ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮುಸ್ಲಿಮರ ಮೌನ ರ್ಯಾಲಿ

Source: sonews | By Staff Correspondent | Published on 22nd February 2019, 6:02 PM | State News |

ಶಿಡ್ಲಘಟ್ಟ : ಪಟ್ಟಣದಲ್ಲಿ ಜಾಮಿಯ ಮಸ್ಜಿದ್, ಮದೀನ ಮಸ್ಜಿದ್, ಮುಸ್ಲಿಂ ಜಮಾತ್ಗಳ ಒಕ್ಕೊಟ, ಮುಸ್ಲಿಂ ಯುವ ಸಂಘಟನೆಗಳ ಸಹಯೋಗದಲ್ಲಿ ನಗರದ ಸರ್ವ ಬಾಂಧವರ ವತಿಯಿಂದ ಜಮ್ಮೂ & ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಪಾಪಿ ಪಾಕಿಸ್ಥಾನದ ಜೈಶ್ ಉಗ್ರರ ಸಂಘಟನೆಯ ನೀಚ, ಪೈಶಾಚಿಕ ಕೃತ್ಯ ಖಂಡಿಸಿ ಹಾಗೂ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮುಸ್ಲಿಮರು ಮೌನ ರ್ಯಾಲಿ ನಡೆಸಿ,ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಟಿಪ್ಪು ಸರ್ಕಲ್ ನಿಂದ, ಅಶೋಕ ರಸ್ತೆ, ಬಸ್ನಿಲ್ದಾಣ,ಕೋಟೆ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿದ ನೂರಾರು ಮುಸ್ಲೀಮರು ಯೋಧರ ಮೇಲೆ ನಡೆದ ಪೈಶಾಚಿಕ ಉಗ್ರ ಕೃತ್ಯವನ್ನು ಸಾಮೂಹಿಕವಾಗಿ ಖಂಡಿಸಿದರು. ಭಾರತವೇ..!!  ನಾವು ಇದು ಹೇಗೆ ಸಹಿಸಲು ಸಾಧ್ಯ..? ಎಂಬ ಘೋಷ ವಾಕ್ಯದೊಂದಿಗೆ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಜಾಮಿಯಾ ಮಸ್ಜಿದ್ ಕಾರ್ಯದರ್ಶಿ ಹೈದರ್ ಅಲಿ ಮತ್ತು ಮದೀನ ಮಸ್ಜಿದ್ ಅಧ್ಯಕ್ಷರು ಹೆಚ್.ಎಸ್ ಫಯಾಜ಼್ ಅವರು ಉಗ್ರ ಕೃತ್ಯ ಖಂಡಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಕೂಡಲೇ ಹುತಾತ್ಮರ ಕುಟುಂಬಕ್ಕೆ ಸೂಕ್ತ ನೆರವು ನೀಡುವುದರ ಜೊತೆಗೆ ಉಗ್ರ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಕೊಂಡು ಉಗ್ರವಾದಿತ್ವವನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು. ಸಿಆರ್ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ನೀಚ ಕೃತ್ಯ.

ಉಗ್ರಗಾಮಿಗಳು ನಮ್ಮ ದೇಶ ಕಾಯುವ 48 ಸೈನಿಕರನ್ನು ಹತ್ಯೆ ಮಾಡಿದ್ದಾರೆ. ದುರ್ಘಟನೆಯಲ್ಲಿ ಮೃತರಾದ ಹುತಾತ್ಮ ಯೋಧರಿಗೆ ಇಲ್ಲಿನ ಎಲ್ಲ ಮುಸ್ಲೀಮರು, ದಲಿತರು ಹಾಗು ಸರ್ವಬಾಂಧವರು ಸೇರಿ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಭವಿಷ್ಯದಲ್ಲಿ ಇಂಥ ಘಟನೆಗಳು ಮತ್ತೇ ಮರುಕಳಿಸಬಾರದು.ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ಹುತಾತ್ಮ ವೀರ ಯೋಧ ಹೆಚ್. ಗುರು ಅವರ ಕುಟುಂಬಕ್ಕೆ ಮತ್ತು ಎಲ್ಲಾ ಮೃತ ಯೋಧರ ಕುಟುಂಬಗಳಿಗೆ ಸರ್ಕಾರ ಕನಿಷ್ಠ ತಲಾ ರೂ.5 ಕೋಟಿ, ಸ್ವಂತ ಜಮೀನು,ಕುಟುಂಬದ ಎಲ್ಲಾ ಸದಸ್ಯರಿಗೆ ಸರ್ಕಾರಿಯ ಉನ್ನತ ಹುದ್ದೆಯಲ್ಲಿ ನೌಕರಿ, ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮುಗಿಸುವವರೆಗೊ ತಗಲುವ ಕರ್ಚು ವೆಚ್ಚದ ಹೊಣೆ ಹೊತ್ತು ಸೂಕ್ತ ಪರಿಹಾರ ನೀಡಬೇಕು. ಹುತಾತ್ಮ ವೀರ ಯೋಧರಿಗೆ ವೀರ ಶೌರ್ಯ ಚಕ್ರ ಪ್ರಶಸ್ತಿ ನೀಡಬೇಕು, ಹುತಾತ್ಮರಾದ ವೀರ ಯೋಧರ ಹೆಸರಿನಲ್ಲಿ ರಾಜಕೀಯ ಮಾಡಿ ತಮ್ಮ ಪಕ್ಷಗಳ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವಂತಹ ರಾಜಕೀಯ ಪಕ್ಷಗಳ ಮೇಲೆ ನಿಷೇಧ ಹೇರಬೇಕು, ಭಯೊತ್ಪಾದರ ದಾಳಿಗೆ ಕಾರಣರಾದ ಉಗ್ರರ ನೀಚ ಕೃತ್ಯಕ್ಕೆ ತಕ್ಕ ಪಾಠ ಕಲಿಸಲು ಉಗ್ರರ ವಿರುದ್ಧ ಆದಷ್ಟು ಬೇಗ ಕಾರ್ಯಾಚರಣೆ ಪ್ರಾರಂಭಿಸಬೇಕು ಎಂದು ರಾಷ್ಟ್ರಪತಿಗಳಿಗೆ ಬರೆದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಯೂನಿಟಿ ಸಿಲ್ಸಿಲಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಮೂಹಮ್ಮದ್ ಅಸದ್ ಮನವಿ ಪತ್ರ ಓದಿ ತಹಸೀಲ್ದಾರಗೆ ಸಲ್ಲಿಸಿದರು. ಮದೀನ ಮಸ್ಜಿದ್ ಕಾರ್ಯದರ್ಶಿ ನಿಸಾರ ಅಹ್ಮದ,ಯೂನಿಟಿ ಸಿಲ್ಸಿಲಾ ಪದಾಧಿಕಾರಿಗಳು ಅಕ್ರಂ ಪಾಷ, ಸೈಯದ್ ತೌಫೀಕ್, ಮೊಹಮ್ಮದ್ ಫಾರೂಖ್, ಮುಜಮ್ಮಿಲ್, ಅಮೀರ್ ಪಾಶ, ಶಬ್ಬಿರ್ ಎಸ್.ಟಿ.ಎಸ್.ಎಸ್ ಮೌಲಾ, ಬಿಲಾಲ್ ಕಮೀಟಿ ಅತೀಖ್, ಬಾಬ,ಮೂಹಮ್ಮದ್ ಸಾದಿಖ್, ಅರ್ಶದ್, ದಲಿತ ಹಕ್ಕುಗಳ ಹೂರಾಟ ಸಮೀತಿ ಸದಸ್ಯರು ಮುನಿಕೃಷ್ಣ ಅಪ್ಪಿ, ನಾಗ ನರಸಿಂಹ, ಕೃಷ್ಣಮೂರ್ತಿ, ಸಿಲ್ಕ್ ರೀಲರ್ಸ್ ಅಸೂಸಿಯೇಶನ್ ಸದಸ್ಯರು ಅಕ್ಮಲ್ ಸಾಬ್, ಅನ್ಸರ್ ಪಾಷ, ಸಿಟಿಜನ್ ಸಿಲ್ಕ್ ಸೊಸೈಟಿಯ ಪದಾಧಿಕಾರಿಗಳು ಪಖ್ರೂದ್ದಿನ್ ಮುರ್ತುಜ಼್, ಕೂಹಿನೊರ್ ಟಿಪ್ಪು ತಾಲೀಂ ಮೈನಾರಿಟಿ ಟ್ರಸ್ಟ್ ಅಧ್ಯಕ್ಷ ಅಮ್ಜದ ನವಾಜ಼್ ಖಾನ್, ಗಫೊರ್ ಖಾನ್, ಅಕ್ರಮ್ ಪಾಷ,ಯೂಸುಫ್  ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...