ಜಾತ್ಯಾತೀತ ರಾಜ್ಯ ನಿರ್ಮಾಣಕ್ಕೆ ನಾಡಪ್ರಭು ಕೇಂಪೇಗೌಡ ನಿದರ್ಶನ : ಸಿಇಒ ರೋಶನ  

Source: sonews | By Staff Correspondent | Published on 27th June 2019, 6:03 PM | Coastal News |

ಕಾರವಾರ: ನಾಡಪ್ರಭು ಕೆಂಪೇಗೌಡ ಅವರು ಕೇವಲ ಬೆಂಗಳೂರು ನಿರ್ಮಾಣಕಾರನಾಗದೆ, ಸಾಂಸ್ಕøತಿಕ ರಾಯಭಾರಿಯಾಗಿ ತಮ್ಮ ಅಡಳಿತದಲ್ಲಿ ಎಲ್ಲಾ ಧರ್ಮ, ಜಾತಿಗಳ ಜನ ಸಮುದಾಯವನ್ನು ಒಟ್ಟೊಟ್ಟಿಗೇ ಅಭಿವೃದ್ಧಿಗೆ ತೊಡಗಿಸಿಕೊಂಡವರಾಗಿದ್ದರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಶನ ಅಭಿಪ್ರಾಯಪಟ್ಟರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಆಚರಿಸಲಾದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಕೆಂಪೇಗೌಡರು ಧರ್ಮ ನಿರಪೇಕ್ಷೀತ, ಜ್ಯಾತ್ಯಾತೀತ  ರಾಜ್ಯ ನಿರ್ಮಾಣ ಮಾಡಿದವರು. ಎಲ್ಲ ಜಾತಿ ಧರ್ಮದವರು ಶಾಂತಿಯುತವಾಗಿ ಜೊತೆಯಲ್ಲಿ ವಾಸಮಾಡಬೇಕೆಂಬ ಕನಸು ಕಂಡವರು. ಆ ನಿಟ್ಟಿನಲ್ಲಿ ಇಂದು ಬೆಂಗಳೂರು ಬೆಳೆದಿದ್ದು, ಅವರ ಕನಸು ನನಸಾಗಿದೆ. ಅದನ್ನು ಸಮರ್ಪಕವಾಗಿ ನಿಬಾಯಿಸಿಕೊಂಡು ಹೋಗಬೇಕಾಗಿರುವುದು ನಮ್ಮ ಕೆಲಸವಾಗಿದೆ ಎಂದರು.  

ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು  ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಬೆಂಗಳೂರನ್ನು ವಿಶ್ವ ಭೂ ಪಟದಲ್ಲಿ ಗುರುತಿಸಲಾಗುತ್ತಿದ್ದು, ಅಂದಾಜು 2 ಕೋಟಿ ಜನ ಬೆಂಗಳೂರನ್ನು ಅವಲಂಬಿಸಿದ್ದಾರೆ. ಇದಕ್ಕೆ ಕಾರಣ ಕೆಂಪೇಗೌಡರು, ನಾಡಪ್ರಭು ಕೆಂಪೇಗೌಡರು ಯೋಜಿತ ನಗರವನ್ನಾಗಿ ಮಾಡಿದರಲ್ಲದೇ ಯಾವುದೇ ಜಾತಿ ಧರ್ಮದವರು ಇಲ್ಲಿ ಬಂದು ಸಾಮರಸ್ಯದಿಂದ ವ್ಯಾಪಾರ ಉದ್ದಿಮೆ ಮಾಡುವಂತಹ ವಾತಾವರಣ ನಿರ್ಮಿಸಿದ್ದರು.  ಅವರು ಸಮಾಜಕ್ಕಾಗಿ ದುಡಿದವರು. ಅವರ ಕುಟುಂಬ ವರ್ಗದವರೂ ಕೂಡಾ ನಗರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೀಗೆ ಸಮಾಜಕ್ಕಾಗಿ ದುಡಿದಂತಹ ಮಹಾನ ವ್ಯಕ್ತಿಗಳನ್ನು ನಮ್ಮ ಮುಂದಿನ ಜನಾಂಗಕ್ಕೂ ಪರಿಚಯಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದರು.      

ಕಾರವಾರ ನಗರಸಭೆ ಆಯುಕ್ತ ಎಸ್. ಯೋಗೇಶ್ವರ ಅವರು  ಮಾತನಾಡಿ ನಗರಗಳ ನಿರ್ವಹಣೆ ಹೇಗೆ ಮಾಡಬೇಕೆಂಬುದನ್ನು   ನಾಡಪ್ರಭು ಕೆಂಪೇಗೌಡರು ತಿಳಿಸಿಕೊಟ್ಟವರು. ಉದ್ಯಾನಗಳು, ಕೆರೆ ಕುಂಟೆಗಳು, ಕೃಷಿ ಭೂಮಿ, ತೋಟಗಾರಿಕೆ ಕಸುಬುಗಳಾಧಾರಿತ ಪೇಟೆಗಳು, ಮಾರುಕಟ್ಟೆಗಳು,  ಉದ್ದಿಮೆಗಳು ಬೆಳೆಯಬೇಕೆಂಬ ದೂರದೃಷ್ಠಿಯಿಂದ ಯೋಜಿತ ನಗರ ನಿರ್ಮಾಣ ಮಾಡಿದ್ದರಿಂದ  ಇಂದು ಬೆಂಗಳೂರು ಸುಂದರ ಹಾಗೂ ಬೃಹತ ನಗರವಾಗಿ ಬೆಳೆದಿದೆ. ವಿಶ್ವದ ವೇಗದ ನಗರಗಳಲ್ಲಿ ಒಂದಾಗಿದೆ. ಕೆಂಪೆಗೌಡರು ಹಾಕಿ ಕೊಟ್ಟ ಮಾರ್ಗದಲ್ಲಿ ಇಂದು ನಾವು  ನಗರ ಬೆಳೆಸಬೇಕಾಗಿದೆ ಎಂದು ಹೇಳಿದರು. 

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ. ಸ್ವಾಗತಹಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಜಿಲ್ಲಾ ಆಯುಷ್ ಅಧಿಕಾರಿ  ಡಾ.ಲಲಿತಾ ಯು.ಹೆಚ್ ವೇಧಿಕೆ ಮೇಲೆ ಉಪಸ್ಥತರಿದ್ದರು. 

ಕಾರ್ಯಕ್ರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಭಾಗವಹಿಸಿದ್ದರು. 

ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹಧನ
ಕಾರವಾರ: ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲು ಹೆಕ್ಟೇರಿಗೆ 10 ಸಾವಿರ ರೂಪಾಯಿಗಳಂತೆ  2 ಹೆಕ್ಟರಗೆ ಸೀಮಿತಗೊಳಿಸಿ ಪ್ರೋತ್ಸಾಹಧನ ನೀಡಲು ಸರ್ಕಾರ ಉದ್ದೇಶಿಸಿ ಸಿರಿಧ್ಯಾನಗಳಾದ ಊದಲು, ನವಣೆ, ಹಾರಕ, ಕೋರಲೆ, ಸಾಮಡ ಮತ್ತು ಬರಗು ಬೆಳೆ ಬೆಳೆಯುವ ಜಿಲ್ಲೆಯ ರೈತರು ಅಗಸ್ಟ್ 10 ರೊಳಗೆ  “ ರೈತಸಿರಿಯಡಿ ” ಯೋಜನೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ.

ಪ್ರೋತ್ಸಾಹಧನವನ್ನು ಡಿಬಿಟಿ ಮುಂಖಾತರ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಂಪರ್ಕಿಸಬಹುದಾಗಿರುತ್ತದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಯಕ್ಷಗಾನ ತರಬೇತಿಗೆ ಅರ್ಜಿ ಅಹ್ವಾನ 
ಕಾರವಾರ: ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ 2019-20ನೇ ಸಾಲಿನಲ್ಲಿ 2 ತಿಂಗಳ ಯಕ್ಷಗಾನ ತರಬೇತಿ ಹಮ್ಮಿಕೊಂಡಿದ್ದು, ತರಬೇತಿಯಲ್ಲಿ ಯಕ್ಷಗಾನ ಕಲೆಗಳಾದ  ತೆಂಕುತಿಟ್ಟು, ಬಡಗುತಿಟ್ಟು. ಬಡಾಬಡಗುತ್ತಿಟ್ಟು ಹೇಳಿಕೊಡಲಾಗುವುದು.

ಆಸಕ್ತ ಕಲಾವಿದರು ಮತ್ತು ಕಲಾಸಂಸ್ಥೆಗಳು ಜೂಲೈ 15 ರೊಳಗೆ  ಅರ್ಜಿ ಸಲ್ಲಿಸಬೇಕು. ತರಬೇತಿಯನ್ನು 10 ಮಂದಿಗೆ ನೀಡಬಯಸುವ ಕಲಾವಿದರು ಅಥವಾ ಕಲಾಸಂಸ್ಥೆಗಳು ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು 560002 ಇಲ್ಲಿಗೆ ಕಳುಹಿಸಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ 080-22113146 ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ ಎ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...