ಕಾರವಾರ ನೌಕಾನೆಲೆಗೆ ನೌಕಾಪಡೆ ಮುಖ್ಯಸ್ಥರ ಭೇಟಿ.

Source: SO News | By Laxmi Tanaya | Published on 22nd October 2020, 7:51 PM | National News | Don't Miss |

ಕಾರವಾರ : ಏಷ್ಯಾದ ಅತಿ ದೊಡ್ಡ  ಕಾರವಾರ ಐಎನ್ಎಸ್ ನೌಕಾನೆಲೆಗೆ ನೌಕಾದಳ ಮುಖ್ಯಸ್ಥ ಆಡ್ಮಿರಲ್‌ ಕರಮ್ ಬೀರ್ ಸಿಂಗ್ ಭೇಟಿ ನೀಡಿದರು.

ಐಎನ್ಎಸ್ ಕದಂಬ ನೌಕಾನೆಲೆ ಪ್ರದೇಶ ಹಾಗೂ  ಶಿಪ್ ಲಿಫ್ಟ್ ಯಾರ್ಡ್ ಗಳಿಗೆ ಭೇಟಿ ನೀಡಿದ ಅವರು, ಎರಡನೇ ಹಂತದ ಕಾಮಗಾರಿಗಳು ಹಾಗೂ ನೌಕಾದಳದ ಕಾರ್ಯ ಚಟುವಟಿಕೆಗಳ ಬಗ್ಗೆ  ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 

 ಕೋವಿಡ್ ಸಮಯದಲ್ಲಿ ನೌಕಾದಳದ ಶಿಪ್‌ಗಳು ಹಾಗು ಸಬ್‌ಮರೀನ್‌ಗಳು ತಾಂತ್ರಿಕ ನೆರವು ಹಾಗೂ ರಿಪೇರಿಯಾಗಿರುವ ಬಗ್ಗೆ ತಿಳಿದು ಕೊಂಡರು. ನೌಕಾನೆಲೆಯ ಅಗತ್ಯಗಳನ್ನು ಹಾಗೂ ಮುಂದೆ ಶತ್ರು ರಾಷ್ಟ್ರಗಳಿಂದ ರಕ್ಷಣೆ ಪಡೆಯಲು ನೆಲೆಯಲ್ಲಿ ಆಗಬೇಕಾದ ಕೆಲಸಗಳ ವಿವರ ಪಡೆದರು. 

ನಂತರ ಐಎನ್‌ಎಸ್‌ ಪತಂಜಲಿ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆದರು. ಉತ್ತರ ಕನ್ನಡದಲ್ಲಿ ಕೋವಿಡ್ ಪೀಡಿತ ಸಾರ್ವಜನಿಕರಿಗೆ ಮೊಟ್ಟ ಮೊದಲ ಬಾರಿಗೆ ದೇಶದ ರಕ್ಷಣಾ ಪಡೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಗ್ಗೆ ಕೋವಿಡ್ ಪೀಡಿತರು ಗುಣಮುಖರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ನೇವಿ ಸಿಬ್ಬಂದಿಗಳು ಕೂಡ ಕೋವಿಡ್ ನಿಂದ ಜಾಗೃತರಾಗುವಂತೆ ಎಚ್ಚರಿಕೆ ನೀಡಿದರು.

Read These Next

ರೂಪಾಯಿ 50 ಸಾವಿರ ಮೌಲ್ಯದ ವಿಮೆ. ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿಗೆ ನವೆಂಬರ್ 29 ಕೊನೆಯ ದಿನ.

ಕಾರವಾರ : ಉಡುಪಿಯ‌ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ ಜಿ. ಶಂಕರ್ ರವರು ಮಣಿಪಾಲ ಸಿಗ್ನಾ ಹೆಲ್ತ್ ಗ್ರೂಪ್ ...

ಬೆಳೆವಿಮೆ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತನ್ನಿ: ಸಚಿವ ಹೆಬ್ಬಾರ

ಕಾರವಾರ: ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು, ಬೆಳೆವಿಮೆ ಪಡೆದ ರೈತ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ...

ಸ್ಮಾರ್ಟ್ ಸಿಟಿ ಕಾಮಗಾರಿ ಚುರುಕುಗೊಳಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಸೂಚನೆ

ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಚುರುಕು ಮೂಡಿಸಿ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ...

ಹುಬ್ಬಳ್ಳಿ ನಗರದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ‌ 6 ಸಾವಿರ ಕೋಟಿ ಬಂಡವಾಳ ಹೂಡಿಕೆ : ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮ್ಮೇಳನದಲ್ಲಿ ಆದ ಒಡಂಬಡಿಕೆಯಂತೆ ಪ್ರತಿಷ್ಠಿತ ಕಂಪನಿಗಳು ...