ಮೂಡುಬಿದಿರೆ:  ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್: ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ

Source: S O News | Published on 5th March 2022, 5:37 PM | Sports News | Coastal News | Don't Miss |

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್‍ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಎರಡನೇ ದಿನದಾಟದಲ್ಲಿ ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ ಸಾಧಿಸಿದೆ.

ಪುರುಷರ ವಿಭಾಗದಲ್ಲಿ ಕೆನರಾ ಬ್ಯಾಂಕ್ ತಂಡವು ರಾಜಸ್ಥಾನ ತಂಡವನ್ನು 35-20, 35-09 ನೇರ ಸೆಟ್‍ಗಳ ಅಂತರದಲ್ಲಿ ಹಾಗೂ ಒಡಿಶಾ ತಂಡವನ್ನು 35-26, 35-16 ಅಂತರದಲ್ಲಿ ಮಣ ಸಿತು. ಭಾರತೀಯ ರೈಲ್ವೇ ತಂಡವು ತೆಲಂಗಾಣ ತಂಡವನ್ನು 35-24, 35-19 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿತು. ಕರ್ನಾಟಕ ತಂಡವು ಚತ್ತೀಸ್‍ಗಢ ತಂಡವನ್ನು 35-18, 35-20 ಅಂತರದಲ್ಲಿ ಮಣ ಸಿತು

ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡವು ತೆಲಂಗಾಣ ತಂಡವನ್ನು 35-06, 35-18 ಅಂತರದಿಂದ ಸೋಲಿಸಿತು. ಈ ಮೂಲಕ ಕರ್ನಾಟಕದ ಮಹಿಳಾ ಹಾಗೂ ಪುರುಷರ ತಂಡ ಅರ್ಹತೆಯ ಜಯ ದಾಖಲಿಸಿಕೊಂಡಿದೆ. ನಾಳೆ ಸಂಜೆ ಕ್ವಾಟರ್ ಫೈನಲ್ಸ್ ಪಂದ್ಯಾಟ ನಡೆಯಲಿದೆ.

ಇತರ ಫಲಿತಾಂಶ:
ಪುರುಷರ ವಿಭಾಗ:
ಆಂಧ್ರ ಪ್ರದೇಶ ತಂಡ ಮುಂಬೈ ತಂಡವನ್ನು 35-15, 35-20, ಹರಿಯಾಣ ತಂಡ ತ್ರಿಪುರಾ ತಂಡವನ್ನು 35-19, 35-18 ಅಂತರದಲ್ಲಿ, ರಾಜಸ್ಥಾನ ತಂಡ ಪಶ್ಚಿಮ ಬಂಗಾಳ ತಂಡವನ್ನು 30-35, 36-36 ಅಂತರದಲ್ಲಿ, ಕೇರಳ ತಂಡವು ಚಂಡೀಗಢ ತಂಡವನ್ನು 35-15, 35-17 ಅಂತರದಲ್ಲಿ, ಡಿಪಾರ್ಟ್‍ಮೆಂಟ್ ಆಫ್ ಅಟೋಮಿಕ್ ಎನರ್ಜಿ ತಂಡವು ಲಡಾಕ್ ತಂಡವನ್ನು 35-08, 35-22 ಅಂತರದಲ್ಲಿ, ಬಿಹಾರ ತಂಡವು ಎನ್‍ಸಿಆರ್ ತಂಡವು 35-29, 35-24 ಅಂತರದಿಂದ, ಹರಿಯಾಣ ತಂಡವು ಡಿಪಾರ್ಟ್‍ಮೆಂಟ್ ಆಫ್ ಅಟೋಮಿಕ್ ಎನರ್ಜಿ ತಂಡವನ್ನು 35-26, 35-30 ಅಂತರದಿಂದ, ಪಶ್ಚಿಮ ಬಂಗಾಳ ತಂಡವು ತ್ರಿಪುರಾ ತಂಡವನ್ನು 35-23, 35-26 ಅಂತರದಿಂದ, ಕೇರಳ ತಂಡವು ಮಧ್ಯಪ್ರದೇಶ ತಂಡವನ್ನು 35-07, 35-09 ಅಂತರದಿಂದ, ಜಮ್ಮು ಕಾಶ್ಮೀರ ತಂಡವು ಉತ್ತರ ಪ್ರದೇಶ ತಂಡವನ್ನು 35-28, 35-24 ಅಂತರದಿಂದ, ಹಿಮಾಚಲ ಪ್ರದೇಶ ತಂಡವು ಗುಜರಾತ್ ತಂಡವನ್ನು 36-34, 35-26 ಅಂತರದಿಂದ, ಚಂಢೀಗಡ ತಂಡವು ಮಧ್ಯಪ್ರದೇಶ ತಂಡವನ್ನು 35-22, 35-28 ಅಂತರದಿಂದ, ಪುದುಚೆರಿ ತಂಡವು ಗುಜರಾತ್ ತಂಡವನ್ನು 35-14, 35-19 ಅಂತರದಿಂದ, ಹರಿಯಾಣ ತಂಡವು ಜಾರ್ಖಂಡ್ ತಂಡವನ್ನು 35-17, 35-21 ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದವು.

ಮಹಿಳಾ ವಿಭಾಗ
ಜಾರ್ಖಂಡ್ ತಂಡವು ತ್ರಿಪುರಾ ತಂಡವನ್ನು 35-06, 35-18 ಅಂತರದಿಂದ, ಕೇರಳ ತಂಡವು ಪಂಜಾಬ್ ತಂಡವನ್ನು 35-21, 35-18 ಅಂತರದಿಂದ, ಪಶ್ಚಿಮ ಬಂಗಾಳ ತಂಡವು ಹರಿಯಾಣ ತಂಡವನ್ನು 35-23, 35-17 ಅಂತರದಿಂದ, ಮುಂಬೈ ತಂಡವು ದೆಹಲಿ ತಂಡವನ್ನು 35-30, 35-31 ಅಂತರದಿಂದ, ತಮಿಳುನಾಡು ತಂಡವು ಬಿಹಾರ ತಂಡವನ್ನು 35-29, 35-20 ಅಂತರದಲ್ಲಿ ಮಣ ಸಿತು.

Read These Next

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ರಾಜ್ಯದ ಯುವ ಜನತೆಗೆ ಉದ್ಯೋಗ ನೀಡಲು ಸ್ಕಿಲ್ ಕನೆಕ್ಟ್ ಪೋರ್ಟಲ್ : ಸಚಿವ ಡಾ.ಅಶ್ವಥ್ ನಾರಾಯಣ್

ಉಡುಪಿ : ರಾಜ್ಯದ ಯುವಜನತೆಗೆ ಅವರ ಕನಸಿನ ಉದ್ಯೋಗ ಪಡೆಯಲು ಸಹಕಾರಿಯಾಗುವಂತೆ ಎಲ್ಲಾ ಅಗತ್ಯ ಮಾಹಿತಿ ಹಾಗೂ ನೆರವು ನೀಡುವ ಸ್ಕಿಲ್ ...

ಉಡುಪಿಯಲ್ಲಿ ನಿರಂತರ ವರ್ಷಧಾರೆ‌‌ : ನಾಳೆ (ಜುಲೈ 1 ) ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ.

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆ, ಶುಕ್ರವಾರ (ಜುಲೈ 1 ) ಜಿಲ್ಲೆಯ ಎಲ್ಲಾ ಶಾಲೆ, ...

ಭಾರಿ ಮಳೆ ಹಿನ್ನಲೆ : ನಾಳೆ (ಜುಲೈ 1ರಂದು ) ದಕ್ಷಿಣ ಕನ್ನಡದ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸಂಜೆಯಿಂದ ಭಾರಿ ಮಳೆಯಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆ, ಶುಕ್ರವಾರ ...

ರಾಜ್ಯದ ಯುವ ಜನತೆಗೆ ಉದ್ಯೋಗ ನೀಡಲು ಸ್ಕಿಲ್ ಕನೆಕ್ಟ್ ಪೋರ್ಟಲ್ : ಸಚಿವ ಡಾ.ಅಶ್ವಥ್ ನಾರಾಯಣ್

ಉಡುಪಿ : ರಾಜ್ಯದ ಯುವಜನತೆಗೆ ಅವರ ಕನಸಿನ ಉದ್ಯೋಗ ಪಡೆಯಲು ಸಹಕಾರಿಯಾಗುವಂತೆ ಎಲ್ಲಾ ಅಗತ್ಯ ಮಾಹಿತಿ ಹಾಗೂ ನೆರವು ನೀಡುವ ಸ್ಕಿಲ್ ...

ಮಹಾ ಬಿಕ್ಕಟ್ಟು: ಮಾತುಕತೆಗೆ ಮುಂಬೈಗೆ ಮರಳಿ ಬನ್ನಿ; ಬಂಡುಕೋರ ಶಾಸಕರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರ

ಮಹಾರಾಷ್ಟ್ರದ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆಯವರು ಮಂಗಳವಾರ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡುಕೋರ ಶಿವಸೇನೆ ಶಾಸಕರಿಗೆ ...

ಅಗ್ನಿವೀರ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆಯು ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರ ವಾಯು ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ...

ಕಾರ್ಮಿಕರ ಬದುಕು ಹಸನುಗೊಳಿಸಲು ಅನೇಕ ಕಾರ್ಯಕ್ರಮಗಳು : ಸಚಿವ ಶಿವರಾಮ್ ಹೆಬ್ಬಾರ್

ಶಿವಮೊಗ್ಗ : ವಿವಿಧ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಜೀವನದಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಕಾರ್ಮಿಕ ಇಲಾಖೆ ...

ಕಾರ್ಮಿಕರ ವಿಸ್ತೃತ ವಸತಿ ಸಮುಚ್ಚಯ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ : ಅರಬೈಲು ಶಿವರಾಮ್ ಹೆಬ್ಬಾರ್

ಶಿವಮೊಗ್ಗ : ಶಿವಮೊಗ್ಗ ಸಮೀಪದ ಸಿದ್ಲೀಪುರ ಗ್ರಾಮದಲ್ಲಿ 10 ಎಕರೆ ಜಾಗದಲ್ಲಿ 10ಕೋಟಿ ರೂ.ಗಳ ವೆಚ್ಚದಲ್ಲಿ 500ಮಂದಿ ಕಟ್ಟಡ ಮತ್ತು ಇತರೆ ...