ಪಕ್ಷದಲ್ಲಿ ನಾಯಕರ ಸೈದ್ಧಾಂತಿಕ ಬದ್ಧತೆ ಪರಿಶೀಲನೆ ಅಗತ್ಯ: ಎಂ.ವೀರಪ್ಪ ಮೊಯಿಲಿ

Source: PTI | By MV Bhatkal | Published on 10th June 2021, 9:16 PM | National News | Don't Miss |

ನವದೆಹಲಿ: ‘ಪಕ್ಷದಲ್ಲಿ ಮುಖಂಡರಿಗೆ ಪ್ರಮುಖ ಹುದ್ದೆ, ಜವಾಬ್ದಾರಿಯನ್ನು ನೀಡುವ ವೇಳೆ ಪಕ್ಷದ ತತ್ವ–ಸಿದ್ಧಾಂತದ ಬಗ್ಗೆ ಅವರಲ್ಲಿನ ಬದ್ಧತೆಯನ್ನು ಪರಿಶೀಲಿಸಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ವೀರಪ್ಪ ಮೊಯಿಲಿ ಗುರುವಾರ ಹೇಳಿದ್ದಾರೆ.
ಜಿತಿನ್ ಪ್ರಸಾದ್ ಅವರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಮರುದಿನವೇ ಮೊಯಿಲಿ ಅವರಿಂದ ಈ ಅಭಿಪ್ರಾಯ ಹೊರಬಿದ್ದಿದೆ.
ಕಾಂಗ್ರೆಸ್‌ ಪಕ್ಷಕ್ಕೆ ‘ದೊಡ್ಡ ಶಸ್ತ್ರಚಿಕಿತ್ಸೆ’ಯ ಅಗತ್ಯವಿದೆ. ಕೇವಲ ವಂಶಪಾರಂಪರ್ಯವನ್ನು ಪರಿಗಣಿಸಿ ಮುಖಂಡರಿಗೆ ಮಣೆ ಹಾಕುವುದನ್ನು ನಿಲ್ಲಿಸಬೇಕು’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಜಿತಿನ್‌ ಪ್ರಸಾದ್‌ ನೇತೃತ್ವದಲ್ಲಿಯೇ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಯಿತು. ಪಕ್ಷಕ್ಕೆ ಒಂದೇ ಒಂದು ಸ್ಥಾನ ಸಿಗಲಿಲ್ಲ.  ಅವರು ಅಸಮರ್ಥರು ಎಂಬುದನ್ನು ಇದು ಸಾಬೀತುಪಡಿಸಿತ್ತು’ ಎಂದು ಹೇಳಿದ್ದಾರೆ.
ಜಿತಿನ್‌ ಪ್ರಸಾದ್‌ ಅವರಿಗೆ ಪಕ್ಷಕ್ಕಿಂತ ವೈಯಕ್ತಿಕ ಮಹತ್ವಾಕಾಂಕ್ಷೆಯೇ ಮುಖ್ಯವಾಗಿತ್ತು. ಪಕ್ಷದ ತತ್ವ–ಸಿದ್ಧಾಂತದ ಬಗೆಗಿನ ಇವರ ಬದ್ಧತೆ ಬಗ್ಗೆ ಮೊದಲಿನಿಂದಲೂ ಸಂಶಯ ಇತ್ತು’ ಎಂದೂ ಆರೋಪಿಸಿದರು.
ಅರ್ಹತೆ ಇಲ್ಲದವರನ್ನು ನಾಯಕರನ್ನಾಗಿ ಮಾಡಬಾರದು. ಪಕ್ಷದಲ್ಲಿರುವ ಮುಖಂಡರ ಕುರಿತು ವರಿಷ್ಠರು ಸಮರ್ಪಕ ಮೌಲ್ಯಮಾಪನ ಮಾಡುವುದು ಅಗತ್ಯ. ಪಕ್ಷದ ಮರುಸಂಘಟನೆಯಾಗಬೇಕು. ಪ್ರಮುಖ ಹುದ್ದೆಗಳಲ್ಲಿ ಸಮರ್ಥರನ್ನೇ ನೇಮಕ ಮಾಡಬೇಕು. ಪಕ್ಷವು ಆತ್ಮಾವಲೋಕನ ನಡೆಸಬೇಕು. ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಒಂದು ಪಾಠವಾಗಬೇಕು’ ’ ಎಂದೂ ಮೊಯಿಲಿ ಪ್ರತಿಪಾದಿಸಿದರು

 

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...

ಕಾರವಾರ : ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ

ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಜಿಲ್ಲೆಯಾದ್ಯಂತ ...

ಭಟ್ಕಳ: ಶ್ರೀವಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ನಾಯ್ಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ

ಶ್ರೀವಲಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪವಿತ್ರಾ ಜಯಕರ ನಾಯ್ಕ ದಿಶಾ ಭಾರತ ಸಂಸ್ಥೆ ಹಾಗೂ ಈಸ್ಟ್ ವೆಸ್ಟ್ ...