರಿಸ್ಥಿತಿ ಯಾದರೆ ಇನ್ನೂ ರಾತ್ರಿ ವೇಳೆಯಲ್ಲಿ ಚಲಾಯಿಸುವುದು ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಈ ಕುರಿತು ಸಂಬಂದಿಸಿದ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಕಾರ್ಯಗತ ಮಾಡಲು ಮನಸ್ಸು ಮಾಡುತ್ತಿಲ್ಲ ಎಂಬುದು ಇಲ್ಲಿಯ ಜನರು ಕೊರಗು.

3 ಕಿಮಿ ರಸ್ತೆಯಲ್ಲಿ ಹಳೆಕರಗಿನಕೊಪ್ಪ ಗ್ರಾಮದಿಂದ ಜೋಗೇಶ್ವರ ಹಳ್ಳದ ಗ್ರಾಮಕ್ಕೆ ಹೋಗುವ ರಸ್ತೆಗೆ 1, 1.50 ಕಿಮಿ ಡಾಂಬರಿಕರಣ ಮಾಡಿದ್ದು ಸುಮಾರು 3-4ವರ್ಷಗಳ ಹಿಂದೆ ಮಾಡಿರಬಹುದು ಎಂದು ಅಸ್ಪಷ್ಟವಾಗಿ ಹೇಳುತ್ತಾರೆ. ಹೇಳಲಿಲ್ಲ. ಡಾಂಬರಿಕರಣ ಅಲ್ಲಲ್ಲಿಕಿತ್ತು ಕೊಂಡು ಹೋಗಿದೆ ಇನ್ನೂ ಅರ್ಧ ಹಾದಿ ಮಾತ್ರ ಆದೇವರಿಗೆ ಪ್ರೀತಿ ಅಂದಂತಾಗಿದೆ. ರಸ್ತೆಗೆ ಖಡಿಕರಣ ಮಾಡಿದ್ದು ಖಡಿಕರಣದ ಕಲ್ಲುಗಳು ಹೊರಗೆ ಬಂದು ರಸ್ತೆ ದುಸ್ತರ ಎತ್ತಿ ತೋರಿಸುತ್ತದೆ. ಇನ್ನೂ ಸ್ವಲ್ಪ ದೂರ ಕ್ರಮಮಿಸಿದರೆ ಬೆಣಚು ಕಲ್ಲುಗಳು ರಸ್ತೆಯ ತುಂಬೆಲ್ಲಾ ಹರಡಿಕೊಂಡಿದ್ದು ಕಾಣ ಸಿಗುತ್ತದೆ. ಇಂತ ರಸ್ತೆಯಲ್ಲಿ ಬೈಕ್ ಓಡಿಸುವುದು ಹೇಗೆ ಎಂಬುದು ಊಹಿಸಿಕೊಳ್ಳುವುದೆ ಕಷ್ಟ. ಇಲ್ಲಿ ದ್ವೀಚಕ್ರವಾಹನಗಳು 10-20 ಕಿಮಿ ವೇಗದಲ್ಲಿ ಚಲಾಯಿಸಿದರೆ ಬಚಾವ ಜಾಸ್ತಿ ಏಕ್ಸೇಲೇಟರ ನೀಡಿದರೆ ಬೈಕ್ ದಿಂದ ಬಿದ್ದು ಮೈಕೈ ಗಾಯಮಾಡಿಕೊಳ್ಳುವುದು ಗ್ಯಾರಂಟಿ.

ಇನ್ನಾದರೂ ಸಂಬಂದ ಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಈ ಗ್ರಾಮದ ಒಳಗಡೆ ಸೇರಿದಂತೆ ಮುಂಡಗೋಡದಿಂದ ಜೋಗೇಶ್ವರಹಳ್ಳ ಗ್ರಾಮಕ್ಕೆ ಬರುವ ರಸ್ತೆಗೆ ಡಾಂಬರಿಕರಣ ರಸ್ತೆ ಇಲ್ಲವೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಜೋಗೇಶ್ವರ ಹಳ್ಳದ ಗ್ರಾಮದ ಜನತೆಯ ಬಹುದಿನದ ಕನಸು ನನಸು ಮಾಡುವವರೆ ಕಾದು ನೋಡಬೇಕಾಗಿದೆ 

ಚಿತ್ರ ವರದಿ  : ನಝೀರುದ್ದಿನ ಎ. ತಾಡಪತ್ರಿ ಮುಂಡಗೋಡ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...