ಭಟ್ಕಳದಲ್ಲಿ ಸಡಗರ ಸಂಭ್ರಮದೊಂದಿಗೆ ಮಳೆಯ ಮಧ್ಯೆ ಬಕ್ರೀದ್ ಆಚರಣೆ

Source: S.O. News Service | By I.G. Bhatkali | Published on 31st July 2020, 11:35 PM | Coastal News |

ಭಟ್ಕಳ: ಎಡೆಬಿಡದ ಮಳೆಯ ನಡುವೆ ತಾಲೂಕಿನ ಎಲ್ಲೆಡೆ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಸ್ಲಾಂ ಧರ್ಮೀಯರು ಶುಕ್ರವಾರ ಸಡಗರ ಸಂಭ್ರಮದೊಂದಿಗೆ ಆಚರಿಸಿದರು. 

ಕೋವಿಡ್-19 ಯಿಂದಾಗಿ ಈದ್ಗಾ ಮೈದಾನ್ ದಲ್ಲಿ ಸಾಮೂಹಿಕ ಪ್ರಾರ್ಥನೆ ಇರಲಿಲ್ಲ. ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ತಾಲೂಕಿನ ಸರಿಸುಮಾರು 20 ಜುಮ್ಮಾ ಮಸೀದಿಗಳಲ್ಲಿಸುರಕ್ಷಿತ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕಧರಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು.

ಇಲ್ಲಿನ ಜಾಮೀಯಾ ಮೊಹಲ್ಲಾದ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ, ಖಲೀಫಾ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಖಾಜಾ ಅಕ್ರಮಿ ಮದನಿ, ಮಗ್ದೂಮ್ ಜುಮ್ಮಾ ಮಸೀದಿಯಲ್ಲಿ ಮೌಲಾನಾ ನಿಯಾಮತುಲ್ಲಾ ಆಸ್ಕೇರಿ ನದ್ವಿ, ತಂಜೀಮ್ ಮಿಲ್ಲಿಯ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅನ್ಸಾರ್ ಖತೀಬ್ ಮದನಿ, ಮದೀನಾ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅಬೂಬಕ್ಕರ್ ಸಿದ್ದಿಕ್ ಖತೀಬ್ ನದ್ವಿ ಧಾರ್ಮಿಕ ಪ್ರವಚನ ನೀಡಿ, ಬಕ್ರೀದ್ ತ್ಯಾಗದ ಸಂಕೇತವಾಗಿದೆ.

ಬಲಿದಾನವು ಅಲ್ಲಾಹುನಿಗಾಗಿಯೇ ಹೊರತೂ ಯಾರನ್ನೂ ನೋಯಿಸಲಿಕ್ಕೆ ಅಲ್ಲ, ಧರ್ಮ ಪಾಲನೆಯೊಂದೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿದೆ ಎಂದರು. ಪ್ರಸಕ್ತವಾಗಿ ಜನರನ್ನು ಕಾಡುತ್ತಿರುವ ಕೊರೊನಾ ಕಾಯಿಲೆ ಜಗತ್ತಿನಿಂದ ತೊಲಗುವಂತೆ ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಳ್ಳಲಾಯಿತು.

ತಾಲೂಕಿನ ಎಲ್ಲೆಡೆ ಎಎಸ್ಪಿ ನಿಖಿಲ್ ಬಿ, ಸಿಪಿಐ ದಿವಾಕರ ಮಾರ್ಗದರ್ಶನದಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. 

Read These Next

ಮುಂಡಗೋಡ: ಜಾನಪದ ರಾಜ್ಯ ಪ್ರಶಸ್ತಿ ವಿಜೇತ ಸಹದೇವಪ್ಪ ನಡಿಗೇರ ಗೆ ಗಂಗಾಮತ ಸಮಾಜದಿಂದ ಸನ್ಮಾನ

ಮುಂಡಗೋಡ ನಗರ ಗಂಗಾಮತಸ್ಥ ಕುಲಬಾಂದವರು  ಭಾನುವಾರ ರಾಜ್ಯಮಟ್ಟದ ಜಾನಪದ ಅಕಾಡಮಿ ಪ್ರಶಸ್ತಿ ಗೆ ಭಾಜನರಾದ ಇಂದೂರ ಗ್ರಾಮದ  ಸಹದೇವಪ್ಪ ...

ದೇಶದ ರಕ್ಷಣೆ, ಭದ್ರತೆ ಕಾಪಾಡುವುದು ರಕ್ಷಣಾ ಸಚಿವರ ಕರ್ತವ್ಯ : ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ್

ಮಂಗಳೂರು : ದೇಶದ ರಕ್ಷಣೆ ಉದ್ದೇಶದಿಂದ ಭದ್ರತಾ ವಿಷಯ ಗೌಪ್ಯವಾಗಿರಬೇಕು. ದೇಶದ ಹೀನ ಕೃತ್ಯದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ...

ಸಿಎಂ ತವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಶಾಸಕ ಯು ಟಿ ಖಾದರ್ ಆರೋಪ.

ಮಂಗಳೂರು : ಸಿ.ಎಂ ತವರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇಲ್ಲವಾ. ಜನ ಸಾಮಾನ್ಯರ ಮರಳು ಗಾಡಿಯನ್ನ ವಶ ಪಡಿಸಿಕೊಳ್ಳತ್ತಾರೆ. ಆದರೆ ...