ನಾಗರಿಕರ ಹತ್ಯೆ 'ನರಮೇಧ', 'ಯುದ್ಧಾಪರಾಧ'ಕ್ಕೆ ಸಮಾನ ನಾಗಾಲ್ಯಾಂಡ್ ಬಿಜೆಪಿ ಆಕ್ರೋಶ

Source: VB | By I.G. Bhatkali | Published on 7th December 2021, 7:35 PM | National News |

ಹೊಸದಿಲ್ಲಿ: ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ ಭದ್ರತಾ ಪಡೆ ನಾಗರಿಕರ ಹತ್ಯೆ ನಡೆಸಿರುವುದನ್ನು ಬಿಜೆಪಿಯ ನಾಗಾಲ್ಯಾಂಡ್ ಘಟಕ “ಹತ್ಯಾಕಾಂಡ' ಎಂದು ಕರೆದಿದೆ. ಅಲ್ಲದೆ, ಇದು “ಯುದ್ಧಾಪರಾಧ' ಹಾಗೂ “ನರಮೇಧ'ಕ್ಕೆ ಸಮಾನವಾಗಿದೆ ಎಂದು ಹೇಳಿದೆ. ಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ ಪಿಎ)ಯನ್ನು ರದುಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ.

theprint'ನೊಂದಿಗೆ ಸೋಮವಾರ ಮಾತನಾಡಿದ ನಾಗಾಲ್ಯಾಂಡ್‌ನ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವ ತೇಮ್‌ಜೆನ್‌ ಇಮ್ಹಾ ಎಲೋಂಗ್, 14 ನಾಗರಿಕರ ಹತ್ಯಾಕಾಂಡಕ್ಕೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

“ಅಮಾಯಕ ಜನರು ಕೆಲಸ ಮುಗಿಸಿ ಹಿಂದಿರುಗುತ್ತಿದ್ದರು. ಅವರಲ್ಲಿ ಯಾವುದೇ ಆಯುಧಗಳು ಇರಲಿಲ್ಲ. ಗುಂಡು ಹಾರಿಸುವ ಮುನ್ನ ಸೇನೆ ಸೂಕ್ತ ಬೇಹುಗಾರಿಕೆ ಮಾಹಿತಿ ಸಂಗ್ರಹಿಸಿರಲಿಲ್ಲ. ಇದು ಶಾಂತಿ ಕಾಲದ ಯುದ್ಧಾಪರಾಧ ಹಾಗೂ ನರಮೇಧಕ್ಕೆ ಸಮಾನವಾಗಿದೆ' ಎಂದು ಎಲೋಂಗ್ ಹೇಳಿದರು.

“ಎಎಫ್‌ಎಸ್‌ಪಿಎಯ ಕಾರಣಕ್ಕೆ ರಾಜ್ಯದಲ್ಲಿ ಅಮಾಯಕ ಜನರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ತಿಂಗಳ ಹಿಂದೆ ಮಣಿಪುರದಲ್ಲಿ ನಡೆದ ಹೊಂಚು ದಾಳಿಯಲ್ಲಿ ಟಿಝಿಟ್ ಪ್ರದೇಶದ ನಮ್ಮ ಕೊನ್ಯಾಕ್ ನಾಗ ಜನರು ಹುತಾತ್ಮರಾದರು' ಎಂದು ಎಲೋಂಗ್ ಹೇಳಿದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...