ಮ್ಯಾನ್ಮಾರ್‌: ಆಂಗ್ ಸೂಕಿ ವಿರುದ ಚುನಾವಣೆ ವಂಚನೆ ಪ್ರಕರಣ ದಾಖಲು

Source: VB | By S O News | Published on 17th November 2021, 8:57 PM | Global News |

ಯಾಂಗಾನ್: 2020ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದಿದ್ದ ವಂಚನೆ ಎಸಗಿರುವ ಆರೋಪದಲ್ಲಿ ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಸಹಿತ 16 ಮಂದಿಯ ವಿರುದ್ದ ಅಲ್ಲಿನ ಸೇನಾಡಳಿತ ಪ್ರಕರಣ ದಾಖಲಿಸಿದೆ ಎಂದು ಮ್ಯಾನ್ಮಾರ್‌ನ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಸೂಕಿ, ಮಾಜಿ ಅಧ್ಯಕ್ಷ ಉ ವಿನ್ ಮಿಂಟ್, ಚುನಾವಣಾ ಆಯೋಗದ ಮಾಜಿ ಅಧ್ಯಕ್ಷರ ಸಹಿತ ತಂಡವೊಂದು 2020ರ ನವೆಂಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ವಂಚನೆ ಎಸಗಿದ ಜೊತೆಗೆ, ಕಾನೂನುಬಾಹಿರ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಚುನಾವಣೆಯಲ್ಲಿ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಈ 16 ಆರೋಪಿಗಳು 60 ವರ್ಷ ಮೀರಿದವರಿಗೆ ನಿಗದಿತ ದಿನದ ಮೊದಲೇ ಮತದಾನಕ್ಕೆ ಅವಕಾಶ, ಮತದಾನದ ಹಕ್ಕು ಇಲ್ಲದವರ ಹೆಸರನ್ನೂ ಮತಪತ್ರದಲ್ಲಿ ಸೇರಿಸಿರುವುದು ಮುಂತಾದ ಕೃತ್ಯದ ಮೂಲಕ ಚುನಾವಣೆಯ ನಿಯಮವನ್ನು ಉಲ್ಲಂಘಿ ಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಫೆ.1ರಂದು ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರ ಕೈವಶ ಮಾಡಿಕೊಂಡಿದ್ದ ಮ್ಯಾನ್ಮಾರ್ ಸೇನೆ ಆಂಗ್ ಸಾನ್ ಸೂಕಿಯನ್ನು ಬಂಧನದಲ್ಲಿಟ್ಟಿದ್ದು ಅವರ ವಿರುದ್ದ ಹಲವು ಪ್ರಕರಣ ದಾಖಲಿಸ ಲಾಗಿದೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...