ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಾಗಾರ

Source: sonews | By Staff Correspondent | Published on 13th November 2019, 5:13 PM | Coastal News |

ಕಾರವಾರ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಬ್ಲೂಮ್‍ಬರ್ಗ ಇನಿಷಿಯೇಟಿವ್ ಯೋಜನೆಯ ವತಿಯಿಂದ ಎನ್.ಎನ್.ಎಸ್, ಎನ್.ವ್ಹಾಯ್.ಕೆ, ರೆಡ್‍ಕ್ರಾಸ್, ರೋಟರಿ ಕ್ಲಬ್, ಆಝಾದ್ ಕ್ಲಬ್ ಸಂಸ್ಥೆಯ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ನ.13 ರಂದು ಕಾರವಾರದ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜರುಗಿತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರಾದ   ವಿ.ಎಮ್ ಹೆಗಡೆ, ಉದ್ಘಾಟರಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ರಮೇಶ ಪತ್ರೇಕರ್, ಮುಖ್ಯ ಅತಿಥಿಗಳಾಗಿ ಆಝಾದ್ ಕ್ಲಬ್ ಅಧ್ಯಕ್ಷರಾದ ನಜೀರ ಅಹಮ್ಮದ್ ಶೇಖ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಚೇತನ ಬಿ. ಪಾಟೀಲ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಲಹೆಗಾರರಾದ ಪ್ರೇಮ್‍ಕುಮಾರ್ ನಾಯ್ಕ, ಮಹಾಂತೇಶ ಬಿ. ಉಳ್ಳಾಗಡ್ಡಿ ಮತ್ತಿತರರು ಕಾರ್ಯಾಗಾರದಲ್ಲಿ ಹಾಜರಿದ್ದರು.                
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...