ನವದೆಹಲಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಭಟ್ಕಳದ ನಾಗರಾಜ ಗೋಂಡ

Source: S.O. News Service | By MV Bhatkal | Published on 21st January 2021, 8:16 PM | Coastal News |

ಭಟ್ಕಳ: ಜ.26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ತಾಲೂಕಿನ ಹಾಡುವಳ್ಳಿ ಗ್ರಾಪಂ ಹಳ್ಯಾಣಿಯ 
ಹರ್ ಮಕ್ಕಿಮನೆ ನಾಗರಾಜ ದುರ್ಗಯ್ಯ ಗೊಂಡ ರಿಗೆ ಅವಕಾಶ ಲಭಿಸಿದೆ.
ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ನೀಡುವ ಸಂಬಂಧ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರು ಅರ್ಜಿ ಆಹ್ವಾನಿಸಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿರುವ ಹಾಗೂ ಬುಡಕಟ್ಟು ಸಾಂಸ್ಕೃತಿಕ ಕಲೆಯ ಹಿನ್ನೆಲೆ ಹೊಂದಿದ್ದ (ಗೊಂಡ ಸಮಾಜದ ಢಕ್ಕೆ ಕುಣಿತ) ನಾಗರಾಜ ಗೊಂಡ ಪಾಲ್ಗೊಳ್ಳಲಿರುವ ಭಟ್ಕಳದ ನಾಗರಾಜ ಗೊಂಡ ಅರ್ಜಿ ಸಲ್ಲಿಸಿದ್ದರು. ರಾಜ್ಯದ ವಿವಿದೆಡೆಯ 32 ಸಾವಿರಕ್ಕೂ ಅಧಿಕ ಆಸಕ್ತಿತರಲ್ಲಿ ಪರಿಶಿಷ್ಟ ಪಂಗಡದ ಪ್ರತಿನಿಧಿಯನ್ನಾಗಿ ನಾಗರಾಜ ಗೊಂಡ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಕೋ ಟೂರಿಸ್ಟ ವಾಹನ ಚಾಲಕ ವೃತ್ತಿಯನ್ನು ಹೊಂದಿರುವ ನಾಗರಾಜ, ಜ.21 ರಂದು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಫೆ.3ಕ್ಕೆ ವಾಪಸ್ಸಾಗಲಿದ್ದಾರೆ. 13 ದಿನಗಳ ಕಾಲ ದೆಹಲಿಯಲ್ಲಿಯೇ ತಂಗಲಿರುವ ಇವರು, ರಾಷ್ಟ್ರಪತಿ ಭವನ, ಸಂಸತ್ ಭವನ, ಪ್ರಧಾನಮಂತ್ರಿಗಳ ಕಚೇರಿ ಸೇರಿದಂತೆ ದೇಶದ ಪ್ರಮುಖ ಸ್ಥಳಗಳನ್ನು ಸಂದರ್ಶಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...