ಮಂಗಳೂರು ವಿಘ್ನೇಶ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ನರೇಶ ಶೆಣೈ ವಿಚಾರಣೆ ನಡೆಸಿ. ಕಾಂಗ್ರೆಸ

Source: So News | Published on 26th November 2020, 12:56 AM | Coastal News |

ಮಂಗಳೂರು :  ಯುವಕ ವಿಘ್ನೇಶ್ ನಾಯಕ್ ಆತ್ಮಹತ್ಯೆ ವಿಚಾರದಲ್ಲಿ‌ ಜನರಲ್ಲಿ ಗೊಂದಲವಿದೆ . ನರೇಶ್ ಶೆಣೈ ಅವರನ್ನ ವಿಚಾರಣೆಗೆ ಒಳಪಡಿಸಬೇಕು ಎಂದು  ಮಂಗಳೂರಿನಲ್ಲಿ ಯುಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ  ಹೇಳಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 
RTI ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಯಲ್ಲಿ ವಿಘ್ನೇಶ್ ಹೆಸರಿತ್ತು. ಹತ್ಯೆ ಬಳಸಿದ ಕ್ವಾಲಿಸ್ ಕಾರು ವಿಘ್ನೇಶ್ ಹೆಸರಲ್ಲಿತ್ತು. ಹತ್ಯೆ ಬಳಿಕ ವಿಘ್ನೇಶ್ ನಾಯಕ್ ನಾಪತ್ತೆಯಾಗಿದ್ದರು. ನರೇಶ್ ಶೆಣೈ ಸಂಸ್ಥೆಯಲ್ಲಿ ವಿಘ್ನೇಶ  ಸಿಬ್ಬಂದಿ ಆಗಿದ್ದರು. ನಮೋ ಬ್ರಿಗೇಡ್ ಮುಖ್ಯಸ್ಥನಾಗಿದ್ದ ನರೇಶ್ ಶೆಣೈ ವಿನಾಯಕ ಬಾಳಿಗಾ ಹತ್ಯೆಯ ಪ್ರಮುಖ ಆರೋಪಿಯೆಂದು ಆಪಾದಿಸಿದ್ದಾರೆ.

ಹತ್ಯೆ ಪ್ರಕರಣ ಸಂಬಂಧ ವಿಘ್ನೇಶ್ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಆತ್ಮಹತ್ಯೆ ಹಿಂದೆ ನರೇಶ್ ಶೆಣೈ ಕೈವಾಡದ ಬಗ್ಗೆ ಪ್ರಶ್ನೆ ಎದ್ದಿದೆ. ವಿನಾಯಕ ಬಾಳಿಗಾ ಸಹೋದರಿಗೂ ಬೆದರಿಕೆ ಇದೆ.

ವಿನಾಯಕ ಸಹೋದರಿ, ಉಳಿದ ಸಾಕ್ಷಿಗಳಿಗೆ ರಕ್ಷಣೆ ಬೇಕಿದೆ. 
ನರೇಶ್, ವಿಘ್ನೇಶ್ ಕಾಲ್ ಡಿಟೇಲ್ಸ್ ಬಹಿರಂಗ ಮಾಡಬೇಕು..

ಆತ್ಮಹತ್ಯೆಗೂ ನರೇಶ್ ಶೆಣೈಗೂ ಸಂಬಂಧ ಇದೆಯಾ ಅನ್ನೋದು ಬಹಿರಂಗವಾಗಲಿ.
ಆತ್ಮಹತ್ಯೆ ಕುರಿತು ಉನ್ನತ ತನಿಖೆಗೆ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು‌ ಮಂಗಳೂರಿನಲ್ಲಿ ಮಿಥುನ್ ರೈ ಹೇಳಿಕೆ ನೀಡಿದ್ದಾರೆ.

Read These Next

ಮುಂಡಗೋಡ: ಜಾನಪದ ರಾಜ್ಯ ಪ್ರಶಸ್ತಿ ವಿಜೇತ ಸಹದೇವಪ್ಪ ನಡಿಗೇರ ಗೆ ಗಂಗಾಮತ ಸಮಾಜದಿಂದ ಸನ್ಮಾನ

ಮುಂಡಗೋಡ ನಗರ ಗಂಗಾಮತಸ್ಥ ಕುಲಬಾಂದವರು  ಭಾನುವಾರ ರಾಜ್ಯಮಟ್ಟದ ಜಾನಪದ ಅಕಾಡಮಿ ಪ್ರಶಸ್ತಿ ಗೆ ಭಾಜನರಾದ ಇಂದೂರ ಗ್ರಾಮದ  ಸಹದೇವಪ್ಪ ...

ದೇಶದ ರಕ್ಷಣೆ, ಭದ್ರತೆ ಕಾಪಾಡುವುದು ರಕ್ಷಣಾ ಸಚಿವರ ಕರ್ತವ್ಯ : ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ್

ಮಂಗಳೂರು : ದೇಶದ ರಕ್ಷಣೆ ಉದ್ದೇಶದಿಂದ ಭದ್ರತಾ ವಿಷಯ ಗೌಪ್ಯವಾಗಿರಬೇಕು. ದೇಶದ ಹೀನ ಕೃತ್ಯದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ...

ಸಿಎಂ ತವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಶಾಸಕ ಯು ಟಿ ಖಾದರ್ ಆರೋಪ.

ಮಂಗಳೂರು : ಸಿ.ಎಂ ತವರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇಲ್ಲವಾ. ಜನ ಸಾಮಾನ್ಯರ ಮರಳು ಗಾಡಿಯನ್ನ ವಶ ಪಡಿಸಿಕೊಳ್ಳತ್ತಾರೆ. ಆದರೆ ...