ಮುರ್ಡೇಶ್ವರದ ನಿಮ್ರ ತಕ್ರೀಂ ಹಜೀಬ್ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 6 ನೇ ರ್ಯಾಂಕ್

Source: SO News | By Laxmi Tanaya | Published on 26th May 2022, 5:44 PM | Coastal News | Don't Miss |

ಭಟ್ಕಳ: ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ (ಕೆಯುಡಿ) 2021ರಲ್ಲಿ ನಡೆಸಿದ ಬಿಕಾಂ ಪರೀಕ್ಷೆಯಲ್ಲಿ ಮುರ್ಡೇಶ್ವರದ ಬೀನಾ ವೈದ್ಯ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ನೀಮ್ರ ತಕ್ರೀಂ ವಿಶ್ವವಿದ್ಯಾನಿಲಯಕ್ಕೆ 6ನೇ ರ್ಯಾಂಕ್ ಪಡೆದಿದ್ದಾರೆ

ನೀಮ್ರ ತಕ್ರೀಂ ಅನ್ವರ್ ಸಲೀಂ ಹಜೀಬ್ ಮತ್ತು ಆಯಿಶಾ ಮುಸ್ಸರತ್ ಅವರ ಪುತ್ರಿ. ಮೊದಲ ಸೆಮ್‌ನಲ್ಲಿ 90.28%, ದ್ವಿತೀಯದಲ್ಲಿ 91.71%, ತೃತೀಯದಲ್ಲಿ 95%, ನಾಲ್ಕನೇಯಲ್ಲಿ 98%, ಐದನೇಯಲ್ಲಿ 97% ಮತ್ತು ಅಂತಿಮ ಸೆಮ್‌ನಲ್ಲಿ 96.42 ಅಂಕಗಳನ್ನು ಗಳಿಸಿದ್ದಾಳೆ. ಒಟ್ಟು 96.24 % ನಲ್ಲಿ ಪಡೆದು ಸಾಧನೆ ಮಾಡಿದ್ದಾರೆ. ಬಿಕಾಂ  ಸ್ಟ್ರೀಮ್‌ನಲ್ಲಿ ಆರನೇ ಸ್ಥಾನದಲ್ಲಿದೆ.

ನೀಮ್ರ ಅವರು ನ್ಯೂ ಇಂಗ್ಲಿಷ್ ನ್ಯಾಷನಲ್ ಹೈಸ್ಕೂಲ್ ಮುರ್ಡೇಶ್ವರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 91.20% ಮತ್ತು ಭಟ್ಕಳದ ಅಂಜುಮನ್ ಕಾಲೇಜ್ ಫಾರ್ ವುಮೆನ್‌ನಿಂದ 97.83% ಅಂಕ ಗಳಿಸಿದ್ದಾರೆ. ಧಾರವಾಡದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಮಹಿಳೆಯರಿಗೆ ನಾಮ ಫಲಕ, ಇಂಗು ಗುಂಡಿ ತಯಾರಿಕೆ ತರಬೇತಿ. ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಆಲಂಬಾಷಾ

ರಾಯಚೂರು : ಜಿಲ್ಲೆಯ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ...