ಮಹಿಳೆಯರಿಗೆ ನಾಮ ಫಲಕ, ಇಂಗು ಗುಂಡಿ ತಯಾರಿಕೆ ತರಬೇತಿ. ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಆಲಂಬಾಷಾ

Source: SO News | By Laxmi Tanaya | Published on 5th July 2022, 10:22 PM | State News | Don't Miss |

ರಾಯಚೂರು : ಜಿಲ್ಲೆಯ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಆಲಂಬಾಷ ಅವರು ಕರೆ ನೀಡಿದರು.        
 
 ಜಿಲ್ಲೆಯ ಮಾನವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ವತಿಯಿಂದ ಎನ್. ಆರ್. ಎಲ್. ಎಮ್. ಯೋಜನೆಯಡಿ ಆಯೋಜಿಸಿರುವ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ನಾಮಫಲಕ ಹಾಗೂ ಇಂಗು ಗುಂಡಿ ತಯಾರಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಹೆಚ್ಚು ಉಪಯೋಗವಾಗುವಂತಹ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮೀಣ ಭಾಗದ ಅದರಲ್ಲಿ ವಿಶೇಷವಾಗಿ ಮಹಿಳೆಯರನ್ನು ಹೆಚ್ಚು ಸ್ವಾವಲಂಬಿಗಳಾಗಿ ಮತ್ತು ಅವರ ಜೀವನೋಪಾಯ ನಿರ್ವಹಣೆಯಲ್ಲಿ ಸುಸ್ಥಿರವಾಗಿ ಅಭಿವೃದ್ಧಿಪಡಿಸುವುದಕ್ಕಾಗಿ ಇಂದು ಸ್ವ-ಸಹಾಯ ಮಹಿಳೆಯರಿಗೆ ನರೇಗಾದಡಿ ಅನುಷ್ಠಾನಗೊಳ್ಳುವ ಪ್ರತಿಯೊಂದು ಕಾಮಗಾರಿಗೂ ಒಂದು ನಾಮ ಫಲಕ ಅವಶ್ಯಕತೆ ಕಡ್ಡಾಯವಾಗಿದೆ ಎಂದರು.

ಇಂಗು ಗುಂಡಿ, ಚರಂಡಿ ನಿರ್ಮಾಣ ಮುಂತಾದ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತವೆ. ಇಂತಹ ಕಾಮಗಾರಿಗಳಿಗೆ  ನಾಮ ಫಲಕವನ್ನು ಮತ್ತು ಇನ್ನೀತರೆ ಮೇಸನ್ ತಯಾರಿಗಾಗಿ ನಮ್ಮ ಗ್ರಾಮೀಣ ಒಕ್ಕೂಟದ ಮಹಿಳೆಯರಿಂದ ತಯಾರಿ ಮಾಡಿಸಿ, ಅವರಲ್ಲಿ ಕೌಶಲ್ಯವನ್ನು ಹೆಚ್ಚಿಸುವುದರೊಂದಿಗೆ ಸುಸ್ಥಿರ ಅಭಿವೃದ್ಧಿ ಪಡಿಸುವ ಕಲ್ಪನೆಯಾಗಿದೆ ಎಂದು ಹೇಳಿದರು.

ಗ್ರಾಮ ಮಟ್ಟದಲ್ಲಿಯೇ ಇಂತಹವುಗಳನ್ನು ತಾವೇ ಉತ್ಪಾದನೆ ಮಾಡಿ, ಅವುಗಳನ್ನು ಅಲ್ಲಯೇ ಖರೀದಿ ಅಗುವುದರಿಂದಾಗಿ, ಉತ್ತಮವಾದ ಸಣ್ಣ ಉದ್ದೇಮೆದಾರರಾಗಿ ಅಭಿವೃದ್ದಿ ಹೊಂದಲು ಸಹಕಾರಿಯಾಗಲಿದೆ. ಇಂತಹ ತರಬೇತಿ ಕಾರ್ಯಾಗಾರದಲ್ಲಿ ಮಹಿಳೆಯರು ಹೆಚ್ಚು ಆಸಕ್ತಿಯಿಂದ ಭಾಗವಹಿಸಿ ಇದರ ಸಂಪೂರ್ಣ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.

ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಹೆಚ್ಚು ಅದರಲ್ಲಿ ವಿಶೇಷವಾಗಿ ಸ್ವ-ಸಹಾಯ ಗುಂಪಿನ ಮಹಿಳೆಯರು ಅಭಿವೃದ್ಧಿಗಾಗಿ ಸರಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ತಾವು ಆಸಕ್ತಿಯಿಂದ ಪಾಲ್ಗೊಂಡು ವೈಜ್ಞಾನಿಕವಾಗಿ ತರಬೇತಿ ಪಡೆದುಕೊಂಡು, ಅನುಭವಿ ವೈಕ್ತಿಗಳಾಗಿ, ಎನ್.ಆರ್.ಎಲ್.ಎಮ್ ಒಕ್ಕೂಟದ ಮಹಿಳೆಯರಿಂದ ಉದ್ಯಮಶೀಲರಾಗಿ ಸಂಘದ ಮಹಿಳೆಯರು ಲಾಭ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. 
 
ಈ ಸಂದರ್ಭದಲ್ಲಿ ಟಿಪಿಎಂ ಶಿವರಾಜ, ಐಇಸಿ ಸಂಯೋಜಕ ವಿರೇಶ್, ಸಿಎಸ್ ಸೂರತ್ ಪ್ರಸಾದ್ ಗಟ್ಟು, ತಾಂತ್ರಿಕ ಸಂಯೋಜಕ ಅಶೋಕ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಎಂಬಿಕೆ, ಎಲ್.ಸಿ.ಆರ್.ಪಿ ಸೇರಿದಂತೆ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರು ಭಾಗವಹಿಸಿದ್ದರು.

Read These Next

ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ; ಹಲವೆಡೆ ರಸ್ತೆ ಸಂಪರ್ಕ ಕಡಿತ: ಜನಜೀವನ ಅಸ್ತವ್ಯಸ್ತ

ಕೊಡಗು ಜಿಲ್ಲೆಯಲ್ಲಿ ಆಶ್ಲೇಷಾ ಮಳೆ ಆತಂಕವನ್ನು ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಮಳೆ ತೀವ್ರತೆಯನ್ನು ಪಡೆದುಕೊಂಡಿದ್ದು, ರೆಡ್ ...

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ; ಪ್ರಥಮ ರೆಂಕ ಅಭ್ಯರ್ಥಿ ಸಹಿತ ಎಂಟು ಮಂದಿ ಸೆರೆ

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಲಿಖಿತ ಪರೀಕ್ಷೆಯಲ್ಲಿ ಮೊದಲನೇ ರೇಂಕ್ ಬಂದಿದ್ದ ಅಭ್ಯರ್ಥಿ ಸೇರಿ ಎಂಟು ಮಂದಿಯನ್ನು ಸಿಐಡಿ ...

ಎದೆಹಾಲು ಮಕ್ಕಳಿಗೆ ಅಮೃತ ಸಮಾನ : ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ - ಡಾ.ಟಿ.ಎ. ಶೇಪೂರ

ಧಾರವಾಡ : ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಪ್ರತಿ ತಾಯಿಯು ತನ್ನ ಮಗುವಿಗೆ ತಪ್ಪದೇ ಎದೆಹಾಲು ಉಣಿಸಬೇಕು. ಇದರಿಂದ ಮಗುವಿನಲ್ಲಿ ...

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ. ಆಗಸ್ಟ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಚಿವ ಸಿ.ಸಿ.ಪಾಟೀಲ್ ಸೂಚನೆ

ಬಳ್ಳಾರಿ : ಶಾಸಕರ ಅನುದಾನದ ಕಾಮಗಾರಿಗಳು, ಎಚ್‍ಎಸ್‍ಡಿಪಿ, ಎಸ್‍ಸಿಪಿ-ಟಿಎಸ್‍ಪಿ ಸೇರಿದಂತೆ ಇಲಾಖೆಗೆ ನಿಗದಿಯಾಗಿರುವ ಎಲ್ಲಾ ಬಾಕಿ ...

ಎದೆಹಾಲು ಮಕ್ಕಳಿಗೆ ಅಮೃತ ಸಮಾನ : ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ - ಡಾ.ಟಿ.ಎ. ಶೇಪೂರ

ಧಾರವಾಡ : ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಪ್ರತಿ ತಾಯಿಯು ತನ್ನ ಮಗುವಿಗೆ ತಪ್ಪದೇ ಎದೆಹಾಲು ಉಣಿಸಬೇಕು. ಇದರಿಂದ ಮಗುವಿನಲ್ಲಿ ...

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ. ಆಗಸ್ಟ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಚಿವ ಸಿ.ಸಿ.ಪಾಟೀಲ್ ಸೂಚನೆ

ಬಳ್ಳಾರಿ : ಶಾಸಕರ ಅನುದಾನದ ಕಾಮಗಾರಿಗಳು, ಎಚ್‍ಎಸ್‍ಡಿಪಿ, ಎಸ್‍ಸಿಪಿ-ಟಿಎಸ್‍ಪಿ ಸೇರಿದಂತೆ ಇಲಾಖೆಗೆ ನಿಗದಿಯಾಗಿರುವ ಎಲ್ಲಾ ಬಾಕಿ ...

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದರೆ ಕಠಿಣ ಕ್ರಮ: ಎಸ್ಪಿ ಎನ್ ವಿಷ್ಣುವರ್ಧನ

ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ಪ್ರಚೋದನಕಾರಿ ...