ರಸ್ತೆ ಮೇಲೆ ಅನಾವಶ್ಯಕ ತಿರುಗಾಟ; ಓರ್ವನ ವಿರುದ್ಧ ಪ್ರಕರಣ ದಾಖಲು

Source: sonews | By Staff Correspondent | Published on 28th March 2020, 2:40 PM | Coastal News | Don't Miss |

ಭಟ್ಕಳ: ಭಟ್ಕಳದಲ್ಲಿ ಮೆಡಿಕಲ್ ಎಮೆರ್ಜೆನ್ಸಿ ಘೋಷಣೆಯಾದ ಬಳಿಕೆ ರಸ್ತೆಯ ಮೇಲೆ ಓಡಾಡುವುಕ್ಕೆ ನಿರ್ಭಂದಿಸಿದ್ದರೂ ಸಹ ಅದನ್ನೆ ಗಣನೆಗೆ ತೆಗೆದುಕೊಳ್ಳದೆ ನಿರ್ಭೀತಿಯಿಂದ ಓಡಾಡುತ್ತಿದ್ದ ವ್ಯಕ್ತಿಯೊಬ್ಬರ ವಿರುದ್ಧ ನಗರ ಠಾಣೆ ಪೊಲೀಸರು ಪ್ರಕರಣವನ್ನುದಾಖಲಿಸಿಕೊಂಡಿದ್ದಾರೆ.

ಇಲ್ಲಿನ ತಖಿಯಾ ಸ್ಟ್ರೀಟ್  ನಿವಾಸಿ  ಕೆ.ಎಮ್ ಶಾಝೀರ್ (39 ) ಎಂಬಾತನ ಮೇಲೆ ಪೊಲೀಸರು ಪ್ರಕರಣ ‌ದಾಖಲಿಸಿದ್ದಾರೆ. ಭಟ್ಕಳದಲ್ಲಿ ಕೊರೋನಾ ಸೋಂಕಿತ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಜೊತೆಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹೆಲ್ತ್ ಎಮರ್ಜೆನ್ಸಿ ಘೋಷಣೆಯಾಗಿತ್ತು. ಇದಾದ ನಂತರ ಯಾರು ಮನೆಯಿಂದ ಹೊರಬರದಂತೆ, ಅನವಶ್ಯಕವಾಗಿ ಓಡಾಡದಂತೆ ಸೂಚನೆ‌ ನೀಡಲಾಗಿತ್ತು.

ಆದರೆ ಶಾಝೀರ್ ಅನವಶ್ಯಕವಾಗಿ ಬೈಕ್ ‌ನಲ್ಲಿ ತಿರುಗಾಟ ನಡೆಸುತ್ತಿದ್ದು ಈ ಬಗ್ಗೆ ಪೊಲೀಸರು ಎರಡು ಬಾರಿ ವಾರ್ನಿಂಗ್ ಸಹ ಮಾಡಿದ್ದರು. ಆದರೂ ಕೂಡ ಮಾಸ್ಕ್ ಧರಿಸದೇ ‌ತಿರುಗಾಡ ನಡೆಸುವಾಗ ಪೊಲೀಸರು ತಡೆದು ಪ್ರಶ್ನಿಸಿದಾಗ ಪೊಲೀಸರಿಗೆ ಬೈದಿದ್ದಾನೆ ಎನ್ನಲಾಗಿದೆ.

ತನ್ನ ಮೇಲೆ ವಿನಾಕಾರಣ ಲಾಠಿಯಿಂದ ಹೊಡೆದಿದ್ದಾರೆಂದು ಮೇಲಾಧಿಕಾರಿಗಳಿಗೆ ದೂರು ಕೊಡುತ್ತೇನೆ ಎಂದು ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಆರೋಪಿತನ ವಿರುದ್ದ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 52/2020, ಕಲಂ 188, 270, 504, 506 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 

Read These Next

ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ...

ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ...