ಭಟ್ಕಳದ ಇಬ್ಬರ ಹೆಸರು ಹೆಲ್ತ್ ಬುಲೆಟಿನ್ ನಲ್ಲಿ ಎರಡು ಬಾರಿ ಪ್ರಕಟ

Source: sonews | By Staff Correspondent | Published on 18th May 2020, 6:34 PM | Coastal News | Don't Miss |

ಇದು ತಾಂತ್ರಿಕ ದೋಷವೋ ಅಥವಾ ವೈದ್ಯರ ನಿರ್ಲಕತ್ಷನವೋ?

ಭಟ್ಕಳ: ಭಟ್ಕಳದ ಇಬ್ಬರು ಕೊರೋನಾ ಸೋಂಕಿತರ ಹೆಸರು ಎರಡನೇ ಬಾರಿಗೆ ರವಿವಾರ ಸಂಜೆ ಹಾಗೂ ಸೋಮವಾರ ಮಧ್ಯಾಹ್ನದ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾಗಿದ್ದುಇದರಿಂದಾಗಿ ಭಟ್ಕಳದ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿರುವ ಘಟನೆ ನಡೆದಿದ್ದು ಇದು ತಾಂತ್ರಿಕ ದೋಷ ಎಂದು ಹೇಳಲಾಗುತ್ತಿದ್ದರೂ ಇಲಾಖೆಯ ನಿರ್ಲಕ್ಷತನವನ್ನು ಅಲ್ಲಗೆಳೆಯುವಂತಿಲ್ಲ ಎಂಬ ಮಾತುಗಳು ಇಲಾಖೆಯ ಒಳಗಿನವರಿಂದಲೇ ಕೇಳಿ ಬರತೊಡಗಿದೆ.

ರವಿವಾರ ಸಂಜೆ ಬಿಡಗಡೆ ಮಾಡಲಾಗಿರುವ ರಾಜ್ಯ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಪಿ-1147 ಎಂದು ಗುರುತಿಲಾಗಿರುವ 68 ವರ್ಷದ ವ್ಯಕ್ತಿ, ಕೊರೋನಾ ಸೋಂಕಿತೆ(ಪಿ-740)ಯ ತಂದೆಯಾಗಿದ್ದಾರೆ. ಇವರು ಈ ಮೊದಲೆ ಕೊರೋನಾ ಸೋಂಕಿತರಾಗಿದ್ದು ಮೇ.9 ರಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ (ಪಿ-783) ಸಂಖ್ಯೆಯಿಂದ ಗುರುತಿಸಲ್ಪಟ್ಟಿದ್ದಾರೆ.

ಇದೇ ರೀತಿಯ ಸೋಮವಾರದ ಹೆಲ್ತ್ ಬುಲೆಟಿನ್ ನಲ್ಲಿ 2ವರ್ಷದ ಮಗುವಿನ ವರದಿಯು ಪಾಸಿಟಿವ್ ಆಗಿದ್ದು (ಪಿ-1206)ಸಂಖ್ಯೆಯನ್ನು ಹೊಂದಿರುತ್ತದೆ, ಆದರೆ ಇದೇ ಮಗು ಮೇ 13 ರ ಹೆಲ್ತ್ ಬುಲೆಟಿನ್ ನಲ್ಲೋ ಕೊರೋನಾ ಪಾಸಿಟಿವ್ ಆಗಿದ್ದು(ಪಿ.929) ಸಂಖ್ಯೆಯನ್ನು ಹೊಂದಿರುತ್ತದೆ.
ಮೇಲ್ನೋಟಕ್ಕೆ ಇದೊಂದು ತಾಂತ್ರಿಕ ದೋಷದಿಂದುಂಟಾಗಿರುವ ಪ್ರಕರಣ ಎಂದೂ ಭಾವಿಸಿದ್ದರೂ ಕೂಡ ಕಳೆದ ದಿನಗಳಲ್ಲಿ ಈ ಎರಡು ವರದಿಗಳಿಗೆ ಸಂಬಂಧಿಸಿದಂತೆ ಇಲ್ಲಿನ ವೈದ್ಯರು ಹಲವು ಬಾರಿ ತಲೆಬಿಸಿ ಮಾಡಿಕೊಂಡಿದ್ದು ತುಂಬಾ ಗೊಂದಲದಲ್ಲಿದ್ದರು. ಆದ್ದರಿಂದಲೇ ಇಬ್ಬರ ಗಂಟಲು ದ್ರವದ ಮಾದರಿಯನ್ನು ಎರಡನೇ ಸಲ ಪರೀಕ್ಷೆಗೆ ಒಳಪಡಿಸಲಾಗಿದ್ದು ಮತ್ತೇ ಈ ಇಬ್ಬರ ವರದಿಯು ಪಾಸಿಟಿವ್ ಆಗಿ ಬಂದಿರುತ್ತದೆ. ಆದ್ದರಿಂದ ಈ ಇಬ್ಬರ ಹೆಸರು ಹೆಲ್ತ್ ಬುಲೆಟಿನ್ ನಲ್ಲಿ ಎರಡನೇ ಬಾರಿಗೆ ಪ್ರಕಟಗೊಂಡಿದ್ದು ಎಲ್ಲರನ್ನೂ ಗೊಂದಲಕ್ಕೀಡು ಮಾಡಿದೆ. ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳ ಕುರಿತು ಹಲವು ಊಹಾಪೂಹಗಳು ಕೇಳಿ ಬರುತ್ತಿದ್ದು ಪಾಸಿಟಿವ್ ಅಲ್ಲದೆ ವ್ಯಕ್ತಿಯನ್ನು ಪಾಸಿಟಿವ್ ಎಂದು ಹೇಳಿ ಆತನಿಗೆ ಕೋರೈಂಟೇನ್ ಮಾಡಿದ್ದು ನಂತರ ತಪ್ಪಿನ ಅರಿವಾಗಿ ಕೂಡಲೇ ಆತನನ್ನು ಮರಳಿ ಕಳುಹಿಸಿ ಅದೇ ಹೆಸರಿನ ಬೇರೊಬ್ಬ ಸೋಂಕಿತ ವ್ಯಕ್ತಿಯನ್ನು ಕೊರಂಟೈನ್ ಮಾಡಿದ್ದು ಇಬ್ಬರ ಗಂಟಲ ದ್ರವನ್ನು ಎರಡನೆ ಸಲ ಕಳುಹಿಸಿದ್ದು ಈಗ ಅದೇ ವ್ಯಕ್ತಿಯ ಹೆಸರು ಎರಡು ಸಲ ಆರೋಗ್ಯ ಬುಲೆಟಿನ್ ನಲ್ಲಿ ಪ್ರಕಟಗೊಂಡಿದೆ ಎಂದು ಹೇಳಲಾಗುತ್ತಿದೆ.  
ಈ ಕುರಿತಂತೆ ಸ್ಪಷ್ಟನೆ ನೀಡಿರುವ ನೋಡಲ್ ಆರೋಗ್ಯಾಧಿಕಾರಿ ಡಾ. ರಮೇಶ್ ನಾಯಕ ಇದು ಕೆಲ ತಾಂತ್ರಿಕ ಕಾರಣದಿಂದಾಗಿ ಉಂಟಾಗಿರುವ ದೋಷವಾಗಿದ್ದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟಗೊಂಡಿದೆ. ಇದನ್ನು ರಾಜ್ಯದ ಗಮನಕ್ಕೆ ತರುವುದರ ಮೂಲಕ ಜಿಲ್ಲಾಧಿಕಾರಿಗಳು ಸರಿಪಡಿಸುತ್ತಾರೆ ಎಂದಿದ್ದಾರೆ. 

ಜಿಲ್ಲೆಯಲ್ಲಿ ಹೆಚ್ಚಾದ ಸಕ್ರೀಯ ಸೋಂಕಿತರ ಸಂಖ್ಯೆ: ಸೋಮವಾರದ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟಗೊಂಡಿರುವ ಮಾಹಿತಿಯಂತೆ ಇಂದು ಜಿಲ್ಲೆಯಲ್ಲಿ 8 ಹೊಸ ಪ್ರಕರಣಗಳು ಪಾಸಿಟಿವ್ ಆಗಿದ್ದು(ಭಟ್ಕಳದ 2 ರಿಪೀಟ್ ಸೇರಿ)  ಉಳಿದಂತೆ ಹೊನ್ನಾವರ 4 ಹಾಗೂ ಮುಂಡಗೋಡದಲ್ಲಿ 2 ಹೊಸ ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಕೇವಲ ಭಟ್ಕಳದಲ್ಲಿ ಮಾತ್ರ ಕೊರೋನಾ ಸೋಂಕು ಹರಡುತ್ತಿದ್ದು ಇದೀಗ ಜಿಲ್ಲೆಯ ಭಟ್ಕಳ ಸೇರಿದಂತೆ ಹೊನ್ನಾವರ, ಕುಮಟಾ, ಹಾಗೂ ಮುಂಡಗೋಡ ತಾಲೂಕುಗಳನ್ನು ಆವರಿಸಿಕೊಂಡಿದ್ದು ಒಟ್ಟು 37ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ 30 ಪ್ರಕರಣಗೊಳೊಂದಿಗೆ ಭಟ್ಕಳ ಅಗ್ರ ಸ್ಥಾನದಲ್ಲಿದೆ 11 ಪ್ರಕರಣಗಳು ಗುಣಮುಖರಾಗಿ ಆರೋಗ್ಯದಿಂದ ಮನೆಯಲ್ಲಿದ್ದಾರೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...